ETV Bharat / business

ಯುಪಿ, ಗುಜರಾತ್​, ಆಂಧ್ರ ಸೇರಿ 6 ರಾಜ್ಯಗಳಲ್ಲಿ 'ಲೈಟ್ ಹೌಸ್ ಯೋಜನೆ'ಗೆ ಪ್ರಧಾನಿ ಚಾಲನೆ - ಪ್ರಧಾನಿ ಮೋದಿ ಭಾಷಣ

ಲೈಟ್ ಹೌಸ್ ಯೋಜನೆಗಳು (ಎಲ್‌ಎಚ್‌ಪಿಗಳು) ದೇಶದಲ್ಲಿ ಮೊದಲ ಬಾರಿಗೆ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಯುಗದ ಪರ್ಯಾಯ ಜಾಗತಿಕ ತಂತ್ರಜ್ಞಾನಗಳು, ವಸ್ತುಗಳು ಮತ್ತು ಪ್ರಕ್ರಿಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಒಳಗೊಂಡಿವೆ. ಇವುಗಳನ್ನು ಜಿಹೆಚ್‌ಟಿಸಿ ಇಂಡಿಯಾ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ..

PM Modi
ಪ್ರಧಾನಿ ಮೋದಿ
author img

By

Published : Jan 1, 2021, 1:00 PM IST

Updated : Jan 1, 2021, 1:05 PM IST

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ (ಜಿಎಚ್‌ಟಿಸಿ-ಇಂಡಿಯಾ) ಅಡಿ ಲೈಟ್‌ಹೌಸ್ ಯೋಜನೆಗಳ (ಎಲ್‌ಹೆಚ್‌ಪಿ) ಶಿಲಾನ್ಯಾಸವನ್ನು ನೆರವೇರಿಸಿದರು.

ವರ್ಚ್ಯುಯಲ್​ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ತ್ರಿಪುರ, ಜಾರ್ಖಂಡ್, ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್, ತಮಿಳುನಾಡು ಮತ್ತು ಆಂಧ್ರದ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರು ಭಾಗವಹಿಸಿದ್ದರು.

2021ರ ಮೊದಲ ದಿನ ಭಾರತದ ನಗರ ಭೂದೃಶ್ಯವನ್ನು ಪರಿವರ್ತಿಸುವ ಗುರಿ ಹೊಂದಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಲೈಟ್ ಹೌಸ್ ಪ್ರಾಜೆಕ್ಟ್‌ಗಳಿಗೆ ಅಡಿಪಾಯ ಹಾಕಿ ಪಿಎಂಎವೈ (ಅರ್ಬನ್) ಮತ್ತು ಆಶಾ-ಇಂಡಿಯಾ ಪ್ರಶಸ್ತಿಗಳನ್ನು ವಿತರಿಸಲಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಒಂದು ಕಾಲದಲ್ಲಿ ವಸತಿ ಯೋಜನೆಗಳು ಕೇಂದ್ರ ಸರ್ಕಾರದ ಆದ್ಯತೆಯಾಗಿರಲಿಲ್ಲ. ನಿರ್ಮಾಣದ ವಿವರಗಳು ಮತ್ತು ಗುಣಮಟ್ಟದ ಬಗ್ಗೆ ಸರ್ಕಾರ ಕಾಳಜಿವಹಿಸಲಿಲ್ಲ. ಬದಲಾವಣೆ ಮಾಡದಿದ್ದರೆ ಅದು ತುಂಬಾ ಕಷ್ಟಕರವಾಗಿತ್ತು. ಇಂದು ದೇಶವು ವಿಭಿನ್ನ ವಿಧಾನ ಆರಿಸಿಕೊಂಡಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

