ವಾಷಿಂಗ್ಟನ್: ಅಮೆರಿಕ ಚೀನಾದ ಸರುಕಗಳ ಮೇಲೆ ಸುಂಕ ದರ ಹೆಚ್ಚಿಸಿದ್ದರೇ ಅದರ ಪರಿಣಾಮ ಭಾರತದ ಮೇಲೆ ಆಗಲು ಸಾಧ್ಯವಿಲ್ಲ ಎಂದು ಇಕೊಗ್ನೋಸಿಸ್ ಅಡ್ವೈಸರಿಯ ಸಿಇಒ ಆಂಡ್ರಿವ್ ಫ್ರೇರಿಸ್ ಹೇಳಿದರು.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಯಾವ ಮಾರುಕಟ್ಟೆಗಳು ತಲೆಕೆಳಗಾಗಿ ಇಳಿದು ವಕ್ರಾಕೃತಿಯಲ್ಲಿ ಸಾಗುತ್ತಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಇಂತಹದ್ದು ಆಗಾಗ ಸಂಭವಿಸುತ್ತಿರುತ್ತದೆ. ಭಾರತದಲ್ಲಿ ಇಳಿಮುಖದ ವಕ್ರಾಕೃತಿ ತಲೆಕೆಳಗಾಗಿದೆ ಎಂದು ತಿಳಿಯಲು ಬಯಸುತ್ತೇನೆ. ಅಕಸ್ಮಾತ್ ಅದು ಅಮೆರಿಕದಲ್ಲಿ ಸರಿಯಾದ ಮಾರ್ಗದಲ್ಲಿದ್ದರೆ ಅದಕ್ಕೆ ಅಮೆರಿಕ ಕಾರಣ. ಈ ಬೆಳಗ್ಗೆ, ಕೆಳಮುಖವಾಗಿದ್ದರೇ ಎರಡು ಮತ್ತು ಐದು ವರ್ಷಗಳ ಅಂತರದಲ್ಲಿ ಅದು ಬೇರೆಲ್ಲಿಯೂ ತಲೆಕೆಳಗಾಗುವುದಿಲ್ಲ ಎಂದು ವಿಶ್ಲೇಷಿಸಿದರು.
ಏಷ್ಯಾ ರಾಷ್ಟ್ರಗಳಲ್ಲಿನ ಜಿಡಿಪಿ ಬೆಳವಣಿಗೆ ಮಿಶ್ರವಾಗಿ ಕಾಣುತ್ತದೆ. ಹಾಂಕಾಂಗ್ನಲ್ಲಿ ಕಳೆದ ಒಂದು ವರ್ಷದಿಂದ ಜಿಡಿಪಿ ಕುಸಿಯುತ್ತಿದೆ. ಅದಕ್ಕೆ ಕಾರಣ ಅಲ್ಲಿನ ರಾಜಕೀಯ ಅಸ್ಥಿರತೆ. ಹಾಂಕಾಂಗ್ ಇಡೀ ಕುಸಿತಕ್ಕೆ ರಾಜಕೀಯ ಅಸ್ಥಿರತೆಯೊಂದೇ ಎಂದು ನಾನು ಹೇಳಲ್ಲ. ಬೇರೆ ಕಾರಣಗಳೂ ಇರಬಹುದು. ಹಾಗೆಯೇ ಭಾರತದ ಜಿಡಿಪಿ ಕೂಡ ಇಳಿಮುಖವಾಗುತ್ತಿದೆ ಎಂದು ಫ್ರೇರಿಸ್ ತಿಳಿಸಿದ್ದಾರೆ.
ಚೀನಾದ ವಿಷಯದಲ್ಲಿ ಅಮೆರಿಕದಂತೆ ಅದು (ಭಾರತ) ಕೂಡ ಸ್ವಲ್ಪಮಟ್ಟಿಗೆ ಕುಸಿತ ಅನುಭವಿಸಿದೆ. ಆದರೆ, ಪ್ರತಿಯೊಂದು ದೇಶವೂ ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನ ಹೊಂದಿದೆ. ಭಾರತದ ಮೇಲಿನ ವಾಣಿಜ್ಯ ಸಮರವು ಸಂಪೂರ್ಣವಾಗಿ ಮೇಲಾಧಾರವಾಗಿದ್ದು, ಅಡ್ಡ ಹೊಡೆತಗಳಿಂದ ಕೂಡಿದೆ. ಭಾರತದ ಜಿಡಿಪಿಯ ಕುಸಿತಕ್ಕೆ ಚೀನಾದ ಮೇಲೆ ಅಮರಿಕ ವಿಧಿಸಿದ ಸುಂಕ ದರ ಪರಿಣಾಮವೆಂದು ಹೇಳಲು ಆಗುವುದಿಲ್ಲ. ಭಾರತದ ಕೆಲವು ರಫ್ತುಗಳ ಸರಕುಗಳ ಮೇಲೆ ಅನುಕೂಲಕರವಾದ ಕೆಲವು ಷರತ್ತುಗಳನ್ನು ತೆಗೆದುಹಾಕಿದ್ದರಿಂದ ಪರಿಣಾಮ ಬೀರಿದೆ ಎನ್ನಬಹುದು ಎಂದು ಫ್ರೇರಿಸ್ ಅಭಿಪ್ರಾಯಪಟ್ಟಿದ್ದಾರೆ.