ನವದೆಹಲಿ: ಅಮೆರಿಕದ ಕಚ್ಚಾ ತೈಲವು ಸೋಮವಾರದ ವಹಿವಾಟಿನಂದು ಪ್ರತಿ ಬ್ಯಾರೆಲ್‌ಗೆ 37.63 ಡಾಲರ್‌ಗಳಷ್ಟು ಐತಿಹಾಸಿಕ ಮಟ್ಟಕ್ಕೆ ಇಳಿದಿದೆ. ಆದರೆ, ಭಾರತದ ಇಂಧನ ಚಿಲ್ಲರ ಮಾರುಕಟ್ಟೆಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಯಿಲ್ಲ.
ದರ ಕುಸಿದದ್ದು ಏಕೆ?
ವಿಶ್ವದ ಅನೇಕ ರಾಷ್ಟ್ರಗಳು ದಿಗ್ಬಂಧನ ವಿಧಿಸಿರುವ ಹಿನ್ನೆಲ್ಲೆಯಲ್ಲಿ ತೈಲ ಬೆಲೆ ಬ್ಯಾರೆಲ್‌ಗೆ 1 ಡಾಲರ್ಗೂ ಕಡಿಮೆ ಆಗಿದೆ. ಅಮೆರಿಕಾದ ವೆಸ್ಟ್ ಟೆಕ್ಸಾಸ್ ಮಧ್ಯಂತರ (ಡಬ್ಲ್ಯುಟಿಐ) ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 1 ಡಾಲರ್‌ಗಿಂತ ಕಡಿಮೆ ಮಟ್ಟದಲ್ಲಿ ಕ್ಷೀಣಿಸಿದೆ. ವೈರಸ್ ನಿಯಂತ್ರಣಕ್ಕೆ ಆ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೇಡಿಕೆ ಕಳೆದುಕೊಂಡ ಪ್ರಯುಕ್ತ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.
ಭಾರತದಲ್ಲಿ ಬೆಲೆ ಏಕೆ ಇಳಿಯುದಿಲ್ಲ?
ಭಾರತ ಸಂಪೂರ್ಣವಾಗಿ ಒಮಾನ್, ದುಬೈ ಮತ್ತು ಬ್ರೆಂಟ್ ಕಚ್ಚಾ ತೈಲವನ್ನು ಅವಲಂಭಿಸಿದೆ. ಅಮೆರಿಕದ ವೆಸ್ಟ್ ಟೆಕ್ಸಾಸ್ ಮಧ್ಯಂತರ (ಡಬ್ಲ್ಯುಟಿಐ) ಅಲ್ಲ. ಡಬ್ಲ್ಯುಟಿಐ ಪ್ರತಿ ಬ್ಯಾರೆಲ್ ಬೆಲೆ 37.63 ಡಾಲರ್‌ಗಳಷ್ಟು ಕುಸಿದಿದೆ. ಈ ಡಬ್ಲ್ಯುಟಿಐ ಅಮೆರಿಕ, ಕೆನಡಾ ಮತ್ತು ಮೆಕ್ಸಿಕನ್ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರುತ್ತದೆ. ಭಾರತ ಖರೀದಿಸುವ ಬ್ರೆಂಟ್ ಕಚ್ಚಾ ತೈಲ ಬೆಲೆಯಲ್ಲಿ ಸುಮಾರು ಶೇ 5ರಷ್ಟು ಕುಸಿತ ಕಂಡಿದೆ. ಬೆಲೆಯು ಈಗಲೂ ಪ್ರತಿ ಬ್ಯಾರೆಲ್‌ಗೆ 27 ಡಾಲರ್ನಷ್ಟಿದೆ. ಅಮೆರಿಕದ ತೈಲ ಮಾನದಂಡ ಡಬ್ಲ್ಯುಟಿಐನಂತೆ ಅಗ್ಗವಾಗಿಲ್ಲ.
ಭಾರತದ ತೈಲ ಸಂಗ್ರಹ ಸಾಮರ್ಥ್ಯ ಎಷ್ಟಿದೆ?
