ETV Bharat / state

ಅರ್ಹರಿಗೆ ಬಿಪಿಎಲ್​ ಕಾರ್ಡ್​ ಕೊಟ್ಟೇ ಕೊಡುತ್ತೇವೆ: ಸಿಎಂ ಸಿದ್ದರಾಮಯ್ಯ - CM SIDDARAMAIAH

ಅರ್ಹರಿಗೆ ಬಿಪಿಎಲ್​ ಕಾರ್ಡ್​ ಕೊಟ್ಟೇ ಕೊಡುತ್ತೇವೆ. ಈ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ರು.

CM Siddaramaiah
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Nov 17, 2024, 8:31 PM IST

ಬಾಗಲಕೋಟೆ: ಅನರ್ಹರಿಗೆ ಮಾತ್ರ ಬಿಪಿಎಲ್​ ಕಾರ್ಡ್​ ಕೊಡಲ್ಲ ಅಂತ ಹೇಳಿದ್ದೇವೆ. ಆದಾಯ ತೆರಿಗೆ ಪಾವತಿ ಮಾಡುತ್ತಿರುವವರಿಗೆ, ಸರ್ಕಾರಿ ಕೆಲಸದಲ್ಲಿರುವವರಿಗೆ ಬಿಪಿಎಲ್​ ಕಾರ್ಡ್​ ಕೊಡಬೇಕಾ? ಹಾಗಾಗಿ ಅರ್ಹರಿದ್ದವರಿಗೆ ಬಿಪಿಎಲ್​ ಕಾರ್ಡ್​ ಕೊಟ್ಟೇ ಕೊಡುತ್ತೇವೆ. ಹಾಗೆಯೇ ಅನರ್ಹರಿಂದ ಬಿಪಿಎಲ್​ ಕಾರ್ಡ್​ ತೆಗೆದು, ಎಪಿಎಲ್​ ಕಾರ್ಡ್​ ಮಾಡಿದರೆ ಹೇಗೆ ಎಂದು ಯೋಚಿಸಿದ್ದೇವೆ. ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಬಾಗಲಕೋಟೆ ಜಿಲ್ಲೆಯ ಪ್ರವಾಸದಲ್ಲಿರುವ ಸಿಎಂ ಭಾನುವಾರ ನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. "ಅರ್ಹರಿಗೆ ಬಿಪಿಎಲ್​ ಕಾರ್ಡ್ ತಪ್ಪಿಸದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕಟ್ಟನಿಟ್ಟಿನ ಸೂಚನೆ ನೀಡಿದ್ದೇನೆ" ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ (ETV Bharat)

ಅನರ್ಹರ ಬಿಪಿಎಲ್​ ಕಾರ್ಡ್​ ರದ್ದಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದು ಕಡಿತಗೊಳ್ಳುತ್ತದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿ, "ಗೃಹಲಕ್ಷ್ಮಿಗೆ ಬೇರೆಯೇ ಮಾನದಂಡಗಳಿವೆ. ತೆರಿಗೆ ಪಾವತಿ ಮಾಡುವವರಿಗೆ ಕೊಡುವುದಿಲ್ಲ. ಬಿಪಿಎಲ್​ ಕಾರ್ಡ್​ಗಳು ಬೇರೆ. ಇದಕ್ಕೂ ಅದಕ್ಕೂ ಹೋಲಿಕೆ ಮಾಡಲು ಬರುವುದಿಲ್ಲ. ಜನರನ್ನು ಗೊಂದಲ ಮಾಡುವುದು ಬೇಡ" ಎಂದು ಹೇಳಿದರು.

ನವನಗರದ ತೋಟಗಾರಿಕೆ ವಿಶ್ವವಿದ್ಯಾಲಯ ಪಕ್ಕದ ಮೈದಾನದಲ್ಲಿ ನಡೆದ 71ನೇ ಸಹಕಾರ ಸಪ್ತಾಹ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, "ಕಳೆದ ವರ್ಷ ಕೇಂದ್ರ 5600 ಕೋಟಿ ರೂ. ನಬಾರ್ಡ್​ನಿಂದ ಸಾಲ ನೀಡಿತ್ತು. ಈ ಬಾರಿ 2340 ಕೋಟಿ ಸಾಲ ನೀಡಿದೆ. ರೈತರಿಗೆ ಮಾಡುವ ದ್ರೋಹ ಅಲ್ವಾ?" ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

71st Cooperation Week Day
71ನೇ ಸಹಕಾರ ಸಪ್ತಾಹ ದಿನಾಚರಣೆ (ETV Bharat)

ಸಮಾರಂಭದಲ್ಲಿ‌ ರಾಜ್ಯದ ವಿವಿಧ ಪ್ರದೇಶಗಳಿಂದ ಆಗಮಿಸಿದ 72 ಜನರಿಗೆ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಹಕಾರ ಸಚಿವ ಆರ್. ಬಿ. ತಿಮ್ಮಾಪೂರ, ಜವಳಿ ಸಚಿವ ಶಿವಾನಂದ ಪಾಟೀಲ್​, ಸೇರಿದಂತೆ ಪ್ರಮುಖ ಶಾಸಕರು, ಡಿಸಿಸಿ ಬ್ಯಾಂಕ್​ಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸಮಾರಂಭದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆಯಲ್ಲಿ ರೈತರು ಮತ್ತು ಕಬ್ಬು ಬೆಳೆಗಾರರ ನಿಯೋಗದ ಜೊತೆ ಚರ್ಚೆ ನಡೆಸಿದರು. ಕಬ್ಬು ಬೆಳೆಗಾರರಿಗೆ ಪ್ರತಿ ಟನ್​ಗೆ 3500 ರೂ. ದರ ನಿಗದಿ ಹಾಗೂ ಬಾಕಿ ಹಣ ಪಾವತಿಸಲು ಒತ್ತಾಯಿಸಿದರು.

ರೈತ ಮುಖಂಡರಾದ ಮುತ್ತಪ್ಪ ಕೋಮಾರ, ಸುಭಾಷ್ ಸೂರಗಾಂವಿ, ಈರಣ್ಣ ಹಂಚಿನಾಳ ನೇತೃತ್ವದಲ್ಲಿ ರೈತರು ಸಿಎಂಗೆ ಹಲವು ಬೇಡಿಕೆಗಳ ಮನವಿ ಸಲ್ಲಿಸಿದರು. ರೈತರ ಅಹವಾಲು ಸ್ವೀಕರಿಸಿದ ಬಳಿಕ ಎಲ್ಲಾ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಸಭೆ ಕರೆಯುವಂತೆ ಸಚಿವ ಶಿವಾನಂದ ಪಾಟೀಲರಿಗೆ ಸಿಎಂ ಸೂಚನೆ ನೀಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಒಬ್ಬರೆ ಸೈಟ್​ ಪಡೆದಿಲ್ಲ, ಸಿಬಿಐಗೆ ಕೊಟ್ರೆ ಎಲ್ಲ ಪಕ್ಷದವರ ಹೆಸರು ಹೊರಗೆ ಬರುತ್ತೆ: ಬಸನಗೌಡ ಪಾಟೀಲ್ ಯತ್ನಾಳ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.