ETV Bharat / business

ಏ.20ರ ಬಳಿಕ ಲಾಕ್​ಡೌನ್ 2.0 ಶುರು... ಏನಿರುತ್ತೆ, ಏನಿರಲ್ಲಿ..? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​​​ - ಲಾಕ್​ಡೌನ್ ವಿಸ್ತರಣೆ

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿತ್ತಾ, ಎರಡನೇ ಹಂತದ ಲಾಕ್​ಡೌನ್​ ಅನ್ನು ಮೇ 3ರ ತನಕ ವಿಸ್ತರಿಸುವುದಾಗಿ ಘೋಷಿಸಿದರು. ಏಪ್ರಿಲ್ 20ರ ನಂತರ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡುವುದಾಗಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಇಂದು ಬಿಡುಗಡೆ ಮಾಡಿದೆ.

Lockdown 2.0
ಲಾಕ್​ಡೌನ್ 2.0
author img

By

Published : Apr 15, 2020, 8:43 PM IST

ನವದೆಹಲಿ: ಕೊರೊನಾ ವೈರಸ್ ಲಾಕ್‌ಡೌನ್‌ನ ಎರಡನೇ ಹಂತವನ್ನು ಜಾರಿಗೊಳಿಸಲಾಗಿದ್ದು, ಗೃಹ ಸಚಿವಾಲಯ ಬುಧವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಚಿವಾಲಯವು ಎಲ್ಲ ರೀತಿಯ ಸಾರ್ವಜನಿಕ ಸಾರಿಗೆಯನ್ನು ನಿಷೇಧಿಸಿದ್ದು, ಈ ಅವಧಿಯಲ್ಲಿ ಸಾರ್ವಜನಿಕರಿಗೆ ಕೆಲವು ಮಾರ್ಗದರ್ಶನಗಳನ್ನು ನೀಡಿದೆ.

ಏಪ್ರಿಲ್ 20ರಿಂದ ಕೆಲವು ವಲಯಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾದ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳ ಪಟ್ಟಿ ಇಲ್ಲಿದೆ.

