ETV Bharat / state

ಮಹಾಮೇಳಾವ್​ಗೆ ಬೀಳುವುದೇ ಕಡಿವಾಣ?: ಎಂಇಎಸ್ ಮುಖಂಡರ ಗಡಿಪಾರಿಗೆ ಕನ್ನಡ ಹೋರಾಟಗಾರರ ಪಟ್ಟು

ಕನ್ನಡ ಹೋರಾಟಗಾರರು ಎಂಇಎಸ್​ ಮುಖಂಡರ ಗಡಿಪಾರಿಗೆ ಒತ್ತಾಯಿಸಿದ್ದಾರೆ. ಯಾವುದೇ ಕಾರಣಕ್ಕೂ ಮಹಾಮೇಳಾವ್​ಗೆ ಅನುಮತಿ ನೀಡದಂತೆ ಪಟ್ಟು ಹಿಡಿದಿದ್ದಾರೆ.

MES leaders met District Collector Mohammad Roshan
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದ ಎಂಇಎಸ್​ ಮುಖಂಡರು (ETV Bharat)
author img

By ETV Bharat Karnataka Team

Published : 3 hours ago

ಬೆಳಗಾವಿ: ಒಂದೆಡೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಮತ್ತೊಂದೆಡೆ, ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್ ಹೆಸರಿನಲ್ಲಿ ಪ್ರತಿಭಟನೆಗೆ ಎಂಇಎಸ್ ಸಜ್ಜಾಗಿದೆ. ಇತ್ತ ಕನ್ನಡ ಹೋರಾಟಗಾರರು ಯಾವುದೇ ಕಾರಣಕ್ಕೂ ಮಹಾಮೇಳಾವ್​ಗೆ ಅನುಮತಿ ಕೊಡದಂತೆ ಪಟ್ಟು ಹಿಡಿದಿದ್ದಾರೆ. ಇದೀಗ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಎಂಇಎಸ್ ನಿಷೇಧ ಹಾಗೂ ಗಡಿಯಲ್ಲಿ ಭಾಷಾ ವೈಷಮ್ಯ ಬಿತ್ತುವ ಎಂಇಎಸ್ ಮುಖಂಡರ ಗಡಿಪಾರಿಗೂ ಆಗ್ರಹಿಸಿದ್ದಾರೆ.

ಡಿ.9ರಿಂದ 19ರವರೆಗೆ ಚಳಿಗಾಲ ಅಧಿವೇಶನ ನಿಗದಿಯಾಗಿದೆ. ಮೊದಲ ದಿನವೇ ಮಹಾಮೇಳಾವ್ ನಡೆಸಲು ಅನುಮತಿ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಎಂಇಎಸ್ ಮುಖಂಡರು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ‌. ಗಡಿ ವಿವಾದ ಸುಪ್ರೀಂ ಕೋರ್ಟ್​ನಲ್ಲಿ ಇರುವಾಗ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಸರಿಯಲ್ಲ ಎಂದು ಎಂಇಎಸ್ ವಾದಿಸುತ್ತಿದೆ. ಅಲ್ಲದೇ, ಜಿಲ್ಲಾಡಳಿತ ಅನುಮತಿ ಕೊಡಲಿ, ಬಿಡಲಿ ಮಹಾಮೇಳಾವ್ ಮಾಡಿಯೇ ತಿರುತ್ತೇವೆ ಎನ್ನುತ್ತಿರುವುದು ಮತ್ತೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಕನ್ನಡ ಹಿರಿಯ ಹೋರಾಟಗಾರರು ಮಾತನಾಡಿದ್ದಾರೆ. (ETV Bharat)

ಕಳೆದ ವರ್ಷ ಎಂಇಎಸ್ ಮುಖಂಡರಿಗೆ ಮಹಾಮೇಳಾವ್ ಆಯೋಜಿಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಹಾಗಾಗಿ, ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಶಿನ್ನೋಳಿಯಲ್ಲಿ ಪ್ರತಿಭಟನೆ ಮಾಡಿದ್ದರು. ಈಗ ಮತ್ತೆ ಅಧಿವೇಶನದ ಮೊದಲ ದಿನ ಮಹಾಮೇಳಾವ್​ಗೆ ತಯಾರಿ ನಡೆಸಿದ್ದು, ಗುಪ್ತ ಸಭೆಗಳನ್ನು ಮಾಡಿರೋದು ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದೆ‌.

