ETV Bharat / business

ವಿಘ್ನೇಶ್ವರನಿಂದ ನಿತ್ಯ ಹಣಕಾಸಿನ ನಿರ್ವಹಣೆಯಲ್ಲಿ ಕಲಿಯಬೇಕಾದ ಜೀವನ ಪಾಠಗಳಿವು!!

ಆನೆ ತಲೆ, ಮಡಕೆ ಗಾತ್ರದ ಹೊಟ್ಟೆಯ, ಮುರಿದ ದಂತದ ಲಾರ್ಡ್​ ಗಣೇಶ ಭಾರತದಲ್ಲಿ ಪ್ರಥಮ ಪೂಜಿತ. ವಿಘ್ನಗಳ ನಿವಾರಕನಾದ ಮೋದಕ ಪ್ರಿಯನನ್ನು ಪ್ರತಿ ಉದ್ಯಮ ಮತ್ತು ಸಮಾರಂಭದಲ್ಲಿ ಸರ್ವರ ಮಂಗಳಕಾರಿ ಮಾಡುವಂತೆ ಪ್ರಾರ್ಥಿಸಿ ಮಂಗಳಮೂರ್ತಿಯನ್ನು ಪೂಜಿಸಲಾಗುತ್ತದೆ. ದುಃಖವನ್ನು ಹರಿಸಿ ಸುಖವನ್ನು ಕೊಡುವ 'ದುಃಖಹರ್ತ' ಹಣಕಾಸು ನಿರ್ವಹಣೆ ಪಾಠ ಕಲಿಸುವವನೂ ಕೂಡಾ ಹೌದು.

author img

By

Published : Aug 22, 2020, 3:37 PM IST

Lord Ganesha
ವಿಘ್ನ ವಿನಾಯಕ

ಮೂಷಿಕ ವಾಹನ ಮೋದಕ ಹಸ್ತ

ಚಾಮರ ಕರ್ಣ ವಿಳಂಬಿತ ಸೂತ್ರ

ವಾಮನ ರೂಪ ಮಹೇಶ್ವರ ಪುತ್ರ

ವಿಘ್ನ ವಿನಾಯಕ ಪಾದ ನಮಸ್ತೆ

ಗೌರಿ ಪುತ್ರನಾದ ಭಗವಾನ್ ಶ್ರೀ ಗಣೇಶನಿಗೆ ನಮಸ್ಕರಿಸುತ್ತಾ ಕೌಟುಂಬಿಕ ಕಲ್ಯಾಣ, ಮಕ್ಕಳ ವಿದ್ಯಾಭ್ಯಾಸ, ಸಮಸ್ಯೆಗಳ ನಿವಾರಣೆ, ಸಂತಾನ ಭಾಗ್ಯ, ಉತ್ತಮ ಜೀವನ ನೀಡುವಂತೆ ಪ್ರಾರ್ಥಿಸಲಾಗುತ್ತದೆ. ಗಣೇಶನ ಜೀವನ ಗಾಥೆಯಲ್ಲೇ ಎಲ್ಲ ಕಾಲಕ್ಕೂ ಸಲ್ಲುವ ಹಲವು ಪಾಠಗಳು ನಮಗಿವೆ.

ಆನೆ ತಲೆ, ಮಡಕೆ ಗಾತ್ರದ ಹೊಟ್ಟೆಯ, ಮುರಿದ ದಂತದ ಲಾರ್ಡ್​ ಗಣೇಶ ಭಾರತದಲ್ಲಿ ಪ್ರಥಮ ಪೂಜಿತ. ವಿಘ್ನಗಳ ನಿವಾರಕನಾದ ಮೋದಕ ಪ್ರಿಯನನ್ನು ಪ್ರತಿ ಉದ್ಯಮ ಮತ್ತು ಸಮಾರಂಭದಲ್ಲಿ ಸರ್ವರ ಮಂಗಳಕಾರಿ ಮಾಡುವಂತೆ ಪ್ರಾರ್ಥಿಸಿ ಮಂಗಳಮೂರ್ತಿಯನ್ನು ಪೂಜಿಸಲಾಗುತ್ತದೆ. ದುಃಖವನ್ನು ಹರಿಸಿ ಸುಖವನ್ನು ಕೊಡುವ 'ದುಃಖಹರ್ತ' ಹಣಕಾಸು ನಿರ್ವಹಣೆ ಪಾಠ ಕಲಿಸುವನು.

