ETV Bharat / business

ಕೊರೊನಾ 2ನೇ ಅಲೆ ಭಾರತಕ್ಕೆ ₹ 5.4 ಲಕ್ಷ ಕೋಟಿ ಖೋತಾ.. ಇನ್ನು ಜಿಡಿಪಿ ಗತಿ ಹೇಗೆ?

ಸಾಂಕ್ರಾಮಿಕ ಹೆಚ್ಚಳದಿಂದ ಪರಿಸ್ಥಿತಿ ಹದಗೆಟ್ಟರೆ 2021-22ರ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆಯ ದರವು ಶೇ 7.7ರಷ್ಟಾಗುತ್ತದೆ. ಮೂರನೇ ಅಲೆ ಬಂದು ಮತ್ತೊಂದು ಎಂಟು ವಾರಗಳವರೆಗೆ ಲಾಕ್‌ಡೌನ್‌ಗಳು ಮತ್ತು ಬಿಗಿಯಾದ ನಿರ್ಬಂಧಗಳು ಜಾರಿಗೆ ಬಂದರೆ ಇನ್ನೂ 42.6 ಶತಕೋಟಿ ಡಾಲರ್‌ಗಳಷ್ಟು ಆರ್ಥಿಕ ನಷ್ಟ ಅನುಭವಿಸಲಿದೆ ಎಂದು ಮುನ್ಸೂಚನೆ ನೀಡಿದೆ.

economy
economy
author img

By

Published : May 25, 2021, 6:01 PM IST

ನವದೆಹಲಿ: ಭಾರತದಲ್ಲಿನ ಎರಡನೇ ಅಲೆಯ ಕೋವಿಡ್​-19 ಸಾಂಕ್ರಾಮಿಕ ರೋಗ ತಡೆಯ ಆರ್ಥಿಕ ವೆಚ್ಚಗಳು ಮತ್ತು ಸೋಂಕು ತಡೆಗಟ್ಟುವ ಲಾಕ್​ಡೌನ್​ಗಳು ವೇಗವಾಗಿ ಏರುತ್ತಿವೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತಕ್ಕೆ 74 ಬಿಲಿಯನ್ ಡಾಲರ್​ (ಸುಮಾರು 5.4 ಲಕ್ಷ ಕೋಟಿ ರೂ.) ವೆಚ್ಚ ತಗುಲಬಹುದು ಎಂದು ಬಾರ್ಕ್ಲೇಸ್ ಅಂದಾಜಿಸಿದೆ.

ಆರ್ಥಿಕತೆಯು ಸಮಂಜಸವಾಗಿ ಸ್ಥಿರವಾಗಿದೆ. ಹೆಚ್ಚಿನ ಆವರ್ತನ ದತ್ತಾಂಶಗಳಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತದೆ. ಮೇ ತಿಂಗಳಲ್ಲಿ ಚಟುವಟಿಕೆಯಲ್ಲಿ ತೀವ್ರ ಕುಸಿತ ಕಂಡಿದೆ ಎಂದು ಬ್ರೋಕರೆಜ್​ ತನ್ನ ವರದಿಯಲ್ಲಿ ತಿಳಿಸಿದೆ.

ಸಾಂಕ್ರಾಮಿಕ ಹೆಚ್ಚಳದಿಂದ ಪರಿಸ್ಥಿತಿ ಹದಗೆಟ್ಟರೆ 2021-22ರ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆಯ ದರವು ಶೇ 7.7ರಷ್ಟಾಗುತ್ತದೆ. ಮೂರನೇ ಅಲೆ ಬಂದು ಮತ್ತೊಂದು ಎಂಟು ವಾರಗಳವರೆಗೆ ಲಾಕ್‌ಡೌನ್‌ಗಳು ಮತ್ತು ಬಿಗಿಯಾದ ನಿರ್ಬಂಧಗಳು ಜಾರಿಗೆ ಬಂದರೆ ಇನ್ನೂ 42.6 ಶತಕೋಟಿ ಡಾಲರ್‌ಗಳಷ್ಟು ಆರ್ಥಿಕ ನಷ್ಟ ಅನುಭವಿಸಲಿದೆ ಎಂದು ಮುನ್ಸೂಚನೆ ನೀಡಿದೆ.

ಇತ್ತೀಚಿನ ಕಠಿಣ ಕ್ರಮಗಳಿಂದಾಗಿ ಮೇ ತಿಂಗಳಲ್ಲಿ ವಾರಕ್ಕೆ 8 ಬಿಲಿಯನ್ ಡಾಲರ್​ ವೆಚ್ಚವಾಗಲಿದೆ ಎಂದು ಬಾರ್ಕ್ಲೇಸ್ ಈ ಹಿಂದೆ ಅಂದಾಜಿಸಿತ್ತು. ಏಪ್ರಿಲ್​ನಲ್ಲಿ ನಷ್ಟವು ವಾರಕ್ಕೆ 5.3 ಬಿಲಿಯನ್ ಡಾಲರ್​ ಆಗಿತ್ತು. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕ ನಷ್ಟವು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜೂನ್‌ನಿಂದ ಪರಿಸ್ಥಿತಿಗಳು ಸುಧಾರಿಸುವ ವಿಶ್ವಾಸವಿದೆ.

ಓದಿ: 4ನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಉತ್ತಮ, ವಾರ್ಷಿಕ ಕುಸಿತ ಮೈನಸ್ ಶೇ. 7.3ರಷ್ಟು- SBI ವರದಿ

ವಿಪರೀತ ಪರಿಸ್ಥಿತಿಗಳನ್ನು ಗಮನಿಸಿದರೆ, ಕೊರೊನಾ ಮತ್ತೆ ಏರಿಕೆಯಾಗುವ ಸೂಚನೆಗಳಿವೆ. ಲಾಕ್​ಡೌನ್​ಗಳು ಎರಡು ತಿಂಗಳಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ. ಮೂರು ಮತ್ತು ನಾಲ್ಕು ತ್ರೈಮಾಸಿಕಗಳ ನಡುವೆ ಈ ಪರಿಸ್ಥಿತಿ ಉಂಟಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಕೊರೊನಾದಿಂದ ಉಂಟಾಗುವ ಆರ್ಥಿಕ ನಷ್ಟವು 117 ಬಿಲಿಯನ್ ಡಾಲರ್​ ಎಂದು ಅಂದಾಜಿಸಲಾಗಿದೆ. ಇದು ಜಿಡಿಪಿಯ ಶೇ 3.75ಕ್ಕೆ ತಲುಪುತ್ತದೆ ಎಂಬ ಅಂದಾಜನ್ನು ಬಾರ್ಕ್ಲೇಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ರಾಹುಲ್ ಬಜೋರಿಯಾ ಮುಂದಿಟ್ಟಿದ್ದಾರೆ.

ಪ್ರಸ್ತುತ ಪರಿಸ್ಥಿತಿಗಳಲ್ಲಿ ಬಾರ್ಕ್ಲೇಸ್ ಈ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ 9.2ರಷ್ಟು ನಿರೀಕ್ಷಿಸಿದೆ. ಈ ಹಿಂದೆ ಇದನ್ನು ಶೇ 10ರಷ್ಟು ಎಂದು ಅಂದಾಜಿಸಿತ್ತು. ಎರಡನೇ ಅಲೆಯ ಹಿನ್ನೆಲೆಯಲ್ಲಿ ಅದನ್ನು ಕಡಿಮೆ ಮಾಡಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 21.6ರಿಂದ ಶೇ 15.4ಕ್ಕೆ ಪರಿಷ್ಕರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.