ನವದೆಹಲಿ: ಚಿನ್ನದ ಫ್ಯೂಚರ್ ದರವು ಮಂಗಳವಾರದ ವಹಿವಾಟಿನಂದು ಪ್ರತಿ 10 ಗ್ರಾಂ. ಮೇಲೆ ಶೇ 1.61 ರಷ್ಟು ಕುಸಿದು 54,063 ರೂ.ಗೆ ತಲುಪಿದೆ.
ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ 1,623 ಲಾಟ್‌ಗಳ ವ್ಯವಹಾರ ವಹಿವಾಟಿನಲ್ಲಿ ಅಕ್ಟೋಬರ್ ವಿತರಣೆಯ ಚಿನ್ನದ ಬೆಲೆಯು 10 ಗ್ರಾಂಗೆ 883 ಅಥವಾ ಶೇ 1.61ರಷ್ಟು ಇಳಿಕೆಯಾಗಿದೆ.
ಡಿಸೆಂಬರ್ ವಿತರಣೆಯ ಹಳದಿ ಲೋಹವು 1,334 ಲಾಟ್‌ಗಳಲ್ಲಿ 10 ಗ್ರಾಂ.ಗೆ 820 ರೂ. ಅಥವಾ 1.49ರಷ್ಟು ಇಳಿಕೆಯಾಗಿದೆ. ನ್ಯೂಯಾರ್ಕ್ನಲ್ಲಿ ಪ್ರತಿ ಔನ್ಸ್ ಚಿನ್ನವು ಶೇ 1.86ರಷ್ಟು ಇಳಿಕೆಯಾಗಿ 2,001.80 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.