ನವದೆಹಲಿ: ಚೀನಾ ಮೂಲದ ಅಥವಾ ಚೀನಾ ಜೊತೆ ನಂಟು ಹೊಂದಿದ್ದ 59 ಮೊಬೈಲ್ ಅಪ್ಲಿಕೇಷನ್‌ಗಳನ್ನು ಕೇಂದ್ರ ಸರ್ಕಾರವು ಭಾರತದಲ್ಲಿ ನಿಷೇಧಿಸಿ ಚೀನಿ ಹಿತಾಸಕ್ತಿಗಳ ಮೇಲೆ ಬಲವಾದ ಏಟು ನೀಡಿತ್ತು. ನಿಷೇಧ ಶಿಕ್ಷೆಗೆ ಒಳಗಾದ ಕಂಪನಿಗಳು ಭಾರತದ ಸ್ಥಳೀಯ ನೌಕರರನ್ನು ವಜಾಗೊಳಿಸಲು ಪ್ರಾರಂಭಿಸಿವೆ.
ಲಡಾಖ್ ಗಡಿಯಲ್ಲಿ ಚೀನಾದ ಉದ್ವಿಗ್ನತೆಯ ಶುರುವಾದ ಬಳಿಕ ಜೂನ್ 29ರಂದು ಭಾರತ 59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸಿತ್ತು. ಈ ಪಟ್ಟಿಯಲ್ಲಿರುವ ಯುಸಿ ಬ್ರೌಸರ್ ಮತ್ತು ಯುಸಿ ನ್ಯೂಸ್ ಅಪ್ಲಿಕೇಷನ್‌ಗಳ ಹಿಂದಿನ ಕಂಪನಿಯಾದ ಅಲಿಬಾಬಾ ಅಂಗಸಂಸ್ಥೆ ಯುಸಿವೆಬ್ ಈಗಾಗಲೇ ದೇಶದಲ್ಲಿ ಸೇವೆಯನ್ನು ನಿಲ್ಲಿಸಿದೆ. ಇದು ಗುರುಗ್ರಾಮ್ ಮತ್ತು ಮುಂಬೈ ಕಚೇರಿಗಳಲ್ಲಿನ ಉದ್ಯೋಗ ಕಡಿತಕ್ಕೆ ಕಾರಣವಾಗಿದೆ.
ನಾವು 59 ಅಪ್ಲಿಕೇಷನ್‌ಗಳಿಗೆ ಸಂಬಂಧಿಸಿದ ಸರ್ಕಾರದ ಇತ್ತೀಚಿನ ನಿರ್ದೇಶನವನ್ನು ಪಾಲಿಸಿದ್ದೇವೆ ಮತ್ತು ನಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಯುಸಿ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಜುಲೈ 7ರಂದು ಯುಸಿ ಬ್ರೌಸರ್ ತನ್ನ ಭಾರತ ಬಳಕೆದಾರರಿಗೆ ಜುಲೈ 10ರ ನಂತರ ತಮ್ಮ ಡೇಟಾ ಪ್ರವೇಶಿಸಲು ಆಗುವುದಿಲ್ಲ ಎಂದು ಎಚ್ಚರಿಸಿತ್ತು.
ಇತ್ತೀಚಿನ ಸರ್ಕಾರದ ನಿರ್ದೇಶನ ಅನುಸರಿಸುತ್ತಿದ್ದೇವೆ. ಇದು ನಮ್ಮ ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಯುಸಿ ಅಪ್ಲಿಕೇಷನ್‌ನಿಂದ ನೀವು ಮುಖ್ಯವೆಂದು ಭಾವಿಸುವ ಎಲ್ಲಾ ಡೇಟಾ ನಿಮ್ಮ ಸಾಧನಕ್ಕೆ 2020ರ ಜುಲೈ 10ರ ನಂತರ ಬ್ಯಾಕಪ್ ಮಾಡಿಕೊಳ್ಳಿ. ಆ ದಿನಾಂಕದ ನಂತರ ನಿಮ್ಮ ಡೇಟಾವನ್ನು ಇನ್ನು ಮುಂದೆ ಪ್ರವೇಶಿಸಲು ಆಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.