  • ಕೃಷಿ, ಮೀನುಗಾರಿಕೆ, ತೋಟಗಾರಿಕೆ ಮತ್ತು ಪಶುಸಂಗೋಪನೆ ಚಟುವಟಿಕೆಗಳಿಗೆ ಅವಕಾಶ
  • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆರ್‌ಬಿಐ ನಿಯಂತ್ರಿತ ಹಣಕಾಸು ಮಾರುಕಟ್ಟೆಗಳು ತೆರೆದಿರುತ್ತವೆ
  • ಡಿಬಿಟಿ ನಗದು ವರ್ಗಾವಣೆ ವಿತರಣೆ ಪೂರ್ಣಗೊಳ್ಳುವವರೆಗೆ ಸಾಮಾನ್ಯ ಕೆಲಸದದಂತೆ ಬ್ಯಾಂಕ್ ಶಾಖೆಗಳ ಕಾರ್ಯಚರಣೆಗೆ ಅನುಮತಿಸಲಾಗಿದೆ
  • ಕ್ಯಾಪಿಟಲ್, ಸಾಲ ಮಾರುಕಟ್ಟೆ ಸೇವೆಗಳು ಮತ್ತು ವಿಮೆ ಕಂಪನಿಗಳು ಕಾರ್ಯನಿರ್ವಹಿಸಲಿವೆ
  • ನೀರಿನ ಸಂರಕ್ಷಣೆ ಮತ್ತು ನೀರಾವರಿ ಆದ್ಯತೆಯೊಂದಿಗೆ ಎಂಎನ್‌ಆರ್‌ಇಜಿಎ ಕಾಮಗಾರಿಗಳಿಗೆ ಅವಕಾಶವಿದೆ
  • ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಸಿಎನ್‌ಜಿ, ಇತ್ಯಾದಿಗಳ ಮಾರಾಟ ಮತ್ತು ವಿತರಣೆ
  • ದೂರಸಂಪರ್ಕ ಮತ್ತು ಇಂಟರ್​ನೆಟ್ ಸೇವೆಗಳನ್ನು ಒದಗಿಸುವ ಉಪಯುಕ್ತ ಚಟುವಟಿಕೆಗಳು
  • ಎಲ್ಲ ಸರಕು ವಾಹನಗಳು ಓಡಿಸಲು ಅನುಮತಿಸಲಾಗುವುದು. ರೈಲ್ವೆ, ವಿಮಾನಯಾನ, ಬಂದರು, ಟ್ರಕ್‌ಗಳ ಚಲನೆಗೆ ಅನ್ವಯಿಸುತ್ತದೆ
  • ಕಿರಾಣಿ, ಹಣ್ಣು- ಹಂಪಲು, ತರಕಾರಿ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಯಾವುದೇ ಸಮಯದ ನಿರ್ಬಂಧವಿಲ್ಲದೆ ಕಾರ್ಯನಿರ್ವಹಿಸಲು ಅವಕಾಶ
  • ಐಟಿ ಮತ್ತು ಐಟಿ ಸಂಬಂಧಿತ ಸೇವಾ ಸಂಸ್ಥೆಗಳು ಶೇ 50ರಷ್ಟು ಉದ್ಯೋಗಗಳೊಂದಿಗೆ ಕಾರ್ಯಾಚರಣೆ
  • ಇ-ಕಾಮರ್ಸ್ ಕಂಪನಿಗಳು
  • ಕೊರಿಯರ್ ಸೇವೆಗಳು
  • ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮು ಸೇವೆಗಳು
  • ಖಾಸಗಿ ಭದ್ರತಾ ಸೇವೆಗಳು
  • ಸ್ವಯಂ ಉದ್ಯೋಗಿದ ಸೇವೆಗಳು; ಉದಾ- ಎಲೆಕ್ಟ್ರಿಷಿಯನ್, ಐಟಿ ರಿಪೇರಿ, ಕೊಳಾಯಿಗಾರರು, ಮೋಟಾರ್ ಮೆಕ್ಯಾನಿಕ್ಸ್ ಮತ್ತು ಬಡಗಿಗಳು
  • ಹೋಟೆಲ್‌, ಹೋಂಸ್ಟೇ, ವಸತಿಗೃಹಗಳು ಮತ್ತು ಮೋಟೆಲ್​ಗಳು ಲಾಕ್​ಡೌನ್​ನಲ್ಲಿ ಸಿಲುಕೊಂಡಿರುವ ಪ್ರವಾಸಿಗರಿಗೆ, ವೈದ್ಯಕೀಯ, ತುರ್ತು ಸಿಬ್ಬಂದಿ, ವಾಯು ಮತ್ತು ಸಮುದ್ರಯಾನ ಸಿಬ್ಬಂದಿಗೆ ಅವಕಾಶ
  • ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆಗಳಿಗೆ ಅವಕಾಶ. ಮುನ್ಸಿಪಲ್​ ಕಾರ್ಪೊರೇಷನ್ ಮತ್ತು ಮುನ್ಸಿಪಾಲ್ಟಿ ವ್ಯಾಪ್ತಿಯ ಹೊರಗಿನ ಕೈಗಾರಿಕೆಗಳಿಗೆ
  • ಎಸ್​ಇಝ್ಯಡ್​, ರಫ್ತು ಆಧಾರಿತ ಘಟಕಗಳು, ಕೈಗಾರಿಕಾ ಎಸ್ಟೇಟ್​, ಕೈಗಾರಿಕಾ ಟೌನ್‌ಶಿಪ್‌ಗಳಲ್ಲಿ ಪ್ರವೇಶ ನಿಯಂತ್ರಣ ಹೊಂದಿರುವ ಉತ್ಪಾದನೆ ಮತ್ತು ಇತರ ಕೈಗಾರಿಕಾ ಸಂಸ್ಥೆಗಳಿಗೆ ವಿನಾಯಿತಿ
  • ಗ್ರಾಮೀಣ ಪ್ರದೇಶಗಳಲ್ಲಿನ ಆಹಾರ ಸಂಸ್ಕರಣಾ ಕೈಗಾರಿಕೆಗಳು
  • ಗಣಿಗಾರಿಕೆ ಕಾರ್ಯಾಚರಣೆ
  • ಪ್ಯಾಕೇಜಿಂಗ್ ವಸ್ತುಗಳ ಉತ್ಪಾದನಾ ಘಟಕಗಳು
  • ಗ್ರಾಮೀಣ ಪ್ರದೇಶದಲ್ಲಿ ಇಟ್ಟಿಗೆ ಗೂಡುಗಳು
  • ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ನೀರಾವರಿ ಯೋಜನೆ, ಕಟ್ಟಡ, ಎಂಎಸ್‌ಎಂಇ ಇತ್ಯಾದಿಗಳ ನಿರ್ಮಾಣಕ್ಕೆ ಅವಕಾಶ
  • ಕೈಗಾರಿಕಾ ಎಸ್ಟೇಟ್​ಗಳಲ್ಲಿ ಎಲ್ಲಾ ರೀತಿಯ ಯೋಜನೆಗಳಿಗೆ ಅವಕಾಶ
  • ನಗರಸಭೆ ಮತ್ತು ಪುರಸಭೆಗಳ ಮಿತಿಯೊಳಗೆ ನಿರ್ಮಾಣ ಯೋಜನೆಗಳಲ್ಲಿನ ಕಾಮಗಾರಿಗಳ ಮುಂದುವರಿಕೆ. ಸ್ಥಳೀಯವಾಗಿ ಲಭ್ಯವಿರುವ ಕಾರ್ಮಿಕರ ಬಳಕೆ. ಯಾವುದೇ ಕಾರ್ಮಿಕರನ್ನು ಹೊರಗಿನಿಂದ ಕರೆತರುವಂತಿಲ್

