ಮುಂಬೈ: ಕೇಂದ್ರೀಯ ಬ್ಯಾಂಕ್ನ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸಭೆ ಇಂದು ಆರಂಭವಾಗಿದ್ದು, ಫೆಬ್ರವರಿ 3ರಿಂದ 5ರ ನಡುವೆ ನಡೆಯಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿತ್ತೀಯ ನೀತಿಯನ್ನು ಫೆ.5ರಂದು ಪ್ರಕಟಿಸಲಿದೆ.
ಹಣಕಾಸು ನೀತಿ ಸಮಿತಿಯು ಬಡ್ಡಿದರಗಳನ್ನು ಹಿಡಿದಿಟ್ಟುಕೊಳ್ಳುವ ಸಾಧ್ಯತೆ ಇದೆ. ವಸತಿ ಪಾಲಿಸಿ ನಿಲುವುಗಳನ್ನು ಮುಂದುವರೆಸಬಹುದು. ಇದರಿಂದ ಬೆಳವಣಿಗೆಯನ್ನು ಹೆಚ್ಚಿಸಲು ಅಗತ್ಯವಾದ ವಿತ್ತೀಯ ಕ್ರಮಗಳನ್ನು ತೆಗೆದುಕೊಳ್ಳಬಹುದು. ಕೇಂದ್ರ ಬಜೆಟ್ 2021-22ರ ಮಂಡನೆಯ ನಂತರ ಇದು ಮೊದಲ ಎಂಪಿಸಿ ಸಭೆಯಾಗಿದೆ.
ಫೆಬ್ರವರಿ 5ರಂದು ಘೋಷಿಸಲಿರುವ ದ್ವಿ-ಮಾಸಿಕ ವಿತ್ತೀಯವು ಬೆಂಚ್‌ಮಾರ್ಕ್ ರೆಪೊ ದರ ಕಡಿತಗೊಳಿಸುವ ಸಾಧ್ಯತೆ ಕಡಿಮೆಯಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಉತ್ತೇಜಿಸಲು ಅಗತ್ಯವಿರುವ ಸಾಕಷ್ಟು ದ್ರವ್ಯತೆ ಲಭ್ಯತೆಯನ್ನು ಈ ಸಭೆ ಖಚಿತಪಡಿಸಲಿದೆ.
ಇದನ್ನೂ ಓದಿ: ಆರ್ಥಿಕತೆಗೆ ಬಜೆಟ್ ಇಂಜೆಕ್ಷನ್: ಮತ್ತೆ ದಾಖಲೆ ಬರೆದ ಸೆನ್ಸೆಕ್ಸ್!
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಎಂಪಿಸಿ ತನ್ನ ಚರ್ಚೆಯನ್ನು ಪ್ರಾರಂಭಿಸಿದೆ. ಮೂರು ದಿನಗಳ ಸಭೆಯ ನಂತರ ಫೆಬ್ರವರಿ 5ರಂದು ಎಂಪಿಸಿ ನಿರ್ಣಾಯಕ ಬಡ್ಡಿದರ ಪ್ರಕಟಿಸುತ್ತದೆ.
ಎಂಪಿಸಿ ತನ್ನ ಕೊನೆಯ ಮೂರು ನೀತಿಗಳಲ್ಲಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಪ್ರಸ್ತುತ ರೆಪೊ ದರ; ಆರ್‌ಬಿಐ ಬ್ಯಾಂಕ್ಗಳಿಗೆ ಸಾಲ ನೀಡುವ ದರವು ದಾಖಲೆಯ ಶೇ 4ರಷ್ಟಿದೆ. ರಿವರ್ಸ್ ರೆಪೊ ದರ- ಆರ್‌ಬಿಐನೊಂದಿಗೆ ಬ್ಯಾಂಕ್ಗಳು ನಿಧಿಯ ದರ ಶೇ 3.35ರಷ್ಟಿದೆ.