ETV Bharat / business

ವಿಜಯ್​ ಮಲ್ಯ ರೀತಿ 30 ಖದೀಮರು ಬ್ಯಾಂಕ್​ಗಳಿಗೆ ವಂಚಿಸಿದ ಹಣ ಕೇಳಿದ್ರೆ ಬೆಚ್ಚಿಬೀಳ್ತಿರಾ.. - ಆರ್​ಬಿಐನ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿ

ಉದ್ದೇಶಪೂರ್ವಕ ಸುಸ್ತಿದಾರರ ಮಾಹಿತಿ ಬಹಿರಂಗಪಡಿಸುವಂತೆ ನಾಲ್ಕು ವರ್ಷಗಳು ಹಿಂದೆ ನೀಡಿದ್ದ ಸುಪ್ರೀಂಕೋರ್ಟ್ ಆದೇಶಕ್ಕೆ ಇದೇ ಮೊದಲ ಬಾರಿಗೆ ಆರ್​​ಬಿಐ, ವಂಚಕರ ಮಾಹಿತಿ ಹಂಚಿಕೊಂಡಿದೆ. ಖಾಸಗಿ ಡಿಜಿಟಲ್ ಮಾಧ್ಯಮ ಸಲ್ಲಿಸಿದ್ದ ಆರ್​ಟಿಐ ಅರ್ಜಿಗೆ ಪ್ರತಿಕ್ರಿಯಿಸಿ 30 ವಂಚಕರ ಪಟ್ಟಿಯನ್ನು ಸಾರ್ವಜನಿಕರ ಮುಂದಿಟ್ಟಿದೆ.

ವಿಜಯ್ ಮಲ್ಯ
author img

By

Published : Nov 23, 2019, 4:20 PM IST

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೊದಲ ಬಾರಿಗೆ 30 ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಆರ್​ಬಿಐ ಇದೇ ಪ್ರಥಮ ಬಾರಿಗೆ ಉದ್ದೇಶಪೂರ್ವ ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಗೀತಾಂಜಲಿ ಜೆಮ್ಸ್​​ ಕಂಪನಿಯ ಮೆಹುಲ್ ಚೋಕ್ಸಿ ಅಗ್ರ ಸ್ಥಾನದಲ್ಲಿ ಇದ್ದಾನೆ.

ಆರ್‌ಇಐ ಆಗ್ರೋ, ವಿನ್ಸಮ್ ಡೈಮಂಡ್ಸ್, ರುಚಿ ಸೋಯಾ, ರೊಟೊಮ್ಯಾಕ್ ಗ್ಲೋಬಲ್, ಕಿಂಗ್‌ಫಿಶರ್ ಏರ್‌ಲೈನ್ಸ್, ಕುಡೋಸ್ ಕೆಮಿ, ಜೂಮ್ ಡೆವಲಪರ್ಸ್ ಮತ್ತು ಎಬಿಜಿ ಶಿಪ್‌ಯಾರ್ಡ್ ಟಾಪ್​ ಹತ್ತು ಸುಸ್ತಿದಾರರ ಶ್ರೇಣಿಯಲ್ಲಿವೆ.

ಉದ್ದೇಶಪೂರ್ವಕ ಸುಸ್ತಿದಾರರ ಮಾಹಿತಿ ಬಹಿರಂಗಪಡಿಸುವಂತೆ ನಾಲ್ಕು ವರ್ಷಗಳು ಹಿಂದೆ ನೀಡಿದ್ದ ಸುಪ್ರೀಂಕೋರ್ಟ್​ ಆದೇಶಕ್ಕೆ ಇದೇ ಮೊದಲ ಬಾರಿಗೆ ಆರ್​​ಬಿಐ ವಂಚಕರ ಮಾಹಿತಿ ಹಂಚಿಕೊಂಡಿದೆ. ಖಾಸಗಿ ಡಿಜಿಟಲ್ ಮಾಧ್ಯಮ ಸಲ್ಲಿಸಿದ್ದ ಆರ್​ಟಿಐ ಅರ್ಜಿಗೆ ಪ್ರತಿಕ್ರಿಯಿಸಿ 30 ವಂಚಕರ ಪಟ್ಟಿಯನ್ನು ಸಾರ್ವಜನಿಕರ ಮುಂದಿಟ್ಟಿದೆ.

ಗೀತಾಂಜಲಿ ಜೆಮ್ಸ್​- ₹ 5,044 ಕೋಟಿ, ಆರ್‌ಇಐ ಅಗ್ರೋ- ₹ 4,197, ವಿನ್ಸಮ್ ಡೈಮಂಡ್ಸ್- ₹ 3,386 ಕೋಟಿ, ರುಚಿ ಸೋಯಾ- ₹ 3,225 ಕೋಟಿ, ರೊಟೊಮ್ಯಾಕ್ ಗ್ಲೋಬಲ್- ₹ 2,844 ಕೋಟಿ, ಕಿಂಗ್‌ಫಿಶರ್ ಏರ್‌ಲೈನ್ಸ್- ₹ 2,488, ಕುಡೋಸ್ ಕೆಮಿ- ₹ 2,326, ಜೂಮ್ ಡೆವಲಪರ್ಸ್- ₹ 2,024 ಮತ್ತು ಎಬಿಜಿ ಶಿಪ್‌ಯಾರ್ಡ್ ₹ 1,875 ಸೇರಿದಂತೆ ಇತರೆ 21 ಕಂಪನಿಗಳಿಂದ ಒಟ್ಟು 52,598 ಕೋಟಿ ರೂ. ಸುಸ್ತಿದಾರರ ಪಟ್ಟಿಯಲ್ಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.