ನವದೆಹಲಿ: ಕೊರೊನಾ ವೈರಸ್ನ ಸಾಂಕ್ರಾಮಿಕದ ನಡುವೆ ಜನರಿಗೆ ಖುಷಿ ಕೊಡುವಂತಹ ಸಿಹಿ ಸುದ್ದಿ ಹೊರಬಿದ್ದಿದೆ.
ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಇಂದು 100 ರೂ.ಗಳಷ್ಟು ಇಳಿಸಿವೆ. 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ ಕಡಿತಗೊಳಿಸಲಾಗಿದೆ. ಪ್ರತಿ ಸಿಲಿಂಡರ್ ದರದಲ್ಲಿ 122 ರೂ. ಇಳಿಕೆ ಮಾಡಲಾಗಿದೆ. ಆದರೆ, 14.2 ಕೆ.ಜಿ ಸಿಲಿಂಡರ್ ದರಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.
ಇದನ್ನು ಓದಿ: ತೆರಿಗೆ ಪಾವತಿದಾರರ ಗಮನಕ್ಕೆ!: ಇಂದಿನಿಂದ 6 ದಿನ ಐಟಿ ಫೈಲಿಂಗ್ ಇ- ಪೋರ್ಟಲ್ ಬದಲು
ಈ ಎಲ್‌ಪಿಜಿ ಬೆಲೆ ಕಡಿತದ ನಂತರ, ಜೂನ್ 1ರಿಂದ ಪರಿಷ್ಕೃತ ಬೆಲೆ ಪ್ರತಿ ಸಿಲಿಂಡರ್‌ಗೆ 1473.50 ರೂ. ಆಗಲಿದೆ. ಈ ಹಿಂದೆ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್‌ಗೆ 1595.50 ರೂ.ಯಷ್ಟು ಇತ್ತು. ಮೇ ತಿಂಗಳಲ್ಲಿ ತೈಲ ಕಂಪನಿಗಳು ಎಲ್‌ಪಿಜಿ ಅನಿಲ ಬೆಲೆಯನ್ನು ಸಿಲಿಂಡರ್‌ಗೆ 45 ರೂ.ಗೆ ಇಳಿಸಿವೆ ಎಂದು ವರದಿಯಾಗಿದೆ.
ಎಲ್‌ಪಿಜಿ ಅನಿಲ ಬೆಲೆ ನಗರದಿಂದ ನಗರಕ್ಕೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರಿಗೆ ಹಾಗೂ ವ್ಯಾಟ್ಗೆ ಅನುಗುಣವಾಗಿ ಬದಲಾಗುತ್ತದೆ.