ETV Bharat / business

ದೀಪಾವಳಿ ವೇಳೆಗೆ 6,550 ರೂ. ದರ ಏರಿದ್ರೂ.. 30 ಟನ್​ ಗೋಲ್ಡ್​ ಖರೀದಿಸಿದ ಬಂಗಾರ ಪ್ರಿಯರು!

ಕಳೆದ ವರ್ಷಗಳಲ್ಲಿ ಚಿನ್ನದ ಮಾರಾಟವು ಸುಮಾರು 40 ಟನ್‌ಗಳಷ್ಟಿತ್ತು. ಆದರೆ, ಈ ವರ್ಷದಲ್ಲಿ ಹೆಚ್ಚಿದ ದರ ಹಾಗೂ ದ್ರವ್ಯತೆ ಕೊರತೆಯಿಂದಾಗಿ ಮಾರಾಟದ ಪ್ರಮಾಣವು ಸುಮಾರು 20 ಟನ್‌ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟವು ಶೇ 25 ರಷ್ಟು ಕುಸಿದಿದೆ. ನಾವು ಹೆಚ್ಚಿನ ಪ್ರಮಾಣದ ಮಾರಾಟವನ್ನು ನಿರೀಕ್ಷಿಸಿರಲಿಲ್ಲ. ಏಕೆಂದರೆ ಹೆಚ್ಚಿದ ಬೆಲೆಗಳಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿದೆ ಎಂದು ಮೆಹ್ತಾ ಹೇಳಿದರು.

ಸಾಂದರ್ಭಿಕ ಚಿತ್ರ
author img

By

Published : Oct 27, 2019, 11:52 PM IST

ನವದೆಹಲಿ: ಚಿನ್ನಾಭರಣಗಳ ಖರೀದಿಗೆ ಶುಭ ದಿನವಾದ ಧನ್​ತೇರಸ್ ಸಂದರ್ಭದಲ್ಲಿ ದೇಶದಾದ್ಯಂತ ಬಂಗಾರ ಖರೀದಿಯಲ್ಲಿ ಸಂಭ್ರಮ ಕಂಡುಬಂದಿದ್ದು, ಇದೇ ವೇಳೆ ಸುಮಾರು 30 ಟನ್​ಗಳಷ್ಟು ಚಿನ್ನ ಮಾರಾಟ ಆಗಿದೆ ಎಂದು ಭಾರತೀಯ ಬುಲಿಯನ್ ಮತ್ತು ಜ್ಯುವೆಲರ್ಸ್​ ಅಸೋಸಿಯೇಷನ್​ನ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಹೇಳಿದ್ದಾರೆ.

ಕಳೆದ ವರ್ಷಗಳಲ್ಲಿ ಚಿನ್ನದ ಮಾರಾಟವು ಸುಮಾರು 40 ಟನ್‌ಗಳಷ್ಟಿತ್ತು. ಆದರೆ, ಈ ವರ್ಷದಲ್ಲಿ ಹೆಚ್ಚಿದ ದರ ಹಾಗೂ ದ್ರವ್ಯತೆ ಕೊರತೆಯಿಂದಾಗಿ ಮಾರಾಟದ ಪ್ರಮಾಣವು ಸುಮಾರು 20 ಟನ್‌ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟವು ಶೇ 25 ರಷ್ಟು ಕುಸಿದಿದೆ. ನಾವು ಹೆಚ್ಚಿನ ಪ್ರಮಾಣದ ಮಾರಾಟವನ್ನು ನಿರೀಕ್ಷಿಸಿರಲಿಲ್ಲ. ಏಕೆಂದರೆ ಹೆಚ್ಚಿದ ಬೆಲೆಗಳಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿದೆ ಎಂದು ಮೆಹ್ತಾ ಹೇಳಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳ ಏರಿಕೆ ಮತ್ತು ಭಾರತದಲ್ಲಿನ ದುಬಾರಿಯಾದ ಬೆಲೆ ಬಾಳುವ ಲೋಹಗಳ ಮೇಲಿನ ಆಮದು ಸುಂಕ ಹೆಚ್ಚಳದಿಂದಾಗಿ ದೇಶಿಯ ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ದರ ಹೆಚ್ಚಾಗಿದೆ. ಆದರಿಂದ ಈ ಹಬ್ಬದ ಋತುಮಾನ ಆರಂಭವಾದಾಗ ಚಿನ್ನದ ಬೇಡಿಕೆ ಕಡಿಮೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಳೆದ ಮೂರು-ನಾಲ್ಕು ದಿನಗಳಲ್ಲಿ ಖರೀದಿ ಪ್ರವೃತ್ತಿಯಲ್ಲಿ ಸುಧಾರಣೆ ಕಂಡುಬಂದಿದೆ. ಚಿನ್ನದ ಮಾರಾಟವು ಧನ್​ತೇರಾಸ್‌ನಲ್ಲಿ 30 ಟನ್‌ಗಳಷ್ಟು ದಾಖಲಾಗಿದೆ ಎಂದು ಮೆಹ್ತಾ ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಖರೀದಿ ಶೇ 25 ರಷ್ಟು ಕಡಿಮೆಯಾಗಿದೆ ಎಂದು ಕೆಡಿಯಾ ಸಲಹಾ ನಿರ್ದೇಶಕ ಅಜಯ್ ಕೆಡಿಯಾ ಹೇಳಿದ್ದಾರೆ. ಶುಕ್ರವಾರದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ 220 ರೂ. ಏರಿಕೆಯಾಗಿ ₹ 39,240ರಲ್ಲಿ ಮಾರಾಟ ಆಗುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೇ ಬಂಗಾರದ ದರದಲ್ಲಿ ಶೇ 20ರಷ್ಟು ಏರಿಕೆಯಾಗಿದೆ. ಈ ಹಿಂದೆ 10 ಗ್ರಾಂ. ಚಿನ್ನ ₹ 32,690 ಗೆ ಮಾರಾಟ ಆಗುತ್ತಿತ್ತು. ಈ ಒಂದು ವರ್ಷದಲ್ಲಿ ಚಿನ್ನದ ಬೆಲೆ 6,550 ರೂ.ಯಷ್ಟು ಏರಿಕೆಯಾಗಿದೆ ಎಂದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.