ETV Bharat / business

ರೈಲ್ವೆ ಟಿಕೆಟ್​ To ಆನ್​ಲೈನ್​ ಶಾಪಿಂಗ್​: SBI-IRCTC ರುಪೇ ಕಾರ್ಡ್​ ಲಾಂಚ್ ಮಾಡಿದ ಕೇಂದ್ರ! - ಭಾರತೀಯ ರೈಲ್ವೆ

ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಫಸ್ಟ್​ ಕ್ಲಾಸ್​ ಎಸಿ, ಸೆಕೆಂಡ್​ ಕ್ಲಾಸ್​ ಎಸಿ, ಮೂರನೇ ದರ್ಜೆ ಎಸಿ, ಎಕ್ಸಿಕ್ಯುಟಿವ್ ಚೇರ್ ಕಾರ್ ಮತ್ತು ಎಸಿ ಚೇರ್ ಕಾರ್​ ಕಾಯ್ದಿರಿಸಿದ ಕಾರ್ಡ್‌ ಹೋಲ್ಡರ್‌ಗಳಿಗೆ ಶೇ 10ರಷ್ಟು ವ್ಯಾಲ್ಯು ಬ್ಯಾಕ್​ ಪಡೆಯುತ್ತಾರೆ. ಇದರಿಂದ ಆನ್‌ಲೈನ್ ವಹಿವಾಟು ಶುಲ್ಕ, ರೈಲ್ವೆ ನಿಲ್ದಾಣಗಳಲ್ಲಿನ ಶೇ 1ರಷ್ಟು ಇಂಧನ ಸರ್ಚಾರ್ಜ್ ಮನ್ನಾ ಆಗಲಿದೆ. ಐಆರ್​ಸಿಟಿಸಿ-ಎಸ್‌ಬಿಐ ರುಪೇ ಕ್ರೆಡಿಟ್ ಕಾರ್ಡ್ ಆನ್‌ಲೈನ್ ಶಾಪಿಂಗ್ ಮಾಡುವ ಗ್ರಾಹಕರು ಕೂಡ ರಿಯಾಯಿತಿ ಪಡೆಯಬಹುದು.

SBI-IRCTC
ಎಸ್​​ಬಿಐ ಐಆರ್‌ಸಿಟಿಸಿ
author img

By

Published : Jul 28, 2020, 4:08 PM IST

ನವದೆಹಲಿ: 'ಆತ್ಮನಿರ್ಭರ ಭಾರತ' ಮತ್ತು 'ಡಿಜಿಟಲ್ ಇಂಡಿಯಾ'ದಡಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಭಾರತೀಯ ರೈಲ್ವೆ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ಸಹಭಾಗಿತ್ವದಡಿ ರುಪೇ ಪ್ಲಾಟ್‌ಫಾರ್ಮ್‌ನಲ್ಲಿ ಕಾಂಟ್ಯಾಕ್ಟ್​​ಲೆಸ್ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದ್ದಾರೆ.

ಕಾರ್ಡ್​​ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, 2021ರ ಅಂತ್ಯದ ವೇಳೆಗೆ ಈ ಕ್ರೆಡಿಟ್ ಕಾರ್ಡ್‌ ಬಳಕೆದಾರರ ಸಂಖ್ಯೆ 3 ಕೋಟಿ ತಲುಪುವ ಗುರಿ ಇರಿಸಿಕೊಂಡಿದ್ದೇವೆ. ಮುಂದಿನ ಡಿಸೆಂಬರ್ ತನಕ ಎಸ್‌ಬಿಐ ಕಾರ್ಡ್ ಕನಿಷ್ಠ 3 ಕೋಟಿ ಗ್ರಾಹಕರನ್ನು ತಲುಪಬೇಕು. ಅಂದೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾಗಲಿದೆ ಎಂದರು.

ಪ್ರತಿ 15 ದಿನಗಳಿಗೆ ಒಮ್ಮೆ ಪರಿಶೀಲನಾ ವರದಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತೇನೆ. ಅದರ ಪ್ರಗತಿಯನ್ನು ಪಡೆಯಲು ತಿಂಗಳಲ್ಲಿ ಒಂದು ಸಭೆ ನಡೆಸುತ್ತೇನೆ ಎಂದು ಹೇಳಿದರು.

ಪ್ರತಿ ವರ್ಷ ಐಆರ್​ಸಿಟಿಸಿಯಿಂದ 30 ಮಿಲಿಯನ್ ಟಿಕೆಟ್​ಗಳನ್ನು ಬುಕ್ ಮಾಡಲಾಗಿದೆ. ಶೇ 10ರಷ್ಟು ಜನರ ಕ್ರೆಡಿಟ್ ಕಾರ್ಡ್ ಬಳಕೆಯ 3 ಕೋಟಿ ಜನರಿಗೆ ತಲುಪುವುದು ದೊಡ್ಡ ಗುರಿಯಲ್ಲ. ಐಆರ್​ಸಿಟಿಸಿ-ಎಸ್​ಬಿಐ ಕ್ರೆಡಿಟ್ ಕಾರ್ಡ್ ಜಂಟಿಯಾಗಿ ರೈಲ್ವೆ ಕೈಗೆತ್ತಿಕೊಂಡ ಮೇಕ್-ಇನ್-ಇಂಡಿಯಾ ಅಭಿಯಾನದ ಉಪಕ್ರಮವಾಗಿದೆ. ಇದು ಗ್ರಾಹಕರಿಗೆ ಸುರಕ್ಷಿತ ವಹಿವಾಟು ವಾತಾವರಣ ಒದಗಿಸುತ್ತದೆ. ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್‌ಎಫ್‌ಸಿ) ತಂತ್ರಜ್ಞಾನ ಹೊಂದಿದ್ದು, ಬಳಕೆದಾರರು ಸುರಕ್ಷಿತ ರೀಡರ್ ಟ್ಯಾಪ್ ಮೂಲಕ ತಮ್ಮ ವಹಿವಾಟುಗಳನ್ನು ತ್ವರಿತಗೊಳಿಸಬಹುದು ಎಂದರು.

