ETV Bharat / bharat

ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಕುರುವ ಗ್ಯಾಂಗ್​ನ ದರೋಡೆಕೋರ ಸೆರೆ - KURUVA GANG

ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ಕುರುವ ಗ್ಯಾಂಗ್​ನ ದರೋಡೆಕೋರನನ್ನು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Nov 17, 2024, 8:34 PM IST

ಕೊಚ್ಚಿ(ಕೇರಳ): ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ಕುರುವ ಗ್ಯಾಂಗ್​ನ ದರೋಡೆಕೋರನನ್ನು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸಂತೋಷ್ ಸೆಲ್ವಂ ಬಂಧಿತ.

ನಿನ್ನೆ (ಶನಿವಾರ) ಕುಂದನೂರು ಮೇಲ್ಸೇತುವೆ ಬಳಿ ಮನ್ನಂಚೇರಿ ಪೊಲೀಸರು ಸಂತೋಷ್ ಸೆಲ್ವಂ ಸೇರಿದಂತೆ ಕುರುವ ಗ್ಯಾಂಗ್​ನ ಇತರೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಸಂತೋಷ್​ನ ತಾಯಿ, ಪತ್ನಿ ಸೇರಿದಂತೆ ಗ್ಯಾಂಗ್​ನ ಮಹಿಳೆಯರು ಪೊಲೀಸರನ್ನು ತಡೆದು ವಾಗ್ವಾದಕ್ಕಿಳಿದ್ದಾರೆ. ಇದರ ಲಾಭ ಪಡೆದ ಸಂತೋಷ್ ಸೆಲ್ವಂ ಕೈಕೋಳದೊಂದಿಗೆ ಪರಾರಿಯಾಗಿದ್ದ. ಪೊಲೀಸರು ಉಳಿದ ಇಬ್ಬರು ಆರೋಪಿಗಳನ್ನು ಮರಡು ಠಾಣೆಗೆ ರವಾನಿಸಿದ್ದರು.

ನಂತರ ಪೊಲೀಸರು ಆರೋಪಿಯ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ. ಈ ವೇಳೆ ಆರೋಪಿ ಜವುಗು ಪ್ರದೇಶದಲ್ಲಿ ಅಡಗಿರುವುದು ಗೊತ್ತಾಗಿದೆ. ನಂತರ ಮನ್ನಂಚೇರಿ ಪೊಲೀಸರು ಕೊಚ್ಚಿ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ 75ಕ್ಕೂ ಪೊಲೀಸ್​ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಲಪ್ಪುಳ ಡಿವೈಎಸ್​ಪಿ ಎಂ. ಆರ್. ಮಧು ಬಾಬು ಮತ್ತು ಎರ್ನಾಕುಲಂ ಎಸಿಪಿ ಪಿ. ರಾಜ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಭಾನುವಾರ ಬೆಳಗ್ಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವಿಚಾರಣೆಗಾಗಿ ಅಲಪ್ಪುಳಕ್ಕೆ ಕರೆದೊಯ್ಯಲಾಗಿದೆ.

ಶಬರಿಮಲೆ ಮಂಡಲ ಪೂಜೆ, ದರ್ಶನ ಪ್ರಾರಂಭದ ನಂತರ ಸಕ್ರಿಯವಾಗುವ ತಮಿಳುನಾಡಿನ ಕುರುವ ಗ್ಯಾಂಗ್ ಅಲಪ್ಪುಳಕ್ಕೆ ಬಂದಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ ಎಂದು ಅಲಪ್ಪುಳದ ಡಿವೈಎಸ್​ಪಿ ಎಂ. ಆರ್. ಮಧುಬಾಬು ತಿಳಿಸಿದ್ದಾರೆ. ತಮಿಳುನಾಡಿನ ಕಾಮಾಕ್ಷಿಪುರಂನ 13 ಮಂದಿಯೊಂದಿಗೆ ಸಂತೋಷ್ ಕಳ್ಳತನಕ್ಕಾಗಿ ಕೇರಳಕ್ಕೆ ಬಂದಿದ್ದ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ಸಂತೋಷ್ ಕೇರಳವೊಂದರಲ್ಲೇ 8 ದರೋಡೆ ಪ್ರಕರಣಗಳು ಸೇರಿದಂತೆ ಒಟ್ಟು 30 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಎರ್ನಾಕುಲಂ ಗ್ರಾಮಾಂತರದಲ್ಲಿ ಇತ್ತೀಚಿಗೆ ನಡೆದ ಕಳ್ಳತನಗಳು ಮತ್ತು ಉತ್ತರ ಅಲಪ್ಪುಳದಲ್ಲಿ ನಡೆದ ಸರಣಿ ದರೋಡೆಗಳಲ್ಲಿ ಆರೋಪಿಯ ಪಾತ್ರ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ಎರಡು ವಾರಗಳಿಂದ ಕುರುವ ಗ್ಯಾಂಗ್ ಸುಮಾರು 10 ಕಳ್ಳತನ ಕೃತ್ಯ ಎಸಗಿದೆ.

ಇದನ್ನೂ ಓದಿ: ಅಪಹರಣಕ್ಕೊಳಗಾದ ಒಂದೂವರೆ ತಿಂಗಳ ಮಗು ರೈಲು ನಿಲ್ದಾಣದಲ್ಲಿ ಪತ್ತೆ: ಮಹಿಳೆ ಸೇರಿ ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.