ನವದೆಹಲಿ: ರೂಪಾಯಿ ಮೌಲ್ಯ ಕುಸಿತದ ನಡುವೆಯೂ ಮಂಗಳವಾರ ರಾಷ್ಟ್ರದ ರಾಜಧಾನಿಯಲ್ಲಿ ಚಿನ್ನದ ದರದಲ್ಲಿ 454 ರೂ.ಯಷ್ಟು ಏರಿಕೆಯಾಗಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹದ ದರವು 10 ಗ್ರಾಂ.ಗೆ 51,425 ರೂ.ಯಲ್ಲಿ ಮಾರಾಟ ಆಗುತ್ತಿತ್ತು. 454 ರೂ.ಯಷ್ಟು ಹೆಚ್ಚಳವಾಗಿ 51,879 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಬೆಲೆ ಕಿ.ಗ್ರಾಂ.ಗೆ 62,376 ರೂ.ನಿಂದ 751 ರೂ.ಯಷ್ಟು ಹೆಚ್ಚಳವಾಗಿ 63,127 ರೂ.ಗೆ ತಲುಪಿದೆ.
ದೆಹಲಿಯಲ್ಲಿ 24 ಕ್ಯಾರೆಟ್‌ಗಳ ಸ್ಪಾಟ್ ಚಿನ್ನದ ಬೆಲೆ ರೂಪಾಯಿ ಮೌಲ್ಯದ ಇಳಿಕೆಯ ಮಧ್ಯೆ 454 ರೂ.ಗಳಷ್ಟು ಏರಿಕೆಯಾಗಿದೆ" ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.
ದಿನದ ವಹಿವಾಟಿನಲ್ಲಿ ರುಪಾಯಿ ಆರಂಭಿಕ ಲಾಭ ಗಳಿಸಿತು. ಅಮೆರಿಕದ ಡಾಲರ್ ವಿರುದ್ಧ 17 ಪೈಸೆ 73.46 ರೂ.ಗೆ (ತಾತ್ಕಾಲಿಕ) ಇಳಿಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,910 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 24.25 ಡಾಲರ್‌ಗಳಷ್ಟಿದೆ.