ನವದೆಹಲಿ: ದೇಶದ ಅತಿದೊಡ್ಡ ರಸಗೊಬ್ಬರ ತಯಾರಿಕಾ ಸಂಸ್ಥೆಯಾಗಿರುವ ಭಾರತೀಯ ರೈತ ರಸಗೊಬ್ಬರ ಸಹಕಾರಿ ಸಂಸ್ಥೆ(ಇಪ್ಲೋ) ಇದೀಗ ಜಗತ್ತಿನ ಮೊದಲ ನ್ಯಾನೊ ಯೂರಿಯಾ ಲಿಕ್ವಿಡ್(ಗೊಬ್ಬರ) ಪರಿಚಯಿಸಿದ್ದು, ಇದು ದ್ರವ ರೂಪದಲ್ಲಿದೆ. ಸಾಮಾನ್ಯವಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಯೂರಿಯಾ ಚೀಲಗಳಿಗಿಂತಲೂ ಶೇ. 10ರಷ್ಟು ಕಡಿಮೆ ಬೆಲೆಗೆ ಲಭ್ಯವಾಗಲಿರುವ ಈ ದ್ರವ ರೂಪದ ಯೂರಿಯಾ ಪರಿಸರ ಸ್ನೇಹಿಯಾಗಿದೆ.
ಗುಜರಾತ್ನ ಕಲೋಲ್ನಲ್ಲಿರುವ ನ್ಯಾನೊ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಈ ನ್ಯಾನೋ ಯೂರಿಯಾ ಅಭಿವೃದ್ಧಿಗೊಂಡಿದೆ. ಇಫ್ಕೋ ತಿಳಿಸಿರುವ ಪ್ರಕಾರ, ಹೊಸದಾಗಿ ಅಭಿವೃದ್ಧಿಗೊಂಡಿರುವ ಯೂರಿಯಾ, ಪರಿಸರ ಸ್ನೇಹಿ ಜತೆಗೆ ರೈತರಿಗೆ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದೆ. ಆಂತರಿಕ ತಂತ್ರಜ್ಞಾನದ ಮೂಲಕ ಈ ಗೊಬ್ಬರ ತಯಾರಾಗಿದ್ದು, ವಿಶ್ವದಲ್ಲೇ ಮೊದಲ ಪ್ರಯೋಗವಾಗಿದೆ. 500 ಮಿಲಿ ಲೀಟರ್ ಬಾಟಲಿಗೆ 240 ರೂ. ನಿಗದಿಪಡಿಸಲಾಗಿದೆ. ಇದರಲ್ಲಿ 40,000 ಸಾರಜನಕ ಇದ್ದು, ಹೆಚ್ಚಿನ ಪೋಷಕಾಂಶಗಳು ಇರಲಿವೆ.
ದೇಶಾದ್ಯಂತ ಈಗಾಗಲೇ 94ಕ್ಕೂ ಹೆಚ್ಚಿನ ವಿವಿಧ ಬೆಳಗಳ ಮೇಲೆ ನ್ಯಾನೊ ಯೂರಿಯಾ ಪ್ರಯೋಗ ಮಾಡಲಾಗಿದ್ದು, ಇಳುವರಿಯಲ್ಲಿ ಶೇ. 80ರಷ್ಟು ಏರಿಕೆ ಸಹ ಕಂಡು ಬಂದಿದೆ. ಇದನ್ನ ಎಲೆಗಳ ಮೇಲೆ ಸಿಂಪಡಣೆ ಮಾಡಬೇಕಾಗಿದೆ. ಇತರೆ ರಸಗೊಬ್ಬರಗಳಿಗೆ ಹೋಲಿಕೆ ಮಾಡಿದಾಗ ನ್ಯಾನೊ ಯೂರಿಯಾ ಪರಿಸರ ಸ್ನೇಹಿಯಾಗಿದೆ ಎಂದು ಇಫ್ಕೋ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಇದರಿಂದ ಪರಿಸರ ಕೂಡ ಕಲುಷಿತಗೊಳ್ಳುವುದಿಲ್ಲ ಎಂದು ಕಂಪನಿ ಮಾಹಿತಿ ನೀಡಿದೆ.
ಇದನ್ನೂ ಓದಿರಿ: IFFCOನಿಂದ ಪ್ರಪಂಚಗಳು ಮೊದಲ ನ್ಯಾನೊ ಯೂರಿಯಾ ದ್ರವ ಪರಿಚಯ : ಭಾರೀ ಇಳುವರಿ ನೀಡುತ್ತೆ ಈ ಲಿಕ್ವಿಡ್
ಪ್ರಮುಖವಾಗಿ 'ಆತ್ಮನಿರ್ಭರ ಭಾರತ್' ಮತ್ತು 'ಆತ್ಮನಿರ್ಭರ್ ಕೃಷಿ'ಗೆ ಅನುಗುಣವಾಗಿ ಕಲೋಲ್‌ನ ನ್ಯಾನೊ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.