ETV Bharat / business

ಪಿಂಚಣಿದಾರರಿಗೆ ತಮ್ಮ ಪೂರ್ಣ ಜೀವಮಾನದ ಕೊಡುಗೆ ಹಿಂಪಡೆಯಲು ಅನುಮತಿ ಸಾಧ್ಯತೆ!

author img

By

Published : May 18, 2021, 5:14 PM IST

ಸಂಗೀತಗಾರ ರೋಚಕ್ ಕೊಹ್ಲಿ ಕಮೆಂಟ್​ ಮಾಡಿದ್ದು, “ಮೇರೆ ಭಾಯ್ ಕೆ ಕಪ್ಡೆ ಕಹಾನ್ ಗಯೆ ಬೆಹೆನ್” (ನನ್ನ ಸಹೋದರನ ಬಟ್ಟೆ ಎಲ್ಲಿ ಹೋಗಿದೆ) ಎಂದು ತಮಾಷೆಯಾಗಿ ಹೇಳಿದ್ದಾರೆ..

Pensioners
Pensioners

ನವದೆಹಲಿ : ಕುಟುಂಬದ ತುರ್ತು ಪರಿಸ್ಥಿತಿಗಳ ಅಗತ್ಯ ಪೂರೈಸಲು ಅಥವಾ ಉತ್ತಮ ಲಾಭದಾಯಕಗಳಿಗೆ ಹೂಡಿಕೆ ಮಾಡಲು ತಮ್ಮ ಪಿಂಚಣಿ ನಿಧಿಯ ಹಣ ಬಳಸಲು ಬಯಸುವ ನಿವೃತ್ತ ವ್ಯಕ್ತಿಗಳು ಶೀಘ್ರದಲ್ಲೇ ತಮ್ಮ ಸಂಪೂರ್ಣ ಜೀವಿತಾವಧಿಯ ಹಣ ಹಿಂಪಡೆಯಲು ಅನುಮತಿಸಲಾಗುವುದು.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಚಂದಾದಾರರಿಗೆ ಉತ್ತಮ ಆಯ್ಕೆಯೊಂದಿಗೆ ಹೊರಬರಲು ಪಿಂಚಣಿ ನಿಯಂತ್ರಕ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಈ ಬಗ್ಗೆ ಚಿಂತನೆ ನಡೆಸುತ್ತಿದೆ. ಅರ್ಹ ಪಿಂಚಣಿದಾರ 5 ಲಕ್ಷ ರೂ. ತನಕ ವಿತ್​ಡ್ರಾ ಮಾಡಿಕೊಳ್ಳಲು ಅವಕಾಶ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಜಾಗತಿಕ ಪಾಸಿಟಿವ್ ಪ್ರವೃತ್ತಿ: ಮತ್ತೆ 50 ಸಾವಿರ ಗಡಿ ದಾಟಿದ ಸೆನ್ಸೆಕ್ಸ್​, 15 ಸಾವಿರದತ್ತ ನಿಫ್ಟಿ

ಪ್ರಸ್ತುತ, 2 ಲಕ್ಷ ರೂ. ಮಿತಿ ಇದ್ದು, ಎನ್‌ಪಿಎಸ್ ಚಂದಾದಾರರು ಸಂಪೂರ್ಣ ಹಣ ಹಿಂಪಡೆಯಬಹುದು. ಈ ಮಿತಿಯನ್ನು ಮೀರಿ ಪ್ರಸ್ತುತ ಕೇವಲ 60 ಪ್ರತಿಶತದಷ್ಟು ಪಿಂಚಣಿ ಹಿಂತೆಗೆದುಕೊಳ್ಳಬಹುದು. 40 ಪ್ರತಿಶತದಷ್ಟು ಕೊಡುಗೆಗಳನ್ನು ಸರ್ಕಾರದ ಅನುಮೋದಿತ ವರ್ಷಾಶನಗಳಲ್ಲಿ ಕಡ್ಡಾಯವಾಗಿ ನಿಲ್ಲಿಸಬೇಕಾಗುತ್ತದೆ.

ಒಂದು ನಿರ್ದಿಷ್ಟ ವಿಭಾಗದ ಚಂದಾದಾರರಿಗೆ ಉತ್ತಮ ಗನದು ನೀಡುವ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ. 5 ಲಕ್ಷ ರೂ.ಯಲ್ಲಿ ಸಾಮಾನ್ಯ ಪಿಂಚಣಿ ಮೊತ್ತವು ಚಂದಾದಾರರಿಗೆ ಜೀವನಕ್ಕೆ ಯಾವುದೇ ಮಹತ್ವದ ಆದಾಯ ಒದಗಿಸಲು ಅತ್ಯಲ್ಪವಾಗಿರುತ್ತದೆ.

ವಾಪಸಾತಿ ಯೋಜನೆಯೊಂದಿಗೆ ಪಿಎಫ್‌ಆರ್‌ಡಿಎ ಚಂದಾದಾರರ ಪಿಂಚಣಿ ಹಣದ ಒಂದು ಭಾಗವನ್ನು ವರ್ಷಾಶನ ಹೂಡಿಕೆಗಾಗಿ ಅಥವಾ ಪಿಂಚಣಿ ನಿಧಿ ವ್ಯವಸ್ಥಾಪಕರಿಂದಲೇ ಹೂಡಿಕೆ ಮಾಡುವ ಆಯ್ಕೆ ಸಹ ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.