ವಾಷಿಂಗ್ಟನ್: ಜಾಗತಿಕ ಆರ್ಥಿಕತೆಯು 1930ರ ದಶಕದಲ್ಲಿ ಮಹಾ ಆರ್ಥಿಕ ಕುಸಿತದ ನಂತರದ ಭೀಕರ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಕಾರಣ 2020ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 1.9ರಷ್ಟು ಇರಬಹುದೆಂದು ಐಎಂಎಫ್ ಅಂದಾಜಿಸಿದೆ.
ಕೊರೊನಾ ವೈರಸ್ ವಿಶ್ವದಾದ್ಯಂತ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಭಾರತವು 1991ರ ಉದಾರೀಕರಣ ಅಳವಡಿಸಿಕೊಂಡ ನಂತರ ಅತ್ಯಂತ ಕೆಟ್ಟ ಬೆಳವಣಿಗೆಯ ಕಾರ್ಯಕ್ಷಮತೆ ದಾಖಲಿಸುವ ಸಾಧ್ಯತೆಯಿದೆ. ಆದರೂ ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಇತ್ತೀಚಿನ ವಿಶ್ವ ಆರ್ಥಿಕ ವರದಿಯಲ್ಲಿ ಭಾರತವನ್ನು ವಿಶ್ವದ ವೇಗವಾಗಿ ಬೆಳಯುತ್ತಿರುವ ಆರ್ಥಿಕತೆಗಳ ಸಾಲಿನಲ್ಲಿ ಇರಿಸಿದೆ.
2020ರಲ್ಲಿ ಸಕಾರಾತ್ಮಕ ಬೆಳವಣಿಗೆಯ ದರ ಭಾರತ ಮತ್ತು ಚೀನಾ ದಾಖಲಿಸಲಿವೆ ಎಂದು ಐಎಂಎಫ್ ಅಂದಾಜಿಸಿದೆ. ಚೀನಾ ಶೇ 1.2ರಷ್ಟು ಬೆಳವಣಿಗೆ ದರ ಹೊಂದಲಿದೆ ಎಂದು ಊಹಿಸಿದೆ.
ನಾವು 2020ರಲ್ಲಿ ಜಾಗತಿಕ ಬೆಳವಣಿಗೆಯನ್ನು ಶೇ -3ಕ್ಕೆ ಇಳಿಸುತ್ತೇವೆ. ಇದು 2020ರ ಜನವರಿಯ ಶೇ 6.3ರಷ್ಟು ಅಂಕಗಳಿಂದ ತಗ್ಗಿಸುತ್ತಿದ್ದೇವೆ. ಇದು ಬಹಳ ಕಡಿಮೆ ಅವಧಿಯಲ್ಲಿ ಪ್ರಮುಖ ಪರಿಷ್ಕರಣೆಯಾಗಿದೆ. ಕೋವಿಡ್-19 ಸಾಂಕ್ರಾಮಿಕವು ಎಲ್ಲ ಪ್ರದೇಶಗಳ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞ ಭಾರತೀಯ ಮೂಲದ ಅಮೆರಿಕನ್ ಗೀತಾ ಗೋಪಿನಾಥ್ ಹೇಳಿದ್ದಾರೆ.
ಮಹಾ ಕುಸಿತವು ವಿಶ್ವದಾದ್ಯಂತದ ಅತ್ಯಂತ ಕೆಟ್ಟ ಆರ್ಥಿಕ ಕುಸಿತವಾಗಿದ್ದು, 1929ರಿಂದ 10 ವರ್ಷಗಳ ಕಾಲ ಅಮೆರಿಕದಲ್ಲಿ ಆರಂಭವಾಗಿತ್ತು. ವಾಲ್ ಸ್ಟ್ರೀಟ್ನಲ್ಲಿನ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ಕುಸಿದು ಸಂಪೂರ್ಣವಾಗಿ ನೆಲಕ್ಕಚ್ಚಿದಾಗ ಈ ಮಹಾ ಕುಸಿತ ಆರಂಭವಾಗಿತ್ತು.
ಮುಂದುವರಿದ ಆರ್ಥಿಕ ಗುಂಪಿನಲ್ಲಿರುವ ಹೆಚ್ಚಿನ ದೇಶಗಳ ಆರ್ಥಿಕತೆ ಈ ವರ್ಷ ಕುಸಿಯುವ ಮುನ್ಸೂಚನೆ ಇದೆ. ಇದರಲ್ಲಿ ಅಮೆರಿಕ ಶೇ 5.9ರಷ್ಟು, ಜಪಾನ್ ಶೇ 5.2ರಷ್ಟು, ಇಂಗ್ಲೆಂಡ್ ಶೇ 6.5ರಷ್ಟು, ಜರ್ಮನಿ ಶೇ 7.0 ರಷ್ಟು, ಫ್ರಾನ್ಸ್ ಶೇ 7.2ರಷ್ಟು, ಇಟಲಿ ಶೇ 9.1ರಷ್ಟು ಹಾಗೂ ಸ್ಪೇನ್ ಶೇ 8.0ರಷ್ಟು ಎಂದು ಐಎಂಎಫ್ ವರದಿ ತಿಳಿಸಿದೆ.
ಭಾರತ ಶೇ 1.9ರಷ್ಟು ಮತ್ತು ಇಂಡೋನೇಷ್ಯಾ ಶೇ 0.5ರಷ್ಟು ಸೇರಿದಂತೆ ಏಷ್ಯಾ ಪ್ರದೇಶದ ಹಲವು ಆರ್ಥಿಕತೆಗಳು ಸಾಧಾರಣ ದರದಲ್ಲಿ ಬೆಳೆಯುವ ಮುನ್ಸೂಚನೆ ಇದೆ ಎಂದು ಐಎಂಎಫ್ ಹೇಳಿದೆ.
ಲ್ಯಾಟಿನ್ ಅಮೆರಿಕ ಶೇ 5.2 ರಷ್ಟು ಸೇರಿದಂತೆ ಬ್ರೆಜಿಲ್‌ನ ಬೆಳವಣಿಗೆಯ ಮುನ್ಸೂಚನೆಯು ಶೇ 5.3ರಷ್ಟು ಮತ್ತು ಮೆಕ್ಸಿಕೊ ಶೇ 6.6ರಷ್ಟಿದೆ. ಆರ್ಥಿಕ ಚಟುವಟಿಕೆಯಲ್ಲಿ ತೀವ್ರ ಕುಸಿತ ಅಥವಾ ಸಂಕೋಚಿತ ಅನುಭವಿಸುವ ನಿರೀಕ್ಷೆಯಿದೆ. ರಷ್ಯಾದ ಆರ್ಥಿಕತೆಯು ಶೇ 5.5ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದು ಐಎಂಎಫ್ ತಿಳಿಸಿದೆ.