'ಅನಾಹುತಕ್ಕೆ ಸರ್ಕಾರವೇ ಹೊಣೆ': ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಈಟಿವಿ ಭಾರತದ ಜೊತೆಗೆ ಮಾತನಾಡಿ, ''ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಬೆಳಗಾವಿಗೆ ಬರುತ್ತಿರುವ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಎಂಇಎಸ್ ಮಹಾಮೇಳಾವ್​ಗೆ ಸಿದ್ಧತೆ ನಡೆಸಿದೆ. ಈ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸಕ್ಕೆ ಕೈ ಹಾಕಿರುವ ಎಂಇಎಸ್ ನಾಯಕರನ್ನು ಗಲಭೆಕೋರರೆಂದು ಪರಿಗಣಿಸಿ, ಅವರನ್ನು ಗಡಿಪಾರು ಮಾಡಬೇಕು.‌ ಮಹಾಮೇಳಾವ್ ನಡೆಸಲು ಅನುಮತಿ ನೀಡಿದರೆ ಕರವೇ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಉಗ್ರ ಹೋರಾಟ ಮಾಡಬೇಕಾಗುತ್ತದೆ‌. ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆ'' ಎಂದು ಎಚ್ಚರಿಸಿದರು.

ಹಿರಿಯ ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾಂವಿ ಮಾತನಾಡಿ, ''ಎಂಇಎಸ್​ಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ. ಕನ್ನಡ ನೆಲದ ಅನ್ನ ತಿಂದು ಬದುಕಿ, ಈ ನಾಡಿಗೆ ದ್ರೋಹ ಬಗೆಯುವವರು ಮಹಾರಾಷ್ಟ್ರಕ್ಕೆ ಹೋಗಬಹುದು. ಇಲ್ಲಿನ ರಾಜಕಾರಣಿಗಳು ಮತಕ್ಕಾಗಿ ಅವರಿಗೆ ಬೆಂಬಲಿಸುವುದು ಸರಿಯಲ್ಲ. ಈ ಬಾರಿ ಮಹಾಮೇಳಾವ್‌ಗೆ ಅನುಮತಿ ನೀಡಿದರೆ ಮುಂದಿನ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ನಾವು ಅವಕಾಶ ಕೊಡುವುದಿಲ್ಲ. ನಮ್ಮದೇ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ'' ಎಂದರು.

ಮಾಜಿ ಶಾಸಕ, ಎಂಇಎಸ್ ಮುಖಂಡ ಮನೋಹರ ಕಿಣೇಕರ್ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, "ಮಹಾಮೇಳಾವ್​ಗೆ ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅನುಮತಿ ನೀಡದಿದ್ದರೂ ಬೆಳಗಾವಿಯಲ್ಲಿ ಮಹಾಮೇಳಾವ್ ಮಾಡುತ್ತೇವೆ. ಬೆಳಗಾವಿ, ನಿಪ್ಪಣಿ, ಕಾರವಾರ, ಬೀದರ್ ಮಹಾರಾಷ್ಟ್ರಕ್ಕೆ ಸೇರಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ" ಎಂದು ತಿಳಿಸಿದ್ದಾರೆ.

ಎಡಿಜಿಪಿ ಹಿತೇಂದ್ರ ಆರ್ ಹೇಳಿದ್ದೇನು?: ಅಧಿವೇಶನದ ಸಿದ್ಧತೆಗೆ ಮೊನ್ನೆಯಷ್ಟೇ ಆಗಮಿಸಿದ್ದ ಎಡಿಜಿಪಿ ಹಿತೇಂದ್ರ ಆರ್ ಮಾತನಾಡಿ, ''ಮಹಾಮೇಳಾವ್ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ. ಕಳೆದ ಎರಡು ವರ್ಷಗಳಿಂದ ಮಹಾಮೇಳಾವ್​ಗೆ ಅವಕಾಶ ಕೊಟ್ಟಿಲ್ಲ. ಹಾಗಾಗಿ, ಕಳೆದ ವರ್ಷ ಮಹಾರಾಷ್ಟ್ರ ಗಡಿಯಲ್ಲಿ ಹೋಗಿ ಅವರು ಪ್ರತಿಭಟಿಸಿದ್ದಾರೆ. ಈ ಬಾರಿಯೂ ಅವರಿಗೆ ಅವಕಾಶ ಕೊಡುವುದಿಲ್ಲ. ಆದರೂ ಮಹಾಮೇಳಾವ್ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ'' ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ : ಎಂಇಎಸ್ ಮುಖಂಡರಿಗೆ ಬೆಳಗಾವಿ ಡಿಸಿ ಕಾನೂನು, ನೀತಿ ಪಾಠ; ಕರಾಳ ದಿನಾಚರಣೆಗೆ ಅನುಮತಿ ನಿರಾಕರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.