ನವದೆಹಲಿ: ಅಮೆರಿಕ ತನ್ನ ಹೆಚ್1-ಬಿ ವೀಸಾ ಸ್ಥಗಿತಗೊಳಿಸುವುದರಿಂದ ದೇಶಿಯ ಐಟಿ ಸಂಸ್ಥೆಗಳಿಗೆ 1,200 ಕೋಟಿ ರೂ. ನಷ್ಟವಾಗಲಿದೆ ಮತ್ತು ಅವರ ಲಾಭದಾಯಕತೆಯ ಮೇಲೆ ಶೇ. 0.25-0.30ರಷ್ಟು ಪರಿಣಾಮ ಬೀರುತ್ತದೆ ಎಂದು ದೇಶಿಯ ರೇಟಿಂಗ್ ಸಂಸ್ಥೆ ತಿಳಿಸಿದೆ.
ಭಾರತೀಯ ಐಟಿ ಸಂಸ್ಥೆಗಳಿಗೆ ಅಮೆರಿಕ ಅತಿ ದೊಡ್ಡ ಮಾರುಕಟ್ಟೆ ಆದಾಗಿನಿಂದ ಕಳೆದ ಕೆಲವು ವರ್ಷಗಳಿಂದ ಸ್ಥಳೀಯ ನೇಮಕಾತಿ ಹೆಚ್ಚಳವಾಗಿ ವೀಸಾ ವಿತರಣೆ ನಿಗ್ರಹಿಸಲು ಆರಂಭಿಸಿದೆ. ಇದು ಭಾರತೀಯ ಐಟಿ ಕಂಪನಿಗಳ ಮೇಲಿನ ಪರಿಣಾಮವನ್ನು ಮಿತಿಗೊಳಿಸಲು ನೆರವಾಗುತ್ತದೆ ಎಂದು ಕ್ರಿಸಿಲ್ ರೇಟಿಂಗ್ಸ್ ಹೇಳಿದೆ.
ಹೆಚ್ಚುತ್ತಿರುವ ನಿರುದ್ಯೋಗ ಹಿಡಿದಿಡುವ ನಿಟ್ಟಿನಲ್ಲಿ ಕಳೆದ ತಿಂಗಳು ಭಾರತೀಯ ಟೆಕ್ ವೃತ್ತಿಪರರು ಅಮೆರಿಕದಲ್ಲಿ ಕೆಲಸ ಮಾಡಲು ಬಳಸಿದ ವೀಸಾಗಳನ್ನು ಡೊನಾಲ್ಡ್ ಟ್ರಂಪ್ ಆಡಳಿತವು ಅಮಾನತುಗೊಳಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಐಟಿ ಸಂಸ್ಥೆಗಳ ಲಾಭದಲ್ಲಿ ಶೇ. 2.50ರಷ್ಟು ಕುಸಿತವಾಗಿದೆ. 15 ಅತ್ಯುನ್ನತ ಸಂಸ್ಥೆಗಳ ಕಾರ್ಯಕ್ಷಮತೆಯ ವಿಶ್ಲೇಷಣೆಯ ಪ್ರಕಾರ, ಕಾರ್ಯಾಚರಣಾ ಲಾಭದಾಯಕತೆಯು 2021ರ ಹಣಕಾಸು ವರ್ಷದಲ್ಲಿ ಶೇ. 23ರಷ್ಟಿದೆ ಎಂದು ಹೇಳಿದೆ.