ನಕರಾತ್ಮಕವಾದ ಡಬ್ಲ್ಯುಟಿಐ ತೈಲ ಖರೀದಿಸಿದ್ದರೂ ಆ ತೈಲವನ್ನು ಸಂಗ್ರಹಿಸಲು ಭಾರತದಲ್ಲಿ ಸಾಕಷ್ಟು ದಾಸ್ತಾನು ಸಾಮರ್ಥ್ಯವಿಲ್ಲ. ಭಾರತವು 15 ದಶಲಕ್ಷ ಟನ್‌ಗಳಷ್ಟು ಆಯಕಟ್ಟಿನ ತೈಲ ನಿಕ್ಷೇಪ ಸಂಗ್ರಹಿಸುತ್ತದೆ. ಪ್ರಸ್ತುತ, ಶೇಖರಣೆಗೆ ಲಭ್ಯವಿರುವ ಒಟ್ಟು ಸಾಮರ್ಥ್ಯ ಕೇವಲ 5.33 ಮಿಲಿಯನ್ ಟನ್ (9.7 ದಿನಗಳ ಅಗತ್ಯಕ್ಕೆ ಆಗುವಷ್ಟು). ಹೆಚ್ಚಿನ ಸಾಮರ್ಥ್ಯಕ್ಕೆ ಇನ್ನೂ ಸಿದ್ಧವಾಗಿಲ್ಲ. ಭಾರತದಲ್ಲಿ ಕೊರೊನಾ ವೈರಸ್ ಲಾಕ್‌ಡೌನ್ ಮುಂದುವರಿದಿದೆ. ಯಾವುದೇ ಆರ್ಥಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಕೈಗಾರಿಕೆಗಳಿಂದ ತೈಲಕ್ಕೆ ಗಮನಾರ್ಹ ಬೇಡಿಕೆ ಕುಸಿದಿದೆ. ಭಾರತೀಯ ರಿಫೈನರ್‌ಗಳಲ್ಲಿ ಈಗಾಗಲೇ ಸಾಕಷ್ಟು ಸ್ಟಾಕ್ ಇದೆ.
ಭಾರತೀಯ ಗ್ರಾಹಕರಿಗೆ ತೆರಿಗೆ ಹೊರೆ:
ಭಾರತದಲ್ಲಿ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಹುಪಾಲು ಭಾಗ ತೆರಿಗೆಗಾಗಿ ತೆರುತ್ತಿದ್ದಾರೆ. ಪೆಟ್ರೋಲ್‌ನ ಅಬಕಾರಿ ಸುಂಕ ಲೀಟರ್‌ಗೆ 22.98 ರೂ.ಗಳಷ್ಟಿದೆ. ಡೀಸೆಲ್ ಮೇಲೆ 18.83 ರೂ. ಇದೆ. ಏಪ್ರಿಲ್ 2014ರಿಂದ ಪೆಟ್ರೋಲ್ ಮೇಲಿನ ಸುಂಕದಲ್ಲಿ ಶೇ142ರಷ್ಟು ಹೆಚ್ಚಳ ಆಗಿದ್ದರೇ ಡೀಸೆಲ್ ಮೇಲೆ ಶೇ 318ರಷ್ಟು ಏರಿಕೆಯಾಗಿದೆ.
ದರ ಇಳಿಕೆಯ ಮಧ್ಯೆ ಸುಂಕ ಏರಿಕೆ:
ಕಳೆದು ತಿಂಗಳು ಕಚ್ಚಾ ತೈಲ ಬೆಲೆ ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದ ನಂತರವೂ ಸರ್ಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು 3 ರೂ.ಯಷ್ಟು ಹೆಚ್ಚಿಸಿದೆ. ಇತ್ತೀಚೆಗೆ ಲೀಟರ್ ಮೇಲೆ 8 ರೂ. ಏರಿಕೆ ಮಾಡಲು ಸಂಸತ್ತು ಅನುಮೋದನೆ ನೀಡಿದೆ. ಹೆಚ್ಚುವರಿ ಅಬಕಾರಿ ಸುಂಕವಾಗಿ ಸಂಗ್ರಹಿಸುವ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ನಲ್ಲಿ ಪ್ರತಿ ಲೀ. 1 ರೂ.ಯಷ್ಟಿದೆ. ವಿಶೇಷ ಅಬಕಾರಿ ಸುಂಕ 2 ರೂ. ಪಡೆಯಲಾಗುತ್ತಿದೆ.
ಇಂದಿನ ಚಿಲ್ಲರೆ ತೈಲ ದರ ಎಷ್ಟು?
ಭಾರಿ ಆದಾಯದ ಕೊರತೆಯನ್ನು ಎದುರಿಸುತ್ತಿರುವ ಕೇಂದ್ರಕ್ಕೆ ಹೆಚ್ಚು ಅಗತ್ಯವಿರುವ ತೆರಿಗೆ ಲಾಭವನ್ನು ತೈಲದ ಮೇಲಿನ ತೆರಿಗೆ ಒದಗಿಸುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ರಾಷ್ಟ್ರ ರಾಜಧಾನಿಯಲ್ಲಿ ಲೀಟರ್ ಮೇಲೆ ಪ್ರಸ್ತುತ, ಕ್ರಮವಾಗಿ 69.59 ರೂ. ಮತ್ತು 62.29 ರೂ. ದರದಲ್ಲಿ ಮಾರಾಟ ಆಗುತ್ತಿದೆ.