ಮೇ 3ರವರೆಗೆ ನಿಷೇಧಿತ ಕಾರ್ಯಚರಣೆಗಳು

  • ಎಲ್ಲಾ ವೈದ್ಯಕೀಯ ಮತ್ತು ಪಶುವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ದಾದಿಯರು, ಪ್ಯಾರಾ ಮೆಡಿಕಲ್​ ಸಿಬ್ಬಂದಿ, ಲ್ಯಾಬ್ ತಂತ್ರಜ್ಞರ ಇತರ ಆಸ್ಪತ್ರೆ ಬೆಂಬಲ ಸೇವಾ ಮತ್ತು ಭದ್ರತಾ ಉದ್ದೇಶಗಳ ಪ್ರಯಾಣ ಹೊರತುಪಡಿಸಿ ಎಲ್ಲಾ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ರದ್ದು
  • ಭದ್ರತಾ ಉದ್ದೇಶಗಳನ್ನು ಹೊರತುಪಡಿಸಿ ರೈಲುಗಳ ಎಲ್ಲಾ ಪ್ರಯಾಣಿಕ ಸಂಚಾರ ನಿಷೇಧ
  • ಸಾರ್ವಜನಿಕ ಸಾರಿಗೆಗೆ ಬಸ್​ಗಳ ಸೇವೆ ಬಂದ್
  • ಮೆಟ್ರೋ ರೈಲು ಸೇವೆಗಳು ಸ್ಥಗಿತ
  • ವೈದ್ಯಕೀಯ ಕಾರಣಗಳಿಗೆ ಅಥವಾ ಈ ಮಾರ್ಗಸೂಚಿಗಳ ಅಡಿಯಲ್ಲಿ ಅನುಮತಿಸಲಾದ ಚಟುವಟಿಕೆಗಳನ್ನು ಹೊರತುಪಡಿಸಿ ವ್ಯಕ್ತಿಗಳ ಅಂತರ ಜಿಲ್ಲೆ ಮತ್ತು ಅಂತರ ರಾಜ್ಯ ಸಂಚಾರ
  • ಎಲ್ಲ ಶೈಕ್ಷಣಿಕ, ತರಬೇತಿ, ಕೋಚಿಂಗ್​ ಸಂಸ್ಥೆಗಳು ಬಂದ್
  • ಈ ಮಾರ್ಗಸೂಚಿಗಳ ಅಡಿಯಲ್ಲಿ ನಿರ್ದಿಷ್ಟವಾಗಿ ಅನುಮತಿಸಲಾದ ಎಲ್ಲ ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳು ನಿಷೇಧ
  • ಈ ಮಾರ್ಗಸೂಚಿಗಳ ಅಡಿಯಲ್ಲಿ ನಿರ್ದಿಷ್ಟವಾಗಿ ಅನುಮತಿಸಲಾದ ಆತಿಥ್ಯ ಸೇವೆಗಳಿಗೆ ವಿರಾಮ
  • ಟ್ಯಾಕ್ಸಿ (ಆಟೋ ರಿಕ್ಷಾ ಮತ್ತು ಸೈಕಲ್ ರಿಕ್ಷಾ ಸೇರಿದಂತೆ) ಮತ್ತು ಕ್ಯಾಬ್ ಸೇವೆಗಳು ಬಂದ್
  • ಸಿನೆಮಾ ಹಾಲ್‌, ಮಾಲ್‌, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್​, ಕ್ರೀಡಾ ಸಂಕೀರ್ಣ, ಈಜುಕೊಳ, ಮನರಂಜನಾ ಉದ್ಯಾನ, ಚಿತ್ರಮಂದಿರ, ಬಾರ್‌ ಮತ್ತು ಅಸೆಂಬ್ಲಿ ಹಾಲ್‌ ನಿಷೇಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.