ETV Bharat / business

ರೈತರಿಗೆ ಸಿಹಿ ಸುದ್ದಿ: ಬಿತ್ತನೆ ಪೂರ್ವ ಸಿದ್ಧತಾ ಕಾರ್ಯಗಳಿಗೆ ಲಾಕ್​ಡೌನ್​ನಿಂದ ವಿನಾಯ್ತಿ​

author img

By

Published : Apr 7, 2020, 10:53 PM IST

ಲಾಕ್​ಡೌನ್ ವೇಳೆಯಲ್ಲಿ ಕೃಷಿ ಸಚಿವಾಲಯ ರೈತರಿಗೆ ಅನುಕೂಲ ಆಗುವಂತಹ ಪ್ರಮುಖ ಪರಿಹಾರಗಳನ್ನು ಘೋಷಿಸಿದೆ. ಕೃಷಿ ಉತ್ಪನ್ನಗಳು ಮತ್ತು ಸಂಬಂಧಿತ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳ ಓಡಾಟಕ್ಕೆ ಅವಕಾಶ ನೀಡಿದೆ. ಬೀಜ, ರಸಗೊಬ್ಬರ, ಕೃಷಿ ಉಪಕರಣ ಮತ್ತು ಬಿಡಿ ಭಾಗಗಳ ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಬಹುದು ಎಂದು ಹೇಳಿದೆ.

Agriculture Sector
ಕೃಷಿ

ನವದೆಹಲಿ: ಕೋವಿಡ್-19 ಸೋಂಕು ಹಬ್ಬುವಿಕೆ ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್​ಡೌನ್ ಹೇರಿದೆ. ಇದರಿಂದ ಇಡೀ ವಿತ್ತೀಯ ಬೆಳವಣಿಗೆಯ ಮೇಲೆ ಪ್ರಭಾವ ಬೀರಿದೆ. ಇನ್ನು ಎರಡು ತಿಂಗಳಲ್ಲಿ ಪೂರ್ವ ಮುಂಗಾರು ಆರಂಭವಾಗಲಿದ್ದು, ಬಿತ್ತನೆ ಪೂರ್ವ ಸಿದ್ಧತಾ ಕಾರ್ಯಗಳನ್ನು ರೈತರು ಶುರು ಮಾಡಲಿದ್ದಾರೆ.

ಹೀಗಾಗಿ, ಕೃಷಿ ಸಚಿವಾಲಯ ರೈತರಿಗೆ ಅನುಕೂಲ ಆಗುವಂತಹ ಪ್ರಮುಖ ಪರಿಹಾರಗಳನ್ನು ಘೋಷಿಸಿದೆ. ಕೃಷಿ ಉತ್ಪನ್ನಗಳು ಮತ್ತು ಸಂಬಂಧಿತ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳ ಓಡಾಟಕ್ಕೆ ಅವಕಾಶ ನೀಡಿದೆ. ಬೀಜ, ರಸಗೊಬ್ಬರ, ಕೃಷಿ ಉಪಕರಣ ಮತ್ತು ಬಿಡಿ ಭಾಗಗಳ ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಬಹುದು ಎಂದು ಹೇಳಿದೆ.

ಬೇಸಾಯಕ್ಕೆ ಬೇಕಾಗುವ ಅಗತ್ಯ ಕೃಷಿ ಉತ್ಪನ್ನಗಳ ರಫ್ತು ನಿರ್ಬಂಧಿಸಲಾಗುವುದಿಲ್ಲ. ಕಸ್ಟಮ್ ನೇಮಕಾತಿ ಕೇಂದ್ರಗಳು ಮತ್ತು ಅಳವಡಿಕೆಗಳು, ಬೀಜಗಳು, ರಸಗೊಬ್ಬರಗಳ ಸರಬರಾಜಿಗೆ ಅವಕಾಶವಿದೆ ಎಂದಿದೆ.

ಟೀ ತೋಟಗಳು ಶೇ. 50ರಷ್ಟು ಕೆಲಸಗಾರರೊಂದಿಗೆ ಬೇಸಾಯ ಕಾರ್ಯಗಳು ನಿರ್ವಹಿಸಬಹುದು. ಈ ಎಲ್ಲಾ ಕೆಲಸಗಳನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ನೋಡಿಕೊಳ್ಳಬೇಕು ಎಂದು ಎಚ್ಚರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.