ನವದೆಹಲಿ: ಮುಂಬರುವ ಕೇಂದ್ರ ಬಜೆಟ್ 2021-22ರಲ್ಲಿ ಜಾಗತಿಕ ಮಾನದಂಡಗಳನ್ನು ಪೂರೈಸಲು ಸಂಶೋಧನಾ ಮತ್ತು ಅಭಿವೃದ್ಧಿ (ಆರ್&ಡಿ) ಹಾಗೂ ಪರೀಕ್ಷಾ ಪ್ರಯೋಗಾಲಯಗಳಿಗೆ ಹೊಸ ನಿಧಿ ಸ್ಥಾಪಿಸುವಂತೆ ರಫ್ತುದಾರರ ಸಂಸ್ಥೆ ಕೇಂದ್ರವನ್ನು ಒತ್ತಾಯಿಸಿದೆ.
ವ್ಯಾಪಾರ ಮುಂಚೂಣಿಯಲ್ಲಿ ಇರುವ ಸವಾಲುಗಳನ್ನು ಎದುರಿಸಲು ಸುಂಕದ ವಹಿವಾಟುಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸುಂಕೇತರ ಅಡೆತಡೆಗಳು (ಎನ್‌ಟಿಬಿ) ಹೆಚ್ಚಾಗುವ ಆತಂಕವಿದೆ ಎಂದು ವ್ಯಾಪಾರ ಉತ್ತೇಜನ ಮಂಡಳಿ (ಟಿಪಿಸಿಐ) ಸಂಸ್ಥಾಪಕ ಅಧ್ಯಕ್ಷ ಮೋಹಿತ್ ಸಿಂಗ್ಲಾ ಕಳವಳ ವ್ಯಕ್ತಪಡಿಸಿದರು.
ಇಂತಹ ಹೊಡೆತಗಳಿಂದ ತಪ್ಪಿಸಲು ಭಾರತೀಯ ಟೆಕ್ಸ್ಟಿಂಗ್ ಲ್ಯಾಬ್‌ಗಳು ಅಥವಾ ಸೌಲಭ್ಯಗಳನ್ನು ಜಾಗತಿಕವಾಗಿ ಸುರಕ್ಷಿತ ಮಾನದಂಡಗಳ ಸರಿಸಮನಾಗಿ ತಂದು ನಿಲ್ಲಿಸಬೇಕು. ಇದರಿಂದ ವಿಶ್ವಾದ್ಯಂತ ಸುಲಭವಾಗಿ ಅಂಗೀಕಾರ ಪಡೆಯುತ್ತವೆ. ಐರೋಪ್ಯ ಒಕ್ಕೂಟದ ಆಹಾರ ಗುಣಮಟ್ಟ ಮಾಪನದ ಹೊಸ ಅಲಿಮೆಂಟ್ರಸ್ ಕೋಡೆಕ್ಸ್ ಸ್ಟ್ಯಾಂಡರ್ಡ್ನ ಗುರಿಗಳನ್ನು ಮುಟ್ಟಲು ಸಾಕಷ್ಟು ಹೂಡಿಕೆಯ ಅಗತ್ಯವಿದೆ. ಜಾಗತಿಕವಾದ ಮಾನದಂಡಗಳನ್ನು ಪೂರೈಸಲು ಆರ್&ಡಿ ಮತ್ತು ಪರೀಕ್ಷಾ ಪ್ರಯೋಗಾಲಯಗಳಿಗೆ ಹೆಚ್ಚಿನ ಹಣ ಅಥವಾ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಐಎಂಎ ಪೊಂಜಿ ಸ್ಕ್ಯಾಮ್ನಂತೆ 31 ಲಕ್ಷ ಜನರಿಗೆ ಧೋಖಾ: 261 ಕೋಟಿ ಆಸ್ತಿ ಮುಟ್ಟುಗೋಲು
ಜಾಗತಿಕವಾಗಿ ಬ್ರಾಂಡ್ ಮಾರ್ಕೆಟಿಂಗ್‌ಗೆ ಬಜೆಟ್ನಲ್ಲಿ 'ರಿಯಾಯಿತಿ ಸಾಲ ಯೋಜನೆ' ಘೋಷಿಸಬೇಕು. ಭಾರತೀಯ ಉತ್ಪನ್ನಗಳು ಜಾಗತಿಕ ಮಟ್ಟವನ್ನು ತಲುಪುವ ಅವಶ್ಯಕತೆಯಿದೆ. ಸಣ್ಣ ಮತ್ತು ಮಧ್ಯಮ ಕಂಪನಿಗಳಿಗೆ ಭಾರಿ ವೆಚ್ಚವಾಗಿ ಹೆಚ್ಚಿನ ಹೊರೆಯಾಗುತ್ತಿದೆ ಎಂದರು.
ಹೆಚ್ಚಿನ ವೆಚ್ಚ ಪೂರೈಸಲು ರಿಯಾಯಿತಿಯಾಗಿ ಸಾಲ ನೀಡಬೇಕು. ಇಲ್ಲವೇ ವಿದೇಶಗಳಲ್ಲಿ ಬ್ರ್ಯಾಂಡ್‌ಗಳ ಮಾರಾಟಕ್ಕೆ ತಗುಲುವ ಖರ್ಚಿನ ಮೇಲಿನ ತೆರಿಗೆ ವಿನಾಯಿತಿ ಕಲ್ಪಿಸಬೇಕು. ಭಾರತೀಯ ಉತ್ಪನ್ನಗಳನ್ನು ಜಾಗತಿಕ ಬ್ರಾಂಡ್ಗಳ ಜತೆ ಅಳೆಯುವ ಸಮಯ ಬಂದಿದೆ ಎಂದರು.
ಹೆಚ್ಚುವರಿ ಪ್ರೋತ್ಸಾಹಕವಾಗಿ ಆಹಾರ ಮಾರಾಟದ ಮೇಲೆ ಇನ್ಪುಟ್ ತೆರಿಗೆ ಸಾಲ ನೀಡಬೇಕು. ಡಿಜಿಟಲ್ ಮೂಲಸೌಕರ್ಯ ಸೇರಿದಂತೆ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ 5 ವರ್ಷಗಳ ತೆರಿಗೆ ರಜೆ ಘೋಷಿಸಬೇಕು. ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಆಧುನೀಕರಣವನ್ನು ಉತ್ತೇಜಿಸಲು ಬಂಡವಾಳ ಹೂಡಿಕೆಯನ್ನು ಶೇ 50ರವರೆಗೆ ವಿಸ್ತರಿಸಲಾಗುವುದು. ಇದಲ್ಲದೇ ಬಡ್ಡಿ ಸಬ್‌ವೆನ್ಷನ್, ಕಡಿಮೆ ತೆರಿಗೆ, ತಂತ್ರಜ್ಞಾನದ ಪ್ರವೇಶದ ಮೂಲಕ ಆಹಾರ ಸಂಸ್ಕರಣೆಗೆ ವಿಶೇಷ ಪ್ರೋತ್ಸಾಹ ನೀಡುವಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿಂಗ್ಲಾ ಮನವಿ ಮಾಡಿದ್ದಾರೆ.