ETV Bharat / business

ಡೀಸೆಲ್​ ದರ 14 ರೂ. ತಗ್ಗಿಸಿ ಜನರಿಗೆ ನೆರವಾಗಿ: ಇಂಧನ ಖಾತೆ ಮಾಜಿ ಕಾರ್ಯದರ್ಶಿ - ಪೆಟ್ರೋಲ್ ಬೆಲೆ

ಹೆಚ್ಚುವರಿ ಆದಾಯ ಗಳಿಸಲು ಸರ್ಕಾರವು ಪೆಟ್ರೋಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ 12 ರೂ. ಮತ್ತು ಡೀಸೆಲ್ ಮೇಲೆ 14 ರೂ.ಯನ್ನು 2020ರ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಎರಡು ಬಾರಿ ಹೆಚ್ಚಿಸಿದೆ.

petrol
petrol
author img

By

Published : Feb 15, 2021, 9:12 PM IST

ನವದೆಹಲಿ: ಇಂಧನ ಬೆಲೆಗಳು ಏರಿಕೆಯಾಗುತ್ತಿರುವುದರಿಂದ 2020 ರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಕೇಂದ್ರ ಸರ್ಕಾರವು ಪೆಟ್ರೋಲ್‌ ಮೇಲೆ ಲೀಟರ್‌ಗೆ 12 ರೂ. ಮತ್ತು ಡೀಸೆಲ್​ಗೆ 14 ರೂ.ಯಷ್ಟು ಪರಿಹಾರವನ್ನು ಜನಸಾಮಾನ್ಯರಿಗೆ ನೀಡಬೇಕಾಗಿತ್ತು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಸ್‌ಸಿ ಮಿಶ್ರಾ ಹೇಳಿದ್ದಾರೆ.

ಹೆಚ್ಚುವರಿ ಆದಾಯ ಗಳಿಸಲು ಸರ್ಕಾರವು ಪೆಟ್ರೋಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ 12 ರೂ. ಮತ್ತು ಡೀಸೆಲ್ ಮೇಲೆ 14 ರೂ.ಯನ್ನು 2020ರ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಎರಡು ಬಾರಿ ಹೆಚ್ಚಿಸಿದೆ ಎಂದರು.

ಇದಕ್ಕೆ ಸೇರ್ಪಡೆಯಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಹೆಚ್ಚುವರಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಪೆಟ್ರೋಲ್‌ಗೆ ₹ 2.5 ಮತ್ತು ಡೀಸೆಲ್‌ಗೆ ₹ 4 ವಿಧಿಸಿದ್ದಾರೆ.

ಇದನ್ನೂ ಓದಿ: ಕೋಲ್ ಇಂಡಿಯಾ ವಾರ್ಷಿಕ ವೆಚ್ಚ ಕುಸಿತ : 54,241 ಕೋಟಿ ರೂ.ಗೆ ಇಳಿಕೆ!

ಸುದ್ದಿ ಸಂಸ್ಥೆ ಜತೆ ಮಾತನಾಡಿದ ಮಿಶ್ರಾ ಅವರು, ಸರ್ಕಾರವು ಇಂಧನವನ್ನು ತೆರಿಗೆಗೆ ಸುಲಭವಾದ ಸರಕು ಎಂಬುದನ್ನು ಕಂಡುಕೊಂಡಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಎರಡೂ ಇಂಧನಕ್ಕೆ ತೆರಿಗೆ ವಿಧಿಸಲು ಮತ್ತು ತಮ್ಮ ನಾನಾ ಚಟುವಟಿಕೆಗಳಿಗೆ ಆದಾಯ ಹೆಚ್ಚಿಸಲು ಸಾಕಷ್ಟು ಸಂತೋಷವಾಗಿದೆ ಎಂದು ಕಿಡಿಕಾರಿದರು.

ಕಚ್ಚಾ ತೈಲ ಬೆಲೆಗಳು ಇಳಿಮುಖವಾಗಿದ್ದಾಗ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು ವಿಧಿಸಿದ ತೆರಿಗೆ ಹೆಚ್ಚಳ ಸಾಮಾನ್ಯಗೊಳಿಸಿದ ನಂತರ ತೆಗೆದುಹಾಕಲಾಗುವುದು ಎಂದು ನಾನು ನಿರೀಕ್ಷಿಸುತ್ತಿದ್ದೆ. ಈಗ ಕಚ್ಚಾ ತೈಲ ದರ ಬ್ಯಾರೆಲ್‌ಗೆ 60 ಡಾಲರ್​​ನಲ್ಲಿದೆ. ಸರ್ಕಾರವು ಪೆಟ್ರೋಲ್‌ ಮೇಲೆ ಪ್ರತಿ ಲೀಟರ್‌ಗೆ 12 ರೂ. ಮತ್ತು ಡೀಸೆಲ್‌ಗೆ 14 ರೂ. ಪರಿಹಾರ ನೀಡಬಹುದಿತ್ತು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.