ಮುಂಬೈ: ಕಳೆದ ಆಗಸ್ಟ್ ತಿಂಗಳಲ್ಲಿ ಸತತ ಏರಿಕೆ ದಾಖಲಿಸಿದ್ದ ಬಂಗಾರವು ಆಕ್ಟೋಬರ್ನಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಇಳಿಕೆ ಆಗುವ ಮುಖೇನ ಚಿನ್ನಾಭರಣ ಪ್ರಿಯರಲ್ಲಿ ದೀಪಾವಳಿಗೂ ಮುನ್ನ ಸಂತಸ ಮೂಡಿಸಿದೆ. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ ಬಂಗಾರದ ಬೆಲೆ ಶೇ 0.3ರಷ್ಟು ತಗ್ಗಿದೆ. ಪ್ರತಿ 10 ಗ್ರಾಂ ಚಿನ್ನವು ₹ 38,030 ಯಷ್ಟಾಗಿದೆ.
ಬುಧವಾರದ ಪೇಟೆಯಂದು ಶೇ 0.45ರಷ್ಟು ಏರಿಕೆ ಕಂಡಿದ್ದ ಚಿನ್ನದ ದರವು, ಇಂದು ಏಕಾಏಕಿ ಇಳಿಕೆಯಾಗಿದೆ. ಚಿನ್ನದ ನಡೆಯನ್ನು ಅನುಸರಿಸಿದ ಬೆಳ್ಳಿ ಕೂಡ ಶೇ 0.45ರಷ್ಟು ದರ ತಗ್ಗಿದೆ. ದೇಶಿ ಚಿನಿವಾರ ಪೇಟೆಯಲ್ಲಿ ಪ್ರತಿ ಕೆ.ಜಿ. ಬೆಳ್ಳಿ ₹ 45,090 ಗೆ ಖರೀದಿ ಆಗುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಶೇ 0.1ರಷ್ಟು ಏರಿಕೆಯಾಗಿ ಒಂದು ಔನ್ಸ್ 1,490.37 ಡಾಲರ್ ಹೆಚ್ಚಳವಾಗಿದೆ.