ಈ ಕಾರ್ಡ್ ರೈಲ್ವೆಯಲ್ಲಿ ಕಾಗದರಹಿತ ಟಿಕೆಟಿಂಗ್ ಮತ್ತು ತಂತ್ರಜ್ಞಾನ ಚಾಲಿತ ಸೇವಾ ನೆಲೆ ತರಲಿದೆ. ಗ್ರೀನ್​ ಟ್ರಾನ್ಸ್​​ಪೋರ್ಟೆಷನ್ ಸೇವೆಯ ಮಹತ್ವಾಕಾಂಕ್ಷೆ ಹೊಂದಿರುವ ಭಾರತೀಯ ರೈಲ್ವೆ ಧ್ಯೇಯಕ್ಕೆ ದೊಡ್ಡ ಹೆಜ್ಜೆಯಾಗಲಿದೆ ಎಂದು ಗೋಯಲ್ ಹೇಳಿದರು.

ಕಾರ್ಡ್ ವಿತರಣಾ ಶುಲ್ಕದ ಬಗ್ಗೆ ತಿಳಿಸಿದ ಸಚಿವರು, 2021ರ ಮಾರ್ಚ್ 31ರವರೆಗೆ 500 ರೂ. ಮನ್ನಾ ಮಾಡಲಾಗಿದೆ. ಕಾರ್ಡ್ ಸಕ್ರಿಯಗೊಂಡ ತಕ್ಷಣ 350 ಬೋನಸ್ ರಿವಾರ್ಡ್ ಪಾಯಿಂಟ್‌ಗಳನ್ನು ಬಳಕೆದಾರರಿಗೆ ನೀಡಲಾಗುವುದು ಎಂದರು.

ಕೋವಿಡ್​​ ಬಳಿಕ ಜಗತ್ತಿನಲ್ಲಿ ಜನರ ಸುರಕ್ಷತೆ ಹೆಚ್ಚಿಸಲು ಈ ಕಾರ್ಡ್ ಅತ್ಯಗತ್ಯವಾಗಿರುತ್ತದೆ. ಈ ಕಾರ್ಡ್ ಮೂಲಕ ಡೌನಿಂಗ್​, ಚಲನಚಿತ್ರ ಅಥವಾ ಇತರ ಮನರಂಜನೆ ಚಟುವಟಿಕೆಗಳಲ್ಲಿ ಹೆಚ್ಚುವರಿ ರಿವಾರ್ಡ್​ ಅಂಕ ನೀಡಲಾಗುತ್ತದೆ. 1 ರಿವಾರ್ಡ್ ಪಾಯಿಂಟ್ 1 ರೂ.ಗೆ ಸಮಾನವಾಗಿರುತ್ತದೆ. ಸಂಗ್ರಹವಾದ ಪ್ರತಿ ರಿವಾರ್ಡ್​ ಅಂಕಗಳು ರೈಲು ಟಿಕೆಟ್ ಶುಲ್ಕ ಪಾವತಿಸಲು ನೆರವಾಗಲಿದೆ ಎಂದು ಗೋಯಲ್ ಹೇಳಿದರು.

ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಫಸ್ಟ್​ ಕ್ಲಾಸ್​ ಎಸಿ, ಸೆಕೆಂಡ್​ ಕ್ಲಾಸ್​ ಎಸಿ, ಮೂರನೇ ದರ್ಜೆ ಎಸಿ, ಎಕ್ಸಿಕ್ಯುಟಿವ್ ಚೇರ್ ಕಾರ್ ಮತ್ತು ಎಸಿ ಚೇರ್ ಕಾರ್​ ಕಾಯ್ದಿರಿಸಿದ ಕಾರ್ಡ್ ‌ಹೋಲ್ಡರ್‌ಗಳು ಶೇ 10ರಷ್ಟು ವ್ಯಾಲ್ಯು ಬ್ಯಾಕ್​ ಪಡೆಯುತ್ತಾರೆ. ಇದರಿಂದ ಆನ್‌ಲೈನ್ ವಹಿವಾಟು ಶುಲ್ಕ, ರೈಲ್ವೆ ನಿಲ್ದಾಣಗಳಲ್ಲಿನ ಶೇ 1ರಷ್ಟು ಇಂಧನ ಸರ್ಚಾರ್ಜ್ ಮನ್ನಾ ಆಗಲಿದೆ. ಐಆರ್​ಸಿಟಿಸಿ-ಎಸ್‌ಬಿಐ ರುಪೇ ಕ್ರೆಡಿಟ್ ಕಾರ್ಡ್ ಆನ್‌ಲೈನ್ ಶಾಪಿಂಗ್ ಮಾಡುವ ಗ್ರಾಹಕರು ಕೂಡ ರಿಯಾಯಿತಿ ಪಡೆಯಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.