ಇತ್ತೀಚೆಗೆ ಜನಪ್ರಿಯ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶರ್ಮಾ' ಶೋನಲ್ಲಿ ಭಾಗಿಯಾದ ಬಾಲಿವುಡ್ ಎವರ್ಗ್ರೀನ್ ಬ್ಯೂಟಿ ರೇಖಾ, ಅಮಿತಾಭ್ ಬಚ್ಚನ್ ಅವರ ಐಕಾನಿಕ್ ಗೇಮ್ ಶೋ 'ಕೌನ್ ಬನೇಗಾ ಕರೋಡ್ಪತಿ' (ಕೆಬಿಸಿ) ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದಿ ಚಿತ್ರರಂಗದ ಕೆಲ ಸ್ಮರಣೀಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ, ಬಚ್ಚನ್ ಹಾಗೂ ಅವರ ಶೋ ಬಗ್ಗೆ ಪ್ರೀತಿಪೂರ್ವಕ ಮಾತುಗಳನ್ನಾಡಿದರು.
ಹಲವು ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಅಮಿತಾಭ್ ಬಚ್ಚನ್ ಜೊತೆ ಕೆಲಸ ಮಾಡಿರುವ ರೇಖಾ, ಕೆಬಿಸಿ ವೀಕ್ಷಿಸಿ ಆನಂದಿಸೋದನ್ನು ಬಹಿರಂಗಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ, ಜನಪ್ರಿಯ ನಿರೂಪಕ ಕಪಿಲ್ ಶರ್ಮಾ ಅವರು ಅಮಿತಾಭ್ ಬಚ್ಚನ್ ಅವರ ಕೆಬಿಸಿ ಶೋ ಬಗ್ಗೆ ಮಾತನಾಡಿದರು. ತಮ್ಮ ತಾಯಿಗೆ ಅಮಿತಾಭ್ ಅವರು "ದೇವಿ ಜೀ, ಕ್ಯಾ ಖಾ ಕೆ ಪೈದಾ ಕಿಯಾ?" (ಅವನಿಗೆ ಜನ್ಮ ನೀಡುವ ಮೊದಲು ನೀವು ಏನು ತಿಂದಿದ್ರಿ?) ಎಂದು ಪ್ರಶ್ನಿಸಿದ್ರು ಎಂದು ಕಪಿಲ್ ಹೇಳಿದ ಕೂಡಲೇ ರೇಖಾ 'ದಾಲ್ ರೋಟಿ' ಎಂದು ಉತ್ತರಿಸಿದ್ದಾರೆ. "ಮುಜ್ಸೆ ಪುಚಿಯೇ ನಾ, ಏಕ್ ಏಕ್ ಡೈಲಾಗ್ ಯಾದ್ ಹೈ" (ನನ್ನನ್ನು ಕೇಳಿ, ನನಗೆ ಪ್ರತೀ ಡೈಲಾಗ್ ನೆನಪಿದೆ) ಎಂದು ಸಹ ತಿಳಿಸಿದರು. ಈ ತಮಾಷೆಯ ಕ್ಷಣ ಬಚ್ಚನ್ ಮತ್ತು ಕೆಬಿಸಿ ಮೇಲಿನ ರೇಖಾ ಅವರ ಒಲವನ್ನು ಪ್ರತಿಬಿಂಬಿಸುತ್ತದೆ. ಈ ಮೂಲಕ ಕೆಬಿಸಿಯ ಪ್ರತೀ ಶೋ ಅನ್ನು ವೀಕ್ಷಿಸುವುದಾಗಿ ರೇಖಾ ತಿಳಿಸಿದ್ದಾರೆ.