ತಿಳಿವಳಿಕೆಯಿಂದ ಹೂಡಿಕೆ ಮಾಡಿ

ಗಣೇಶನ ದೊಡ್ಡ ತಲೆಯಂತೆ ಹೂಡಿಕೆಗೂ ಮುನ್ನ ವಿಶಾಲ ದೃಷ್ಟಿಕೋನದಿಂದ ಯೋಚಿಸಿ. ಸದಾ ಕಲಿಯುವ ವಿದ್ಯಾರ್ಥಿ ಆಗಿರು ಎಂಬುದನ್ನು ಇದು ನಮಗೆ ಸೂಚಿಸುತ್ತದೆ. ಉದಾ: ಉತ್ತಮ ಹೂಡಿಕೆ ಯೋಜನೆ ರೂಪಿಸಲು ಸೂಕ್ತವಾದ ಜ್ಞಾನ ಮತ್ತು ಕಲಿಕೆ ಬೇಕಾಗುತ್ತದೆ. ಆದ್ದರಿಂದ, ಉತ್ತಮ ಆದಾಯ ಪಡೆಯಲು ನಿಮ್ಮ ಹೂಡಿಕೆ ಆಯ್ಕೆಗಳ ಸಾಧಕ-ಬಾಧಕಗಳನ್ನು ಪರೀಕ್ಷಿಸಿಕೊಂಡು ಮೌಲ್ಯಮಾಪನ ಮಾಡುವುದು ಒಳ್ಳೆಯದು.

ಗಮ್ಯದ ಮೇಲೆ ನೋಟವಿರಲಿ

ಗಣೇಶನ ಕಣ್ಣುಗಳು ಚಿಕ್ಕದು ಮತ್ತು ತೀಕ್ಷ್ಣವಾಗಿವೆ. ಇವು ಗುರಿಯತ್ತ ಲಕ್ಷ್ಯ ಮತ್ತು ಜಾಗರೂಕರಾಗಿ ಇರುವಂತಹ ಪಾಠ ಕಲಿಸುತ್ತವೆ. ಹೂಡಿಕೆದಾರರು ಯಾವಾಗಲೂ ಹಣಕಾಸಿನ ಯೋಜನೆಗಳ ಚಿಕ್ಕ ವಿವರಗಳತ್ತ ಗಮನಹರಿಬೇಕು. ಇದು ಅನಗತ್ಯ ಕಷ್ಟಗಳನ್ನು ತಪ್ಪಿಸಲು ಬಂಡವಾಳವಾಗುತ್ತೆ.

ಚಿಕ್ಕ ನಿಧಿ

ಗಣೇಶನ ವಾಹನ ಮೂಷಿಕ. ನಮ್ಮಲ್ಲಿರುವ ಚಿಕ್ಕ ಸಂಪನ್ಮೂಲಗಳನ್ನು ಮೌಲ್ಯೀಕರಿಸಲು ನಾವು ಕಲಿಯಬೇಕು. ಅದು ಸಣ್ಣ ಇಲಿಯಂತೆ ಇರಲಿ ಅದಕ್ಕೂ ತನ್ನದೇ ಆದ ಮೌಲ್ಯ ಇರುತ್ತೆ ಎಂಬುದು ಇದರ ಸಂಕೇತ.

ಸಣ್ಣ ಪ್ರಮಾಣದ ಹಣವನ್ನೂ ಪೂರ್ಣ ಸಾಮರ್ಥ್ಯಕ್ಕೆ ಬಳಸುದು ಹೇಗೆ ಎಂಬುದು ಮೂಷಕವಾಹನ ಪ್ರಾಯೋಗಿಕ ಹೇಳಿಕೊಡುವ ಪಾಠವಾಗಿದೆ.

ಲಾಭ ಮತ್ತು ನಷ್ಟ ಸಮನಾಗಿ ಸ್ವೀಕರಿಸಿ

ಹೂಡಿಕೆ ಯೋಜನೆಗಳು ಯಾವಾಗಲೂ ಉತ್ತಮ ಲಾಭ ತಂದುಕೊಡುವುದಿಲ್ಲ. ಹೂಡಿಕೆದಾರರು ಲಾಭ ಮತ್ತು ನಷ್ಟವನ್ನೂ ಸಮನಾಗಿ ಸ್ವೀಕರಿಸುವಷ್ಟು ದೃಢ ಮನಸ್ಸು ಇರಲಿ. ಗಣೇಶನ ದೊಡ್ಡ ಹೊಟ್ಟೆಯು ಹಣಕಾಸಿನ ನಿರ್ಧಾರದ ಕೆಟ್ಟ ಮತ್ತು ಉತ್ತಮ ಅಂಶಗಳನ್ನು ಜೀರ್ಣಿಸಿಕೊಳ್ಳುವುದನ್ನು ನಮಗೆ ಕಲಿಸುತ್ತದೆ. ವಿಘ್ನಗಳನ್ನು ವಿನಾಶ ಮಾಡುವದರಿಂದ ವಿಘ್ನೇಶ್ವರ ಎಂದು ಪೂಜಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.