ನವದೆಹಲಿ: ಭಾರತದ ಆರ್ಥಿಕತೆ ಋಣಾತ್ಮಕದಿಂದ ಇದೀಗ ಸ್ಥಿರತೆ ಕಾಯ್ದುಕೊಂಡಿದೆ ಎಂದು ಮೂಡೀಸ್ ಸಂಸ್ಥೆ ತಿಳಿಸಿದೆ. ಈ ಹಿಂದೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯಿಂದಾಗಿ 2021 ಹಾಗೂ 2022ನೇ ಸಾಲಿನಲ್ಲಿ ಭಾರತದ ಆರ್ಥಿಕ ಸ್ಥಿತಿ ದುರ್ಬಲವಾಗಿರಲಿದೆ ಎಂದು ಅದು ಅಭಿಪ್ರಾಯಪಟ್ಟಿತ್ತು.
ಭಾರತದ ಆರ್ಥಿಕತೆ ಇದೀಗ ವೇಗ ಪಡೆದುಕೊಳ್ಳುತ್ತಿರುವ ಕಾರಣ ಋಣಾತ್ಮಕದಿಂದ ಸ್ಥಿರತೆಗೆ ಮರಳಿದೆ ಎಂದು ತಿಳಿಸಿದೆ. ಜೊತೆಗೆ ಭಾರತದ ರೇಟಿಂಗ್ ‘Baa3’ನಿಂದ ‘Baa2’ಗೆ ಏರಿಸಿದೆ. ಏಪ್ರಿಲ್-ಜುಲೈ 2021ರ ಅವಧಿಯಲ್ಲಿ ಕೇಂದ್ರದ ಹಣಕಾಸಿನ ತೊಂದರೆಯಿಂದಾಗಿ ಬೆಳವಣಿಗೆ ಶೇ. 21.3ರಷ್ಟು ಮಾತ್ರ ಕಂಡು ಬಂದಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು ವೆಚ್ಚದ ಮೇಲಿನ ನಿರ್ಬಂಧಗಳು ಮತ್ತು ತೆರಿಗೆ ಮತ್ತು ತೆರಿಗೆಯೇತರ ಆದಾಯ ಸಂಗ್ರಹ ಎಂದು ಅದು ತಿಳಿಸಿದೆ.
ಇದನ್ನೂ ಓದಿರಿ: ಕಾಗುಣಿತ ಬೋಧನೆಯ ನೆಪ: ಶಾಲೆಗೆ ಕರೆದು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
2020-21ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.3ರಷ್ಟು ಕುಸಿತ ಕಂಡಿತ್ತು. ಆದರೆ ಪ್ರಸ್ತುತ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ. 20.1ರಷ್ಟು ಬೆಳವಣಿಗೆಯಾಗಿದೆ. ಮಾರ್ಚ್ 2022ಕ್ಕೆ ಹಣಕಾಸು ವರ್ಷ ಕೊನೆಗೊಳ್ಳುವ ವೇಳೆಗೆ ಮೂಡೀಸ್ ಶೇ. 9.3ರಷ್ಟು ಬೆಳವಣಿಗೆ ನಿರೀಕ್ಷೆ ಇದೆ ಎಂದು ತಿಳಿಸಿದೆ. ಈ ಹಿಂದೆ ಕೂಡ ಭಾರತದ ಆರ್ಥಿಕ ಚಟುವಟಿಕೆಯಲ್ಲಿ ವೇಗ ಪಡೆದುಕೊಳ್ಳುತ್ತಿದೆ ಎಂದು ಮೂಡೀಸ್ ಹೇಳಿಕೊಂಡಿತ್ತು.