So guys tightened your belt & get ready for coming episode of #thegreatindiankapilshow #Rekha ji is here with her charm grace & elegance 💫💫💫💫🥰🥰🥰🥰
— 💖👑 GreatestLegendaryIconRekhaji👑 💖 (@TheRekhaFanclub) November 30, 2024
💞💞💞💞💞 pic.twitter.com/wlvcGbX6xj
ದೋ ಅಂಜಾನೆ (1976), ಆಲಾಪ್ (1977), ಮುಕದ್ದರ್ ಕಾ ಸಿಕಂದರ್ (1978) ಮತ್ತು ಮಿಸ್ಟರ್ ನಟ್ವರ್‌ಲಾಲ್ (1979) ನಂತಹ ಸೂಪರ್ ಹಿಟ್ ಸೇರಿದಂತೆ ಒಟ್ಟು 9 ಸಿನಿಮಾಗಳಲ್ಲಿ ರೇಖಾ ಮತ್ತು ಅಮಿತಾಭ್ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾಗಳಲ್ಲಿ ಅವರ ಕೆಮಿಸ್ಟ್ರಿ ಸಖತ್ತಾಗೆ ವರ್ಕ್ಔಟ್ ಆಗಿದೆ. ಬಾಲಿವುಡ್ನಲ್ಲಿ ಸಖತ್ ಫೇಮಸ್ ಆನ್-ಸ್ಕ್ರೀನ್ ಜೋಡಿಯಾದರು. 1970ರ ದಶಕ ಮತ್ತು 1980ರ ದಶಕದ ಆರಂಭದಲ್ಲಿ ಈ ಜೋಡಿಯ , ಆನ್ ಮತ್ತು ಆಫ್ ಸ್ಕ್ರೀನ್ ಕೆಮಿಸ್ಟ್ರಿಯು ರೊಮ್ಯಾಂಟಿಕ್ ಲೈಫ್ನ ವದಂತಿಗಳಿಗೆ ಉತ್ತೇಜನ ನೀಡಿತು. ಆ ವದಂತಿಗಳೂ ಇಂದಿಗೂ ಜೀವಂತವಾಗಿವೆ.
ಇದನ್ನೂ ಓದಿ: ಚಿತ್ರರಂಗಕ್ಕೆ ವಿದಾಯ ಘೋಷಿಸಿದ '12th ಫೇಲ್' ನಟ ವಿಕ್ರಾಂತ್ ಮಸ್ಸೆ ಆಸ್ತಿಯೆಷ್ಟು?
ಸಿಲ್ಸಿಲಾ (1981) ಬಿಡುಗಡೆಯಾದಾಗ ಜೋಡಿ ಪ್ರೀತಿಯಲ್ಲಿದ್ದಾರೆ ಎಂಬ ವದಂತಿ ಬಹಳ ದೊಡ್ಡ ಮಟ್ಟದಲ್ಲೇ ಕೇಳಿಬಂತು. ಇದು ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾವಾಗಿ ಉಳಿದುಕೊಂಡಿದೆ. ಅಮಿತಾಭ್ ಜೊತೆಗೆ ರೇಖಾ ಮತ್ತು ಜಯಾ ಬಚ್ಚನ್ ಇಬ್ಬರೂ ನಟಿಸಿದ ಸಂಕೀರ್ಣ ತ್ರಿಕೋನ ಪ್ರೇಮಕಥೆಯ ಚಿತ್ರಣವು ಅವರ ಆಫ್ ಸ್ಕ್ರೀನ್ ವದಂತಿಯನ್ನು ಹೆಚ್ಚಿಸಿತು. ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ತೆರೆ ಹಂಚಿಕೊಳ್ಳದಿದ್ದರೂ, ರೇಖಾ ಮತ್ತು ಅಮಿತಾಭ್ ಜೋಡಿಯ ಕೆಮಿಸ್ಟ್ರಿ ಇಂದಿಗೂ ಅಭಿಮಾನಿಗಳ ಮನಸೂರೆಗೊಳ್ಳುತ್ತದೆ.
ಇದನ್ನೂ ಓದಿ: ಮುದ್ದುಮಗಳ 6ನೇ ಹುಟ್ಟುಹಬ್ಬ: ಕ್ಯೂಟ್ ಅನ್ಸೀನ್ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್
ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್ಪತಿ' (ಕೆಬಿಸಿ)ಯನ್ನು ಅಮಿತಾಭ್ ಬಚ್ಚನ್ 2000ರಿಂದ ನಡೆಸಿಕೊಂಡು ಬಂದಿದ್ದಾರೆ. ಇದು ಬಚ್ಚನ್ ಪರಂಪರೆಯ ಪ್ರಮುಖ ಭಾಗವಾಗಿಯೂ ಗುರುತಿಸಿಕೊಂಡಿದೆ. ಜಾಗತಿಕ ಮಟ್ಟದ ಕಾರ್ಯಕ್ರಮ ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್‌ನ ರೂಪಾಂತರವಾದ 'ಕೌನ್ ಬನೇಗಾ ಕರೋಡ್ಪತಿ' ಶೋ ಹಿರಿಯ, ಯಶಸ್ವಿ ನಟನಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ಒಂದೊಳ್ಳೆ ವೇದಿಕೆ ಮಾಡಿಕೊಟ್ಟಿತು. ಪ್ರಸ್ತುತ 16ನೇ ಸೀಸನ್ ನಡೆಯುತ್ತಿದ್ದು, ಶೋ ಪ್ರೇಕ್ಷಕರಿಗೆ ಮನರಂಜನೆ ನೀಡುವುದನ್ನು ಮುಂದುವರೆಸಿದೆ.