ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ದಕ್ಷಿಣ ವಿಭಾಗದಲ್ಲಿ ಖಾಲಿ ಇರುವ ಕಾರ್ಯನಿರ್ವಾಹಕ ಸಹಾಯಕ, ಡೇಟಾ ಎಂಟ್ರಿ ಆಪರೇಟರ್ ಮತ್ತು ಡಿಜಿಟಲ್ ಆಫೀಸ್ ಸಹಾಯಕರ ಹುದ್ದೆಗಳ ನೇಮಕಾತಿಯ ಪ್ರಕಟಣೆ ಹೊರಡಿಸಿದೆ.
ದಕ್ಷಿಣ ರೈಲ್ವೆ ವೃಂದದ 90 ಹುದ್ದೆಗಳಿಗೆ 18- 28 ವಯೋಮಾನದ ಅರ್ಹ ಆಸಕ್ತರು ಆನ್ಲೈನ್ ಮುಖಾಂತರ ಜೂನ್ 30ರ ಒಳಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಬಿಸಿಎ, ಬಿಎಸ್ಸಿ ಕಂಪ್ಯೂಟರ್ ಸೈನ್ಸ್, ಐಟಿಯಲ್ಲಿ ಪದವಿ ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಜೊತೆಗೆ ಎಂಎಸ್ ಆಫೀಸ್ನ ಪರಿಣಿತಿ ಹೊಂದಿರುವುದು ಕಡ್ಡಾಯ ಎಂದು ಇಲಾಖೆಯು ಅಧಿಸೂಚನೆಯಲ್ಲಿ ತಿಳಿಸಿದೆ.
ಒಬಿಸಿ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಯ ಅರ್ಜಿ ಶುಲ್ಕ ₹ 500 ನಿಗದಿಪಡಿಸಲಾಗಿದೆ. ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ₹ 400 ಮರುಳಿಸಲಾಗುವುದು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ₹ 250 ಶುಲ್ಕ ಇರುತ್ತದೆ.
ಇಲಾಖೆ ನಡೆಸುವ ಎಲ್ಲ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ 'Z' ವರ್ಗದ ನಗರದಲ್ಲಿ ನೇಮಕಗೊಂಡರೆ ಮಾಸಿಕ ವೇತನ ₹ 18,500 ಪಾವತಿ ಆಗಲಿದೆ. ಅದೇ ರೀತಿ 'Y' ನಗರಕ್ಕೆ ₹ 20,000 ಹಾಗೂ 'X' ನಗರಕ್ಕೆ ₹ 22,000 ಸಂಬಳ ಸಿಗಲಿದೆ.