ಪ್ರಮುಖ ಯೋಜನೆಗಳನ್ನ ಮುಂದುವರಿಸಲು ನಿರ್ಧರಿಸಿದ್ದು, ಹೊಸ ಕೃಷಿ ನೀತಿ ಜಾರಿ, ಭಾಗ್ಯಲಕ್ಷ್ಮಿ ಯೋಜನೆ ಮುಂದುವರಿಕೆ, ಶಾಲಾ ಮಕ್ಕಳಿಗೆ ಬೈಸಿಕಲ್ ಯೋಜನೆ ಮುಂದುವರಿಕೆ, ತೋಟಗಾರಿಕೆಯನ್ನು ಉದ್ದಿಮೆಯಾಗಿಸಲು ನಿರ್ಧಾರ ಮಾಡಲಾಗಿದೆ.
ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಬಿಎಸ್ವೈ ದೇಶದಲ್ಲೇ ಮೊದಲ ಬಾರಿಗೆ ಕೃಷಿಗೆ ಹೆಚ್ಚು ಮಹತ್ವ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಶೇ. 9.5ರಷ್ಟು ಅನುದಾನವನ್ನ ಕೃಷಿಗೆ ನೀಡಿದ್ದಾರೆ. ರಾಜ್ಯ ಬಜೆಟ್‌ನಲ್ಲೂ ಕೃಷಿಗೆ ಹೆಚ್ಚು ಮಹತ್ವ ನೀಡಲಾಗುವುದು ಎಂದು ತಿಳಿಸಿದರು.
ಸಾವಯವ ಕೃಷಿ ಪ್ರೋತ್ಸಾಹಕ್ಕಾಗಿ 200 ಕೋಟಿ ರೂ, ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ ಪ್ರಾರಂಭ, ಶಿವಮೊಗ್ಗದ ತೋಟಗಾರಿಕೆ ಹಾಗೂ ಕೃಷಿ ವಿವಿಗೆ ಕಾಮಗಾರಿಗೆ 150 ಕೋಟಿ ರೂ ಹಂಚಿಕೆ, ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗೆ 2600 ಕೋಟಿ ರೂ., ರೈತರು ಅಧಿಕ ಬಡ್ಡಿಯಿಂದ ತಪ್ಪಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಬಿಎಸ್ವೈ ವಿವರಿಸಿದ್ದಾರೆ.
ರೈತರಿಗಾಗಿ ಹೊಸ ಕೃಷಿ ನೀತಿ ಜಾರಿ ತರುವ ಮೂಲಕ ಸಣ್ಣ ಹಾಗೂ ಅತಿ ಸಣ್ಣ ರೈತರ ಅಭಿವೃದ್ಧಿಗಾಗಿ ವಾರ್ಷಿಕ 10 ಸಾವಿರ ಅನುದಾನ ನೀಡಲಾಗುವುದು. ರೈತರಿಗೆ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ನಿರ್ಧಾರ. ರೈತರ ಮನೆಬಾಗಿಲುಗಳಿಗೆ ಕೀಟನಾಶಕ, ಕಿಸಾನ್ ಸಮ್ಮಾನ್ ಯೋಜನೆಗಾಗಿ 2,600 ಕೋಟಿ ರೂ. ನೀಡಲಾಗುವುದು ಹಾಗೂ ಕರ್ನಾಟಕ ಮತ್ಸ್ಯ ಯೋಜನೆ ಜಾರಿ ತರಲಾಗುವುದು ಎಂದು ತಿಳಿಸಿದ್ದಾರೆ.
ಆರು ವಲಯಗಳಾಗಿ ಬಜೆಟ್ ವಿಂಗಡನೆ ಮಾಡಿ ಮಂಡನೆ ಮಾಡಲಾಗುತ್ತಿದ್ದು, ಕೃಷಿ ಮೂಲಕ ರಾಜ್ಯದ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಹೆಚ್ಚಿನ ಆದ್ಯತೆ ನೀಡಲಾಗುವುದು. ರೈತರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಬದ್ಧವಾಗಿದ್ದು, ಅವರ ಸಮಸ್ಯೆ ನಿವಾರಣೆಗೆ ನಾವು ಸಿದ್ಧ ಎಂದರು.
ಕಳೆದ ವರ್ಷ ಬರಗಾಲದಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಕುಂಠಿತ ಉಂಟಾಗಿದ್ದು, ರೈತರಿಗೆ ಪರಿಹಾರ ನೀಡಲಾಗಿದೆ. ರೈತರ ಕಲ್ಯಾಣ, ಆದಾಯ ದ್ವಿಗುಣಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದು, ರೈತರಿಗಾಗಿ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ ಎಂಬ ಭರವಸೆ ನೀಡಿದರು.