ETV Bharat / business

ದೀಪಾವಳಿ ಹೊಸ ವರ್ಷದಂದು ನಡೆಯಲಿದೆ ಮುಹೂರ್ತ ವಹಿವಾಟು: ಏನಿದು?

ಮುಹೂರ್ತ ಟ್ರೇಡಿಂಗ್​ ವೇಳೆ ಹೂಡಿಕೆದಾರರು ದೀರ್ಘ ಕಾಲಕ್ಕಾಗಿ ಷೇರುಗಳನ್ನು ಖರೀದಿಸುತ್ತಾರೆ. ಮುಂಬೈ ಷೇರು ಮಾರುಕಟ್ಟೆಯ ಬಿಎಸ್​​ಇ ಹಾಗೂ ಎನ್​​ಎಸ್​ಇ ನವೆಂಬರ್​ 14ರ ಸಂಜೆ 6.15ರಿಂದ 7.15ರವರೆಗೆ ವಿಶೇಷ ಟ್ರೇಡಿಂಗ್​​ಗಾಗಿ ತೆರೆದುಕೊಳ್ಳುತ್ತಿವೆ. ಹಿಂದೂ ಪಂಚಾಂಗ ಸಂವತ್ಸರ 2076 ಕೊನೆಗೊಂಡು ನಾಳೆಯಿಂದ 2077ನೇ ಸಂವತ್ಸರ ಆರಂಭವಾಗಲಿದೆ.

diwali
ದೀಪಾವಳಿ
author img

By

Published : Nov 13, 2020, 8:32 PM IST

Updated : Nov 14, 2020, 6:09 AM IST

ಮುಂಬೈ: ದೇಶಾದ್ಯಂತ ಬೆಳಕಿನ ಹಬ್ಬವಾದ ದೀಪಾವಳಿ ಆಚರಿಸಲಾಗುತ್ತಿದ್ದು, ಇದೇ ದಿನ ಮುಂಬೈ ಷೇರುಪೇಟೆಯಲ್ಲಿ ವಿಶೇಷ ವಹಿವಾಟು 'ಮುಹೂರ್ತ ಟ್ರೇಡಿಂಗ್' ನಡೆಯುತ್ತದೆ.

ಮುಹೂರ್ತ ಟ್ರೇಡಿಂಗ್​ ವೇಳೆ ಹೂಡಿಕೆದಾರರು ದೀರ್ಘ ಕಾಲಕ್ಕಾಗಿ ಷೇರುಗಳನ್ನು ಖರೀದಿಸುತ್ತಾರೆ. ಮುಂಬೈ ಷೇರು ಮಾರುಕಟ್ಟೆಯ ಬಿಎಸ್​​ಇ ಹಾಗೂ ಎನ್​​ಎಸ್​ಇ ನವೆಂಬರ್​ 14ರ ಸಂಜೆ 6.15ರಿಂದ 7.15ರವರೆಗೆ ವಿಶೇಷ ಟ್ರೇಡಿಂಗ್​​ಗಾಗಿ ತೆರೆದುಕೊಳ್ಳುತ್ತಿವೆ. ಹಿಂದೂ ಪಂಚಾಂಗ ಸಂವತ್ಸರ 2076 ಕೊನೆಗೊಂಡು ನಾಳೆಯಿಂದ 2077ನೇ ಸಂವತ್ಸರ ಆರಂಭವಾಗಲಿದೆ.

ಮುಹೂರ್ತ ಟ್ರೇಡಿಂಗ್ ಸಂಬಂಧಿತ ಸಮಯ:

  • ಪೂರ್ವ-ಮುಕ್ತ ಮುಹೂರ್ತ ಟ್ರೇಡಿಂಗ್​ ಸೆಷನ್​: ಸಂಜೆ 6:00 - 6:08ರ ತನಕ
  • ಮಹೂರ್ತ ವ್ಯಾಪಾರ ಟ್ರೇಡಿಂಗ್ ಸೆಷನ್​​: ಸಂಜೆ 6:15 - ಸಂಜೆ 7:15ರ ತನಕ
  • ಒಪ್ಪಂದದ ಟ್ರೇಡಿಂಗ್​ ಸೆಷನ್​: ಸಂಜೆ 5:45 - ಸಂಜೆ 6:00ರ ತನಕ
  • ಕರೆ ಹರಾಜು ಸೆಷನ್​: ಸಂಜೆ 6:20 - 7:05ರ ತನಕ
  • ಮುಕ್ತಾಯ ಬಳಿಕ ಮುಹೂರ್ತ ಸೆಷನ್​: ಸಂಜೆ 7:25 - ಸಂಜೆ 7:35ರ ತನಕ

ಬ್ರೋಕರೇಜ್ ಹೌಸ್ ಏಂಜಲ್ ಬ್ರೋಕಿಂಗ್ ಲಿಮಿಟೆಡ್ ಕಂಡುಕೊಂಡಂತೆ ಕಳೆದ 15 ಮುಹೂರ್ತ ವಹಿವಾಟಿನ ಅವಧಿಗಳಲ್ಲಿ ಷೇರು ಮಾರುಕಟ್ಟೆಗಳು ಗ್ರೀನ್​ ಬಣ್ಣದಲ್ಲಿ ವಹಿವಾಟು ನಡೆಸಿದ್ದವು. ಕೊರೊನಾ ವೈರಸ್ ಪ್ರೇರಿತ ಮಂದಗತಿ ಮಾರುಕಟ್ಟೆಗಳು ಈಗ ಚೇತರಿಸಿಕೊಂಡಿವೆ. ಈ ವರ್ಷದ ಮುಹೂರ್ತ ವಹಿವಾಟು ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಹೊಸ ಬಂಡವಾಳ ತಂತ್ರದೊಂದಿಗೆ ಪುನರಾರಂಭಿಸಲು ಸರಿಯಾದ ಸಮಯವೆಂದು ಸಾಬೀತುಪಡಿಸಬಹುದು. 2019ರ ಮುಹೂರ್ತ ಟ್ರೇಡಿಂಗ್​ನಲ್ಲಿ ಸೆನ್ಸೆಕ್ಸ್​ 200 ಅಂಕ ಜಿಗಿತ ದಾಖಲಿಸಿತ್ತು.

Last Updated : Nov 14, 2020, 6:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.