2022ರ ವೇಳೆಗೆ ಎಲ್ಲರಿಗೂ ವಸತಿ ಕಲ್ಪಿಸಲು ಪ್ರಧಾನಿ ಮೋದಿ ಅವರು ಯೋಜನೆ ಹಾಕಿಕೊಂಡಿದ್ದು, ಇದೇ ವರ್ಷ ರಾಷ್ಟ್ರವು 75 ವರ್ಷಗಳ ಸ್ವಾತಂತ್ರ್ಯ ಪೂರ್ಣಗೊಳಿಸಲಿದೆ. ಈ ಕಾರ್ಯಕ್ರಮವು ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ. ಈಗಾಗಲೇ ಆಂಧ್ರಪ್ರದೇಶ ಚಂಡಮಾರುತ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪಗಳಿಗೆ ತುತ್ತಾಗಿದೆ ಎಂದು ಆಂಧ್ರಪ್ರದೇಶದ ಸಿಎಂ ವೈಎಸ್ ಜಗನ್ಮೋಹನ್​ ರೆಡ್ಡಿ ಹೇಳಿದರು.

ಲೈಟ್ ಹೌಸ್ ಯೋಜನೆಗಳು (ಎಲ್‌ಹೆಚ್‌ಪಿಗಳು) ದೇಶದಲ್ಲಿ ಮೊದಲ ಬಾರಿಗೆ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಯುಗದ ಪರ್ಯಾಯ ಜಾಗತಿಕ ತಂತ್ರಜ್ಞಾನಗಳು, ವಸ್ತುಗಳು ಮತ್ತು ಪ್ರಕ್ರಿಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಒಳಗೊಂಡಿವೆ. ಇವುಗಳನ್ನು ಜಿಹೆಚ್‌ಟಿಸಿ-ಇಂಡಿಯಾ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ವಸತಿ ನಿರ್ಮಾಣ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳನ್ನು ಸಮಗ್ರ ರೀತಿ ಅಳವಡಿಸಿಕೊಳ್ಳಲು ಪರಿಸರ ವ್ಯವಸ್ಥೆಯನ್ನು ಒದಗಿಸುವುದು ಇದರ ಉದ್ದೇಶ ಎಂದರು.

ಇದನ್ನೂ ಓದಿ: ರಾಜ್ಯಪಾಲರಿಗೆ ಪತ್ರ ಬರೆದ ಚಂದ್ರಬಾಬು ನಾಯ್ಡು!; ಕಾರಣ

ಇಂದೋರ್ (ಮಧ್ಯಪ್ರದೇಶ), ರಾಜ್‌ಕೋಟ್ (ಗುಜರಾತ್), ಚೆನ್ನೈ (ತಮಿಳುನಾಡು), ರಾಂಚಿ (ಜಾರ್ಖಂಡ್), ಅಗರ್ತಲಾ (ತ್ರಿಪುರ) ಮತ್ತು ಲಖನೌಗಳಲ್ಲಿ (ಉತ್ತರ ಪ್ರದೇಶ) ಎಲ್‌ಹೆಚ್‌ಪಿ ನಿರ್ಮಿಸಲಾಗುತ್ತಿದೆ. ಮೂಲಸೌಕರ್ಯ ಸೌಲಭ್ಯಗಳೊಂದಿಗೆ ಪ್ರತಿ ಸ್ಥಳದಲ್ಲಿ ಸುಮಾರು 1000 ಮನೆಗಳನ್ನು ನಿರ್ಮಿಸಲಾಗುತ್ತಿದೆ.

ಸಾಂಪ್ರದಾಯಿಕ ಇಟ್ಟಿಗೆ ಮತ್ತು ಗಾರೆ ನಿರ್ಮಾಣಕ್ಕೆ ಹೋಲಿಸಿದ್ರೆ ಈ ಯೋಜನೆಗಳು ಹನ್ನೆರಡು ತಿಂಗಳಲ್ಲಿಯೇ ವಾಸಿಸಲು ಸಿದ್ಧವಾದ ಮನೆಗಳನ್ನು ನಿರ್ಮಿಸುತ್ತವೆ. ಇವು ಉತ್ತಮ ಗುಣಮಟ್ಟದ, ಬಾಳಿಕೆ ಬರುವ, ಕಡಿಮೆ ವೆಚ್ಚದ, ಸುಸ್ಥಿರ ಮನೆಗಳಾಗಿರುತ್ತವೆ.

