ಶಾಂಘೈ: ಚೀನಾ ಹಾಗೂ ಅಮೆರಿಕ ವಾಣಿಜ್ಯ ಯುದ್ಧ ಸದ್ಯ ಚೀನಾ ದೇಶದ ಕರೆನ್ಸಿಗೆ ಬಲವಾಗಿ ತಟ್ಟಿದ ಪರಿಣಾಮ ದಶಕದಲ್ಲೇ ಅತಿದೊಡ್ಡ ಕುಸಿತ ಕಂಡಿದೆ.
ಸೋಮವಾರದ ವಹಿವಾಟಿನಲ್ಲಿ ಚೀನಾ ಕರೆನ್ಸಿ ಯುವಾನ್ ಶೇ.0.6ರಷ್ಟು ಕುಸಿತ ಕಂಡು ಡಾಲರ್ ಎದುರು 7.1396ಕ್ಕೆ ವ್ಯವಹಾರ ನಡೆಸಿದೆ.
ಹನ್ನೊಂದು ವರ್ಷದಲ್ಲೇ ಮಹಾಕುಸಿತ:
ಜಾಗತಿಕ ಆರ್ಥಿಕತೆ ಸದ್ಯದ ಆತಂಕ ವಾತಾವರಣದಲ್ಲಿದ್ದು ಚೀನಾ- ಅಮೆರಿಕ ನಡುವಿನ ವಾಣಿಜ್ಯ ತಿಕ್ಕಾಟ ದೊಡ್ಡ ಪರಿಣಾಮ ಬೀರಿದೆ. ಸೋಮವಾರದ ವಹಿವಾಟಿನಲ್ಲಿ ಶೇ.0.6ರಷ್ಟು ಇಳಿಕೆಯಾಗಿ ಯುವಾನ್ ಹನ್ನೊಂದು ವರ್ಷದಲ್ಲೇ ಡಾಲರ್ ಎದುರು ಮಹಾಕುಸಿತ ಅನುಭವಿಸಿದೆ.
ಚೀನಾ ಹಾಗೂ ಅಮೆರಿಕ ಎರಡೂ ದೇಶಗಳು ಆಮದಿನ ಮೇಲೆ ಸುಂಕ ಹೆಚ್ಚಳ ಮಾಡಿವೆ. ಈ ಬೆಳವಣಿಗೆ ಜಾಗತಿಕವಾಗಿ ಅಡ್ಡ ಪರಿಣಾಮ ಬೀರಿದೆ. ಚೀನಾದಲ್ಲಿನ ಎಲ್ಲ ವ್ಯವಹಾರವನ್ನು ಹಿಂಪಡೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಕೀತು ಮಾಡಿದ್ದಾರೆ.