ETV Bharat / business

ಡಿ.4ಕ್ಕೆ ಹಣಕಾಸು ನೀತಿ ಸಮಿತಿ ಸಭೆ ಅಂತ್ಯ: ಬಡ್ಡಿ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಸಾಧ್ಯತೆ! - MPC Meeting

ಆರ್‌ಬಿಐನ ಮುಂಬರುವ ವಿತ್ತೀಯ ನೀತಿ ಪರಾಮರ್ಶೆ ಸಭೆಯಲ್ಲಿ ತನ್ನ ಬಡ್ಡಿದರದ ನಿಲುವಿಗೆ ವಿರಾಮ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಟೆಕ್ನಾಲಜಿಯ ಮುಖ್ಯಸ್ಥ/ಅರ್ಥಶಾಸ್ತ್ರ ಡಾ. ಪೂಜಾ ಮಿಶ್ರಾ ಹೇಳಿದ್ದಾರೆ.

RBI
ಆರ್​ಬಿಐ
author img

By

Published : Dec 1, 2020, 10:44 PM IST

Updated : Dec 1, 2020, 10:55 PM IST

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ಡಿಸೆಂಬರ್ 4ಕ್ಕೆ ಆರನೇ ದ್ವಿ-ಮಾಸಿಕ ಸಭೆ ಅಂತ್ಯವಾಗಲಿದ್ದು, ಅಂದು ತನ್ನ ಬಡ್ಡಿದರ ತಡೆಹಿಡಿಯುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.

ಕಳೆದ ಎರಡು ತಿಂಗಳಲ್ಲಿ ಹೆಚ್ಚಿದ ಹಣದುಬ್ಬರದಿಂದಾಗಿ ಎಂಪಿಸಿಯು ಬಡ್ಡಿ ದರ ಕಡಿತಗೊಳಿಸುವುದನ್ನು ನಿರ್ಬಂಧಿಸಬಹುದು ಎಂದು ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐನ ಮುಂಬರುವ ವಿತ್ತೀಯ ನೀತಿ ಪರಾಮರ್ಶೆ ಸಭೆಯಲ್ಲಿ ತನ್ನ ಬಡ್ಡಿದರದ ನಿಲುವಿಗೆ ವಿರಾಮ ಅಥವಾ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಟೆಕ್ನಾಲಜಿಯ ಮುಖ್ಯಸ್ಥ/ಅರ್ಥಶಾಸ್ತ್ರ ಡಾ. ಪೂಜಾ ಮಿಶ್ರಾ ಹೇಳಿದ್ದಾರೆ.

ಹೂಡಿಕೆಯ ಬೇಡಿಕೆಯು ಇನ್ನೂ ಹಿಂದಿನ ಲಯಕ್ಕೆ ಮರಳಿಲ್ಲ. ಸರ್ಕಾರ ಮತ್ತು ಆರ್‌ಬಿಐ ಹೂಡಿಕೆಯ ಬೇಡಿಕೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಆದ್ದರಿಂದ ಆರ್ಥಿಕ ಹರಿವಿನಲ್ಲಿ ಸಾಕಷ್ಟು ದ್ರವ್ಯತೆ ಲಭ್ಯವಿರಬೇಕು. ಇದರಿಂದಾಗಿ ಉದ್ಯಮವು ಸಮತಟ್ಟಾದ ದರದಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತದೆ ಎಂದರು.

2020 ಬ್ಲಾಕ್​ ಫ್ರೈಡೇ ಸೇಲ್​: 4 ದಿನದಲ್ಲಿ 4.8 ಶತಕೋಟಿ ಡಾಲರ್​ ವಹಿವಾಟು!

ಬೆಳವಣಿಗೆಯ ದೃಷ್ಟಿಕೋನದ ಬಗ್ಗೆ ಅವರು ಎಚ್ಚರಿಕೆಯ ಸಲಹೆ ನೀಡಿದ ಅವರು, ಆರ್ಥಿಕತೆಯಲ್ಲಿ ಬಳಕೆಯ ಬೇಡಿಕೆ ಕ್ಷೀಣಿಸುತ್ತಿರುವ ಬಗ್ಗೆ ಗಮನಹರಿಸಬೇಕು. ಬೆಳವಣಿಗೆಯ ಅಂಕಿಅಂಶಗಳು 2ನೇ ತ್ರೈಮಾಸಿಕದಲ್ಲಿ ಚೇತರಿಕೆ ತೋರಿಸಿದರೂ ಹಾಗೂ ಲಸಿಕೆಯ ಬಗ್ಗೆ ಸಕಾರಾತ್ಮಕ ಸುದ್ದಿಗಳು ಹೊರಬಿದ್ದರೂ ಹಬ್ಬದ ಋತುವಿನ ನಂತರದ ಬೇಡಿಕೆಯ ಸಂಖ್ಯೆಗಳತ್ತ ದೃಷ್ಟಿಹಾಯಿಸಬೇಕಿದೆ. 2ನೇ ತ್ರೈಮಾಸಿಕದಲ್ಲಿ ಕಾರ್ಮಿಕ ವೆಚ್ಚ ಕಡಿತಗೊಳಿಸುವುದರೊಂದಿಗೆ ಆರ್ಥಿಕತೆಯ ಬೇಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಿದ್ದಾರೆ.

Last Updated : Dec 1, 2020, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.