ETV Bharat / business

ಬ್ಯಾಂಕ್​ಗಳ ಮುಖ್ಯಸ್ಥರ ಜತೆ RBI ಗವರ್ನರ್ ಸಭೆ: 'ಎಚ್ಚರಿಕೆಯಿಂದ ಇರುವಂತೆ' ಕಿವಿಮಾತು - ಭಾರತದಲ್ಲಿ ಆರ್ಥಿಕ ಸ್ಥಿತ

ಮಂಗಳವಾರ ಪ್ರಾರಂಭವಾದ ಚರ್ಚೆಗಳಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ದೃಷ್ಟಿಕೋನ, ವಿತ್ತೀಯ ನೀತಿ ಪ್ರಸರಣ, ಒತ್ತಡದ ವಲಯಗಳು ಮತ್ತು ಎಂಎಸ್‌ಎಂಇಗಳು ಸೇರಿದಂತೆ ಆರ್ಥಿಕತೆಯ ವಿವಿಧ ಕ್ಷೇತ್ರಗಳಿಗೆ ಸಾಲದ ಹರಿವು, ಇತರ ವಿಷಯಗಳ ಮೌಲ್ಯಮಾಪನ ಮಾಡಿದರು.

Shaktikanta Das
ಶಕ್ತಿಕಾಂತ್ ದಾಸ್
author img

By

Published : Dec 23, 2020, 5:50 PM IST

ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್​ಗಳ ಮುಖ್ಯಸ್ಥರು ಹಾಗೂ ಸಿಇಒಗಳ ಜತೆಗಿನ ಸಭೆ ಮುಂದುವರಿಸಿದ್ದಾರೆ.

ಮಂಗಳವಾರ ಪ್ರಾರಂಭವಾದ ಚರ್ಚೆಗಳಲ್ಲಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ದೃಷ್ಟಿಕೋನ, ವಿತ್ತೀಯ ನೀತಿ ಪ್ರಸರಣ, ಒತ್ತಡದ ವಲಯಗಳು ಮತ್ತು ಎಂಎಸ್‌ಎಂಇಗಳು ಸೇರಿದಂತೆ ಆರ್ಥಿಕತೆಯ ವಿವಿಧ ಕ್ಷೇತ್ರಗಳಿಗೆ ಸಾಲದ ಹರಿವು, ಇತರ ವಿಷಯಗಳ ಮೌಲ್ಯಮಾಪನ ಮಾಡಿದರು.

ಗವರ್ನರ್​ ತಮ್ಮ ಆರಂಭಿಕವಾಗಿ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಉದ್ಯಮಿಗಳಿಗೆ ಮನದಟ್ಟು ಮಾಡಿದ್ದಾರೆ. ಆರ್ಥಿಕ ಚಟುವಟಿಕೆಗಳಲ್ಲಿ ನಡೆಯುತ್ತಿರುವ ಪುನರುಜ್ಜೀವನ ಬೆಂಬಲಿಸುವಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಮಹತ್ವವನ್ನು ಒತ್ತಿ ಹೇಳಿದ್ದಾರೆ ಎಂದು ಆರ್​ಬಿಐ ಪ್ರಕಟಣೆಯಲ್ಲಿ ಹೇಳಿದೆ.

ಇದನ್ನೂ ಓದಿ: ಏಕಾಏಕಿ 933 ರೂ. ಕುಸಿದ ಬೆಳ್ಳಿ: ಬಂಗಾರದ ಬೆಲೆಯಲ್ಲೂ ಇಳಿಕೆ

ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಾಸ್ ಅವರು, ಬ್ಯಾಂಕ್​ಗಳು ಬಂಡವಾಳದ ಬಗ್ಗೆ ಜಾಗರೂಕರಾಗಿ ಇರಬೇಕು. ಬಂಡವಾಳವನ್ನು ಹೆಚ್ಚಿಸುವ ಮೂಲಕ ನಿಬಂಧನೆಗಳನ್ನು ಪೂರ್ವಭಾವಿಯಾಗಿ ಪರಾಮರ್ಶಿಸಬೇಕು. ಸ್ಥಿತಿಸ್ಥಾಪಕತ್ವ ಮತ್ತು ಸಾಲ ಸಾಮರ್ಥ್ಯವನ್ನು ಬಲಪಡಿಸಲು ಪೂರ್ವಭಾವಿ ಕ್ರಮ ತೆಗೆದುಕೊಳ್ಳುವ ಅಗತ್ಯವನ್ನು ಪುನರುಚ್ಚರಿಸಿದ್ದಾರೆ ಎಂದು ತಿಳಿಸಿದೆ.

ಕೇಂದ್ರೀಯ ಬ್ಯಾಂಕಿನ ಡೆಪ್ಯೂಟಿ ಗವರ್ನರ್‌ಗಳು ಸಹ ಭಾಗವಹಿಸಿದ ವರ್ಚುಯಲ್ ಸಭೆಯಲ್ಲಿ, ಕೋವಿಡ್ ಸಂಬಂಧಿತ ಒತ್ತಡದ ಸ್ವತ್ತುಗಳಿಗೆ ರೆಸಲ್ಯೂಷನ್ ಫ್ರೇಮ್‌ವರ್ಕ್ ಅನುಷ್ಠಾನದಲ್ಲಿನ ಪ್ರಗತಿ ಮತ್ತು ರಾಜ್ಯಗಳಲ್ಲಿ ಗುರುತಿಸಲಾದ ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ 100ರಷ್ಟು ಡಿಜಿಟಲ್ ಶಕ್ತಗೊಳಿಸುವಲ್ಲಿ ಬಗ್ಗೆ ಚರ್ಚಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.