ನವದೆಹಲಿ: ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ ಕಂಪನಿಯು ಎಫ್‌ಡಿಐ ನಿಯಮಗಳು ಸೇರಿದಂತೆ ಭಾರತೀಯ ಕಾನೂನುಗಳಿಗೆ ಅನುಸಾರವಾಗಿದೆ. ನೋಟಿಸ್ ನೀಡಿರುವ ಜಾರಿ ನಿರ್ದೇಶನಾಲಯ(ಇಡಿ)ಕ್ಕೂ ಸಹಕರಿಸುವುದಾಗಿ ಅತಿ ದೊಡ್ಡ ಇ-ಕಾರ್ಮಸ್ ಹೇಳಿದೆ.
ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ಫ್ಲಿಪ್‌ಕಾರ್ಟ್ ಮತ್ತು ಅದರ ಪ್ರವರ್ತಕರಿಗೆ 10,600 ಕೋಟಿ ರೂಪಾಯಿಗಳ ಶೋಕಾಸ್ ನೋಟಿಸ್ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಬಗ್ಗೆ ಮಾಹಿತಿ ನೀಡಿದ ಫ್ಲಿಪ್‌ಕಾರ್ಟ್, ಎಫ್‌ಡಿಐ ನಿಯಮಗಳು ಸೇರಿದಂತೆ ಭಾರತೀಯ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿದೆ ಎಂದು ಹೇಳಿದೆ.
2009-2015ರ ಅವಧಿಗೆ ಸಂಬಂಧಿಸಿದ ನೋಟಿಸ್‌ಗೆ ಅಧಿಕಾರಿಗಳೊಂದಿಗೆ ಸಹಕರಿಸುತ್ತೇವೆ. ಸಂಸ್ಥಾಪಕರಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಮೂಲಗಳ ಪ್ರಕಾರ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ವಿವಿಧ ವಿಭಾಗಗಳ ಅಡಿ ಕಳೆದ ತಿಂಗಳು ಫ್ಲಿಪ್‌ಕಾರ್ಟ್, ಅದರ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಸೇರಿ ಇತರಿಗೆ ಒಟ್ಟು 10 ನೋಟಿಸ್‌ಗಳನ್ನು ನೀಡಲಾಗಿದೆ.
ಇದನ್ನೂ ಓದಿ: Covid Effect: ಕಳೆದ ವರ್ಷ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಎಫ್‌ಡಿಐ ಶೇ.90 ರಷ್ಟು ಕುಸಿತ
ದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ, ಮಲ್ಟಿ - ಬ್ರಾಂಡ್ ಚಿಲ್ಲರೆ ವ್ಯಾಪಾರವನ್ನು ನಿಯಂತ್ರಿಸುವುದು ನೋಟಿಸ್‌ನಲ್ಲಿ ಸೇರಿವೆ. 2012 ರಿಂದ ಫ್ಲಿಪ್‌ಕಾರ್ಟ್ ವಿರುದ್ಧ ಎಫ್‌ಡಿಐ ನಿಯಮಗಳ ಉಲ್ಲಂಘನೆಯ ಆರೋಪದಲ್ಲಿ ಇಡಿ ಪ್ರಕರಣ ದಾಖಲಿಸಿದೆ. ಅಧಿಕೃತ ಮೂಲಗಳ ಪ್ರಕಾರ, ಏಜೆನ್ಸಿ, ವ್ಯಕ್ತಿ/ಸಂಸ್ಥೆಗೆ ವರ್ಗಾವಣೆ ಹಾಗೂ ಭದ್ರತೆ ನೀಡುವಿಕೆಯಲ್ಲಿ ಫೆಮಾ ಉಲ್ಲಂಘಿಸಿರುವುದನ್ನು ಪತ್ತೆ ಮಾಡಲಾಗಿದೆ.