ETV Bharat / business

ಕೊರೊನಾ ಬಳಿಕ ಚೀನಾ ತೊರೆದು ಭಾರತಕ್ಕೆ ಬರಲಿವೆ 105 ಕಂಪನಿಗಳು

ಕೋವಿಡ್​-19ನ ಮತ್ತೊಂದು ಪ್ರಮುಖ ಫಲಿತಾಂಶವೆಂದರೆ ಜಾಗತಿಕ ಪೂರೈಕೆ ಸರಪಳಿಗಳು ಚೀನಾದಿಂದ ಇತರ ಆರ್ಥಿಕತೆಗಳಿಗೆ ಬದಲಾಗುವ ಸಾಧ್ಯತೆ ಇದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಸುಮಾರು 70 ಪ್ರತಿಶತದಷ್ಟು ಜನರು, ಇದರಿಂದ ಭಾರತವು ಹೆಚ್ಚಿನ ಪ್ರಯೋಜನ ಪಡೆಯಬಹುದೆಂದು ಹೇಳಿದ್ದಾರೆ. ಉತ್ಪಾದನೆಯ ನ್ಯಾಯಯುತ ಪಾಲು ಬದಲಾಗಬಹುದೆಂಬ ನಿರೀಕ್ಷೆಯಿಂದ ಮುಂದಿನ ದಿನಗಳಲ್ಲಿ ಚೀನಾದಿಂದ ಭಾರತಕ್ಕೆ ಸ್ಥಳಾಂತರ ಆಗಬಹುದು ಎಂದು ಫಿಕ್ಕಿ ಹೇಳಿದೆ.

India China Trade
ಭಾರತ ಚೀನಾ
author img

By

Published : Dec 28, 2020, 8:17 PM IST

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಬಳಿಕ ಚೀನಾದಿಂದ ಜಾಗತಿಕ ಪೂರೈಕೆ ಸರಪಳಿಗಳು ಬೇರೆ ರಾಷ್ಟ್ರಗಳ ಆರ್ಥಿಕತೆಗಳೊಂದಿಗೆ ಬದಲಾಗುವುದರಿಂದ ಭಾರತಕ್ಕೆ ಹೆಚ್ಚಿನ ಲಾಭ ಆಗಬಹುದು ಎಂದು ಸಮೀಕ್ಷೆಯೊಂದು ತಿಳಿಸಿದೆ.

ಈ ತಿಂಗಳು ಫಿಕ್ಕಿ-ಧ್ರುವ ಸಲಹೆಗಾರರು ​​ಭಾರತದ 150ಕ್ಕೂ ಹೆಚ್ಚು ಕಂಪನಿಗಳನ್ನು ಒಳಗೊಂಡು ಸಮೀಕ್ಷೆ ನಡೆಸಿದ್ದಾರೆ.

ಕೋವಿಡ್​-19ನ ಮತ್ತೊಂದು ಪ್ರಮುಖ ಫಲಿತಾಂಶವೆಂದರೆ ಜಾಗತಿಕ ಪೂರೈಕೆ ಸರಪಳಿಗಳು ಚೀನಾದಿಂದ ಇತರ ಆರ್ಥಿಕತೆಗಳಿಗೆ ಬದಲಾಗುವ ಸಾಧ್ಯತೆ ಇದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಸುಮಾರು 70 ಪ್ರತಿಶತದಷ್ಟು ಜನರು, ಇದರಿಂದ ಭಾರತವು ಹೆಚ್ಚಿನ ಪ್ರಯೋಜನ ಪಡೆಯಬಹುದೆಂದು ಹೇಳಿದ್ದಾರೆ. ಉತ್ಪಾದನೆಯ ನ್ಯಾಯಯುತ ಪಾಲು ಬದಲಾಗಬಹುದೆಂಬ ನಿರೀಕ್ಷೆಯಿಂದ ಮುಂದಿನ ದಿನಗಳಲ್ಲಿ ಚೀನಾದಿಂದ ಭಾರತಕ್ಕೆ ಸ್ಥಳಾಂತರ ಆಗಬಹುದು ಎಂದು ಫಿಕ್ಕಿ ಹೇಳಿದೆ.

