ಬೆಂಗಳೂರು: ಕೃಷಿಯೇತರರಿಗೆ ಬೇಸಾಯ ಮಾಡಲು ಕೃಷಿ ಭೂಮಿ ಖರೀದಿಗೆ ಅನುವು ಮಾಡಿಕೊಡಲು ಸುಗ್ರೀವಾಜ್ಞೆಯ ಮೂಲಕ 'ಕರ್ನಾಟಕ ಭೂ ಸುಧಾರಣಾ ಕಾಯ್ದೆ, 1961ರ ಮಸೂದೆಗೆ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೂ ಸುಧಾರಣಾ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಲಾಗಿದೆ. ಸೋಮವಾರ ರಾತ್ರಿ ರಾಜ್ಯಪಾಲ ವಜುಭಾಯ್ ವಾಲಾ ಅವರು ತಮ್ಮ ಅಂಕಿತ ಹಾಕಿದ್ದಾರೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಉದ್ದೇಶಿತ ಕಾಯ್ದೆಯ ತಿದ್ದುಪಡಿಯಿಂದ ಕೃಷಿಯೇತರರು ಬೇಸಾಯ ಭೂಮಿ ಖರೀದಿಸಲು ಮತ್ತು ಆಹಾರ ಬೆಳೆಗಳನ್ನು ಬೆಳೆಯಲು ಅನುಮತಿ ನೀಡುತ್ತದೆ. ಆದರೆ, ಅವರು ಅದನ್ನು ಇತರ ಚಟುವಟಿಕೆಗಳಿಗೆ ಬಳಸುವಂತಿಲ್ಲ.
ಕಾಯ್ದೆಯ 79 ಎ, ಬಿ ಮತ್ತು ಸಿ ವಿಭಾಗಗಳನ್ನು ರದ್ದುಪಡಿಸಲಾಗಿದೆ. ಕೃಷಿಕನಾಗಲು ಬಯಸುವ ನಾಗರಿಕರಿಗೆ ಜಮೀನಿನಲ್ಲಿ ಹೂಡಿಕೆ ಮಾಡಲು ಮತ್ತು ಕೃಷಿಯನ್ನು ಹವ್ಯಾಸ, ಉತ್ಸಾಹ ಅಥವಾ ಹೆಚ್ಚುವರಿ ಉದ್ಯೋಗವಾಗಿ ತೆಗೆದುಕೊಂಡು ಹೋಗಲು ದಾರಿ ಮಾಡಿಕೊಡುತ್ತದೆ ಎಂದು ಅಧಿಕಾರಿ ಹೇಳಿದರು.
ತಿದ್ದುಪಡಿ ಮಾಡಿದ ಕಾಯ್ದೆಯಿಂದ ರಾಜ್ಯಕ್ಕೆ ಕೃಷಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತದೆ. ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ರಾಜ್ಯದ ಒಟ್ಟು ದೇಶಿಯ ಉತ್ಪನ್ನಕ್ಕೆ (ಜಿಡಿಪಿ) ಕೃಷಿ ಕ್ಷೇತ್ರದ ಕೊಡುಗೆ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಿಗಿಂತ ಕಡಿಮೆಯಾಗಿದೆ.
ಜೂನ್ 11ರಂದು ಕ್ಯಾಬಿನೆಟ್ ಕಾಯ್ದೆ ಬದಲಾವಣೆಗೆ ಅಂಗೀಕರಿಸಿದಾಗಿನಿಂದ ರೈತರು, ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ಪ್ರತಿರೋಧ ವ್ಯಕ್ತಪಡಿಸಿತು. ಜಲಾಶಯ ನೀರಾವರಿ ಕೃಷಿಭೂಮಿಯ ಮಾರಾಟವನ್ನು ತಡೆಗೆ ತಿದ್ದುಪಡಿಯೊಂದಿಗೆ ಕಾಯ್ದೆಯ ಸೆಕ್ಷನ್ 80 ಅನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತು.
ಸುಗ್ರೀವಾಜ್ಞೆಯು ಹೊಸ ವಿಭಾಗವನ್ನು (80 ಎ) ಸೇರ್ಪಡೆ ಮಾಡಲಾಗಿದೆ. ಇದು ಕರ್ನಾಟಕ ಎಸ್ಸಿ ಮತ್ತು ಎಸ್ಟಿ ಕಾಯ್ದೆ, 1978ರ ಅಡಿಯಲ್ಲಿ ರೈತರಿಗೆ ನೀಡಲಾದ ಜಮೀನಿಗೆ ಕಾಯ್ದೆಯಡಿ ವಿಶ್ರಾಂತಿ ಅನ್ವಯಿಸುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.