ನವದೆಹಲಿ: ಜಿಯೋ ಗ್ರಾಹಕರು ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದಿದ್ದು, ಇಂದಿನಿಂದ್ಲೇ ಜಿಯೋ ಫೈಬರ್ ಸಂಪರ್ಕ ಪಡೆದುಕೊಳ್ಳಬಹುದು.
ಜಿಯೋ ಸಿಮ್ ಮೂಲಕ ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಿದ್ದ ಮುಖೇಶ್ ಅಂಬಾನಿ ಇದೀಗ ಜಿಯೋ ಫೈಬರ್ ಮೂಲಕ ಮತ್ತೊಮ್ಮೆ ಅಂಥದ್ದೇ ಮ್ಯಾಜಿಕ್ ಮಾಡಲು ಸಿದ್ದರಾಗಿದ್ದಾರೆ.
ಜಿಯೋ ಫೈಬರ್ ಸಂಪರ್ಕ ಹೇಗೆ:
ಜಿಯೋ ವೆಬ್ಸೈಟ್ನಲ್ಲಿ ಜಿಯೋ ಫೈಬರ್ ಸಂಪರ್ಕಕ್ಕೆ ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ರಿಜಿಸ್ಟರ್ ಯಶಸ್ವಿಯಾದ ಬಳಿಕ ಜಿಯೋ ಕಂಪೆನಿ ಅರ್ಜಿಯನ್ನು ಪರಿಶೀಲಿಸುತ್ತದೆ. ಆ ಬಳಿಕ ರೂಟರ್ ನೀಡುತ್ತದೆ. ಇನ್ಸ್ಟಾಲ್ ಮಾಡಿದ ಎರಡು ಗಂಟೆಯಲ್ಲಿ ಜಿಯೋ ಫೈಬರ್ ಆ್ಯಕ್ಟಿವೇಟ್ ಆಗುತ್ತದೆ.
ಇನ್ಸ್ಟಾಲ್ ಚಾರ್ಜ್ ಎಷ್ಟು?
ಜಿಯೋ ಫೈಬರ್ ಇನ್ಸ್ಟಾಲೇಶನ್ ಸಂಪೂರ್ಣ ಉಚಿತ! ಆದರೆ ಜಿಯೋ ಫೈಬರ್ ರೂಟರ್ಗೆ ಸಂಸ್ಥೆ ₹2,500 ರೂ. ವಿಧಿಸುತ್ತದೆ. ಈ ಹಣವನ್ನು ಗ್ರಾಹಕರು ಯಾವುದೇ ಸಮಯದಲ್ಲಾದರೂ ಹಿಂಪಡೆಯಬಹುದು.
ಜಿಯೋ ಫೈಬರ್ ಪ್ಲಾನ್:
ಜಿಯೋ ಫೈಬರ್ ಸೇವೆಯ ಪ್ಲಾನ್ ಕಂಪೆನಿ ಇನ್ನೂ ಸಹ ಸಂಪೂರ್ಣ ಮಾಹಿತಿ ನೀಡಿಲ್ಲ. ಇಂದು ಎಲ್ಲ ವಿವರನ್ನು ತಮ್ಮ ವೆಬ್ಸೈಟ್ನಲ್ಲಿ ನೀಡುವ ಸಾಧ್ಯತೆ ಇದೆ. ಈಗಾಗಲೇ ಪ್ಲಾನ್ ₹700ರಿಂದ ಆರಂಭವಾಗಿ ₹1000ದವರೆಗೆ ಇರಲಿದೆ ಎಂದು ಜಿಯೋ ಹೇಳಿತ್ತು.
ಜಿಯೋ ಫೈಬರ್ ವೇಗ:
ಈಗಾಗಲೇ ಜಿಯೋ ಹೇಳಿಕೊಂಡಂತೆ 100Mbps ನಿಂದ 1Gbpsವರೆಗೆ ವೇಗವಿರಲಿದೆ. ಜೊತೆಗೆ ಈ ವೇಗ ಆಯಾ ಪ್ಲಾನ್ ಮೇಲೆ ಅವಲಂಬಿತವಾಗಿರಲಿದೆ ಎನ್ನುವುದನ್ನು ಜಿಯೋ ಉಲ್ಲೇಖಿಸಿತ್ತು.
ಜಿಯೋ ಫೈಬರ್ ಸೆಟಪ್ ಬಾಕ್ಸ್:
ಜಿಯೋ ವೆಲ್ಕಮ್ ಆಫರ್ನ ಅಡಿಯಲ್ಲಿ ಜಿಯೋ ಫಾರೆವರ್ ವಾರ್ಷಿಕ ಪ್ಲಾನ್ ಹೊಂದಿದವರು ಜಿಯೋ ಕಂಪೆನಿ ಉಚಿತವಾಗಿ HD/4K TV ಹಾಗೂ 4K STB ನೀಡಲಿದೆ.
ಆರಂಭದಲ್ಲೇ ಭಾರಿ ಡಿಮ್ಯಾಂಡ್!
ಜಿಯೋ ಫೈಬರ್ ಸೇವೆ ಇಂದಿನಿಂದ ಆರಂಭವಾಲಿದ್ದು ಈಗಾಗಲೇ ಈ ಸರ್ವೀಸ್ಗೆ ಉತ್ತಮ ಬೇಡಿಕೆ ಕಂಡುಬಂದಿದೆ. ತನ್ನ ಸೇವೆ ಆರಂಭಿಸುವ ದಿನದಂದು ದೇಶಾದ್ಯಂತ 2 ಕೋಟಿ ಮನೆಗಳನ್ನು ತಲುಪುವ ಗುರಿ ಹೊಂದಿತ್ತು. ಈ ಪ್ರಯತ್ನದಲ್ಲಿ ಜಿಯೋ ಭಾಗಶಃ ಯಶಸ್ವಿಯಾಗಿದ್ದು, ಈಗಾಗಲೇ ಒಂದೂವರೆ ಕೋಟಿ ಮಂದಿ ಜಿಯೋ ಫೈಬರ್ ಸಂಪರ್ಕ ಹೊಂದಲು ಆಸಕ್ತಿ ತೋರಿದ್ದಾರೆ.