ಮುಂದಿನ ವರ್ಷದ ಆರಂಭದಲ್ಲಿ ಕೋವಿಡ್​-19 ಲಸಿಕೆ ಪರಿಚಯಿಸುವ ನಿರೀಕ್ಷೆಯು ವಹಿವಾಟುಗಳ ವಿಶ್ವಾಸಾರ್ಹ ಮಟ್ಟ ಸುಧಾರಿಸಿದೆ. ಸುಮಾರು 74 ಪ್ರತಿಶತದಷ್ಟು ಸಂವಾದಿಗಳು, ಲಸಿಕೆ ಲಭ್ಯದ ನಂತರ ತಮ್ಮ ವ್ಯವಹಾರದ ಮೇಲೆ ಮಹತ್ವದ ಸಕಾರಾತ್ಮಕ ಪರಿಣಾಮ ನಿರೀಕ್ಷಿಸುತ್ತಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಇದನ್ನೂ ಓದಿ: GST ನಷ್ಟ ಪರಿಹಾರ: 23 ರಾಜ್ಯಗಳಿಗೆ 49,033 ಕೋಟಿ ರೂ. ಬಿಡುಗಡೆ... ಇದರಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

ಭಾರತದತ್ತ ಬರಬಹುದಾದ ಅವಕಾಶಗಳನ್ನು ಲಾಭ ಮಾಡಿಕೊಳ್ಳಲು ಉತ್ಪಾದನಾ ವಾತಾವರಣವನ್ನು ಬಲಪಡಿಸುವ ಅವಶ್ಯಕತೆಯಿದೆ. ಆತ್ಮ ನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ ಆರ್ಥಿಕತೆಯ ತ್ವರಿತ ಸಂಕಷ್ಟ ನಿವಾರಣೆಗೆ ಸರ್ಕಾರ ಹಲವು ಕ್ರಮಗಳನ್ನು ಪರಿಚಯಿಸಿದೆ. ಭಾರತದ ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಕ್ರಮಗಳು ಇದರಲ್ಲಿ ಸೇರಿವೆ.

ಆತ್ಮ ನಿರ್ಭರ ಕ್ರಮಗಳಿಗೆ ಉದ್ಯಮದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮೀಕ್ಷೆ ನಡೆಸಿದ ಕಂಪನಿಗಳಲ್ಲಿ 45 ಪ್ರತಿಶತದಷ್ಟು ಜನರು 'ಉತ್ತಮದಿಂದ ಅತ್ಯುತ್ತಮ'ವಾದ ಪ್ರಕಟಣೆಗಳನ್ನು ಘೋಷಣೆ ಮಾಡಲಾಗಿದೆ ಎಂದು ಶ್ರೇಯಾಂಕ ನೀಡಿದ್ದಾರೆ.

ಸಮೀಕ್ಷೆಯ ಫಲಿತಾಂಶಗಳು ಈಗ ನಡೆಯುತ್ತಿರುವ ಕೈಗಾರಿಕಾ ಮತ್ತು ಆರ್ಥಿಕ ಚೇತರಿಕೆಗೆ ಉತ್ತೇಜನ ನೀಡುತ್ತವೆ. ಈ ವೇಗ ಕಾಯ್ದುಕೊಳ್ಳುವ ಅಗತ್ಯವಿದೆ. ಈಗ ಎಲ್ಲರ ಗಮನವು ಮುಂಬರುವ ಬಜೆಟ್ ಮೇಲೆ ಇದೆ ಎಂದು ಫಿಕ್ಕಿ ಅಧ್ಯಕ್ಷ ಉದಯ್ ಶಂಕರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.