ನವದೆಹಲಿ: ಐಪೋನ್ 11 ಸರಣಿಯ ಮೊಬೈಲ್ಗಳ ಮೂಲಕ ದಿಗ್ಗಜ ಮೊಬೈಲ್ ಸಂಸ್ಥೆ ಆ್ಯಪಲ್ ಮತ್ತೆ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಮುಂದಾಗಿದೆ. ಕೆಲ ವಾರಗಳ ಹಿಂದೆ ಅನಾವರಣವಾಗಿದ್ದ ಐಫೋನ್ 11 ಸರಣಿಯ ಮೊಬೈಲ್ಗಳು ಶುಕ್ರವಾರದಿಂದ ಭಾರತದಲ್ಲಿ ಲಭ್ಯವಾಗುತ್ತಿವೆ.
ಹಬ್ಬದ ಸಮಯ ಹಾಗೂ ಪ್ರಮುಖ ಆನ್ಲೈನ್ ತಾಣಗಳ ಭಾರಿ ಡಿಸ್ಕೌಂಟ್ ಸೇಲ್ ಸದ್ಯ ಐಫೋನ್ ಬೇಡಿಕೆ ಏರಿಕೆಗೆ ವರವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಸೆ. 27ರಂದು ಭಾರತದ ಪ್ರಮುಖ ನಗರಗಳಲ್ಲಿ ಐಫೋನ್ 11 ಸರಣಿಯ ಮೊಬೈಲ್ಗಳ ಖರೀದಿಗೆ ಗ್ರಾಹಕರು ಸರತಿ ಸಾಲಿನಲ್ಲಿದ್ದಿದ್ದು ಕಂಡುಬಂದಿದೆ. ದೆಹಲಿ, ಬೆಂಗಳೂರು ನಗರಗಳಲ್ಲಿ ಐಫೋನ್ ಪ್ರಿಯರು ದಿನವಿಡೀ ಕ್ಯೂನಲ್ಲಿ ನಿಂತು ಮೊಬೈಲ್ ಖರೀದಿ ಮಾಡಿದ್ದಾರೆ.
ಸೆ. 20ರಂದು ಮುಂಗಡ ಬುಕ್ಕಿಂಗ್ ತೆರೆದಿದ್ದ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ಉತ್ತಮ ರೆಸ್ಪಾನ್ಸ್ ಪಡೆದಿವೆ. ಮೂರೇ ದಿನದಲ್ಲಿ ಎರಡೂ ಆನ್ಲೈನ್ ತಾಣದಲ್ಲಿ ಐಫೋನ್ 11 ಸರಣಿಯ ಮೊಬೈಲ್ಗಳು ಔಟ್ ಆಫ್ ಸ್ಟಾಕ್ ಆಗಿದ್ದವು.
ಅಮೇಜಾನ್ ಹಾಗೂ ಫ್ಲಿಪ್ಕಾರ್ಟ್ ಎರಡರಲ್ಲೂ ಐಫೋನ್ ನೂತನ ಮೊಬೈಲ್ಗಳು ಒಂದಷ್ಟು ಡಿಸ್ಕೌಂಟ್ ಮೂಲಕ ಲಭ್ಯವಿವೆ. ಹೀಗಾಗಿ ಬೇಡಿಕೆ ಉತ್ತಮವಾಗಿದೆ ಎನ್ನುವ ಮಾತುಗಳೂ ಕೇಳಿಬಂದಿವೆ.
ಭಾರತದ ಹೊರತಾಗಿ ಐಫೋನ್ ಮೊಬೈಲ್ಗಳಿಗೆ ಉತ್ತಮ ಬೇಡಿಕೆ ಇರುವ ದೇಶವೆಂದರೆ ಅದು ಚೀನಾ. ಚೀನಾದಲ್ಲಿ ಭಾರತಕ್ಕೂ ಮುನ್ನವೇ ಸೇಲ್ ಆರಂಭವಾಗಿತ್ತು. ಆದರೆ ಚೀನಾದ ಮಂದಿ ಐಫೋನ್ ಹೊಸ ಮೊಬೈಲ್ ಮೇಲೆ ನೀರಸ ಪ್ರತಿಕ್ರಿಯೆ ತೋರಿದ್ದಾರೆ.