ಈ ಎಲ್‌ಹೆಚ್‌ಪಿಗಳು ತಂತ್ರಜ್ಞಾನಗಳ ವೈವಿಧ್ಯತೆಯನ್ನು ಪ್ರದರ್ಶಿಸಲಿವೆ. ಇಂದೋರ್‌ನ ಎಲ್‌ಹೆಚ್‌ಪಿಯಲ್ಲಿ ಪ್ರಿಫ್ಯಾಬ್ರಿಕೇಟೆಡ್ ಸ್ಯಾಂಡ್‌ವಿಚ್ ಪ್ಯಾನಲ್ ಸಿಸ್ಟಮ್, ರಾಜ್‌ಕೋಟ್‌ನಲ್ಲಿ ಮೊನೊಲಿಥಿಕ್ ಕಾಂಕ್ರೀಟ್ ನಿರ್ಮಾಣ, ಚೆನ್ನೈ ಎಲ್‌ಹೆಚ್‌ಪಿಯಲ್ಲಿ ಪ್ರಿಕಾಸ್ಟ್ ಕಾಂಕ್ರೀಟ್ ನಿರ್ಮಾಣ ವ್ಯವಸ್ಥೆ, ರಾಂಚಿಯ ಎಲ್‌ಹೆಚ್‌ಪಿಯಲ್ಲಿ 3ಡಿ ವಾಲ್ಯೂಮೆಟ್ರಿಕ್ ಪ್ರಿಕಾಸ್ಟ್ ಕಾಂಕ್ರೀಟ್ ನಿರ್ಮಾಣ ವ್ಯವಸ್ಥೆ, ಅಗರ್ತಲಾದಲ್ಲಿ ಲೈಟ್ ಗೇಜ್ ಸ್ಟೀಲ್ ಇನ್ಫಿಲ್ ಪ್ಯಾನೆಲ್‌ಗಳೊಂದಿಗೆ ಸ್ಟೀಲ್ ಫ್ರೇಮ್ ಮತ್ತು ಲಖನೌ ಎಲ್‌ಹೆಚ್‌ಪಿಯಲ್ಲಿ ಪಿವಿಸಿ ಸ್ಟೇ ಇನ್ ಪ್ಲೇಸ್ ಫಾರ್ಮ್‌ವರ್ಕ್ ಸಿಸ್ಟಮ್ ತಂತ್ರಜ್ಞಾನಗಳನ್ನು ಬಳಸಲಾಗುವುದು.

ವಸತಿ ಕ್ಷೇತ್ರಕ್ಕೆ ತಂತ್ರಜ್ಞಾನವನ್ನು ವರ್ಗಾಯಿಸಲು ಮತ್ತು ತಂತ್ರಜ್ಞಾನದ ಪುನರಾವರ್ತನೆಗೆ ಅನುಕೂಲವಾಗುವಂತೆ ಎಲ್‌ಹೆಚ್‌ಪಿಗಳು ನೇರ ಪ್ರಯೋಗಾಲಯಗಳಾಗಿ ಕಾರ್ಯನಿರ್ವಹಿಸುತ್ತವೆ. ಐಐಟಿಗಳು, ಎನ್ಐಟಿಗಳು, ಇತರ ಎಂಜಿನಿಯರಿಂಗ್ ಕಾಲೇಜುಗಳು, ಯೋಜನೆ ಮತ್ತು ವಾಸ್ತುಶಿಲ್ಪ ಕಾಲೇಜುಗಳು, ಬಿಲ್ಡರ್‌ಗಳು, ಖಾಸಗಿ ಮತ್ತು ಸಾರ್ವಜನಿಕ ವಲಯದ ವೃತ್ತಿಪರರು ಮತ್ತು ಇತರ ಸಂಸ್ಥೆಗಳ ಬೋಧಕವರ್ಗ ಮತ್ತು ವಿದ್ಯಾರ್ಥಿಗಳಿಗೆ ಯೋಜನೆ, ವಿನ್ಯಾಸ, ಉತ್ಪಾದನೆ, ನಿರ್ಮಾಣ ಕ್ರಮ ಮತ್ತು ಪರೀಕ್ಷೆಗಳು ಇದರಲ್ಲಿ ಸೇರಿವೆ.

Last Updated : Jan 1, 2021, 1:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.