ನವದೆಹಲಿ: ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಸಮರ ತಾರಕಕ್ಕೆ ಏರಿದ್ದು, ಭಾರತದಲ್ಲಿ ಚೀನಾ ಬಂಡವಾಳ ಹೂಡಿಕೆಯ ವ್ಯಾಪ್ತಿ ವಿಸ್ತರಿಸಲಿದೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳಿದ್ದಾರೆ.
ಮುಂದಿನ ತಿಂಗಳು ಜಪಾನ್ನಲ್ಲಿ ನಡೆಯಲಿರುವ ಜಿ- 20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ವಿಶ್ವದ ಅತಿದೊಡ್ಡ ಆರ್ಥಿಕ ರಾಷ್ಟ್ರಗಳ ಪ್ರಸ್ತುತ ವಿದ್ಯಮಾನಗಳನ್ನು ಗುರಿಯಾಗಿಸಿಕೊಂಡು ಹಿಂಬಾಲಕರ ಪ್ರಶ್ನೆಗಳಿಗೆ ಉತ್ತರಿಸಿ ಸರಣಿ ಟ್ವೀಟ್ ಮಾಡಿದ್ದಾರೆ. ಒಂದು ವೇಳೆ ಮಾತುಕತೆ ಫಲಪ್ರದವಾದರೂ ಸಹ ಅಮೆರಿಕಕ್ಕೆ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತಿರುವ ಚೀನಾ, ತನ್ನ ಉತ್ಪಾದನೆಯ ಕೌಶಲ್ಯಗಳನ್ನು ಉಪಖಂಡ ಭಾರತಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಾಷಿಂಗ್ಟನ್ ಚೀನಾದಿಂದ ಆಮದಾಗುವ 200 ಶತಕೋಟಿ ಮೌಲ್ಯದ ಉತ್ಪನ್ನಗಳ ಮೇಲೆ ಸುಂಕವನ್ನು ಶೇ 25ರಷ್ಟು ಹೆಚ್ಚಿಸುವ ಆದೇಶ ಹೊರಡಿಸಿದೆ. ಸೋಮವಾರ ಬೀಜಿಂಗ್ ಕೂಡ ಅಮೆರಿಕ ಮೂಲದ ಉತ್ಪನ್ನಗಳಿಗೆ ಕಸ್ಟಮ್ಸ್ ಡ್ಯೂಟಿ ಏರಿಕೆ ಮಾಡಿರುವುದಾಗಿ ತಿರುಗೇಟು ನೀಡಿದೆ.
ಚೀನಾದ ಬಂಡವಾಳ ಭಾರತದತ್ತ ಮುಖಮಾಡಿದರೆ ಭಾರತದ ಅನೇಕ ಕಂಪನಿಗಳು ಈ ಅವಕಾಶದ ಲಾಭಪಡೆದುಕೊಳ್ಳಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಚೀನಾ ಹೂಡಿಕೆಯು ಸ್ಥಳೀಯ ಹಿತಾಸಕ್ತಿ ಕಾಪಾಡಬಲ್ಲದೇ ಎಂಬ ಅನುಯಾಯಿ ಪ್ರಶ್ನೆಗೆ, 'ಇದು ಭಾರತದ ಅಗತ್ಯತೆಗಳ ಉದ್ಯೋಗಗಳನ್ನು ಸೃಷ್ಟಿಲಿದೆ' ಎಂದು ಉತ್ತರಿಸಿದ್ದಾರೆ.
ನೇರ ರಫ್ತು ಸರಳವಾಗಿ ಜೊತೆಗೆ ಪರೋಕ್ಷ ವಿಧಾನದಲ್ಲಿ ಬದಲಾಗಲಿದೆ. ಭಾರತಕ್ಕೆ ಚೀನಾ ಬಂಡವಾಳದ ಅಲೆಗಳು ಹತ್ತಿರವಾಗಬಹುದು ಎಂದು ಮಹೀಂದ್ರ ಅಂದಾಜಿಸಿದ್ದಾರೆ.