ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಮಂದ ಪ್ರವೃತ್ತಿಗೆ ಅನುಗುಣವಾಗಿ ಚಿನ್ನದ ಬೆಲೆಗಳು ಬುಧವಾರದ ವಹಿವಾಟಿನಂದು ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಮೇಲೆ 208 ರೂ. ಕುಸಿದು 44,768 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ ಗರಿಷ್ಠ 44,976 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಮತ್ತೊಂದೆಡೆ ಪ್ರತಿ ಕೆ.ಜಿ. ಬೆಳ್ಳಿ ಮೇಲೆ 602 ರೂ. ಹೆಚ್ಚಳವಾಗಿ 68,194 ರೂ.ಗೆ ಏರಿದೆ. ಈ ಹಿಂದೆ ಪ್ರತಿ ಕೆ.ಜಿ.ಗೆ 67,592 ರೂ.ಯಷ್ಟಿತ್ತು.
ಇದನ್ನೂ ಓದಿ: ನಿತ್ಯ 4 km ಶಾಲೆಗೆ ನಡೆದು, ಮನೇಲಿ ಕರೆಂಟಿಲ್ಲದೆ ಮರದಡಿ ಓದಿದ್ದ ಹಳ್ಳಿ ಹೈದ ಈಗ 10ನೇ ಆಗರ್ಭ ಶ್ರೀಮಂತ!
ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಸ್ಪಾಟ್ ಬೆಲೆ 208 ರೂ.ಗಳಷ್ಟು ಕುಸಿದವು. ಡಾಲರ್ ಎದುರು ರೂಪಾಯಿ ಮೌಲ್ಯವು 45 ಪೈಸೆಗಳಷ್ಟು ಬಲವಾಗಿ ವಹಿವಾಟು ನಡೆಸಿತ್ತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,730 ಡಾಲರ್‌ಗೂ ಕಡಿಮೆ ವಹಿವಾಟು ನಡೆಸುತ್ತಿದ್ದು, ಬೆಳ್ಳಿ ಸಹ ಔನ್ಸ್‌ಗೆ 26.68 ಡಾಲರ್‌ಗೆ ಇಳಿದಿದೆ.