ನವದೆಹಲಿ: ಕಂಪೆನಿಗಳ ಕಾಯ್ದೆಗಳಿಗೆ ಹೆಚ್ಚಿನ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಬುಧವಾರ ಅನುಮತಿಸಿದ್ದು, ನಿರಪರಾಧೀಕರಿಸುವಂತಹ ಕಾನೂನುಗಳೂ ಸಹ ಇದರಲ್ಲಿ ಒಳಗೊಂಡಿವೆ.
ಕಂಪೆನಿಗಳ ಕಾನೂನು, 2013ರ ಅಡಿಯಲ್ಲಿ 72 ಕಾಯ್ದೆಗಳಲ್ಲಿ ಬದಲಾವಣೆಗಳನ್ನು ತರಲು ಕ್ಯಾಬಿನೆಟ್ ಅಂಗೀಕರಿಸಿದೆ. ಉದ್ದೇಶಿತ ಕಾಯ್ದೆಯಡಿ 66 ಸಂಯುಕ್ತ ಅಪರಾಧಗಳ ಪೈಕಿ 23 ಅಪರಾಧಗಳನ್ನು ವರ್ಗೀಕರಿಸಲಾಗುತ್ತದೆ. ಇದಲ್ಲದೆ ಏಳು ಜಂಟಿ ಅಪರಾಧಗಳನ್ನು ಕೈಬಿಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಸರ್ಕಾರವು ಕಾಯ್ದೆಯ ವಿವಿಧ ವಿಭಾಗಗಳಲ್ಲಿನ ಜೈಲು ಶಿಕ್ಷೆಯನ್ನು ತಪ್ಪಿಸಲಿದೆ. ನಾನಾ ಜಂಟಿ ಅಪರಾಧಗಳಂತಹ ಸಂದರ್ಭದಲ್ಲಿ ದಂಡದ ಮೊತ್ತ ಕಡಿಮೆ ಮಾಡುತ್ತದೆ. 50 ಲಕ್ಷ ರೂ.ಗಿಂತ ಕಡಿಮೆ ಸಿಎಸ್ಆರ್ ಬಾಧ್ಯತೆ ಹೊಂದಿರುವ ಕಂಪನಿಗಳು ಸಿಎಸ್ಆರ್ ಸಮಿತಿಯನ್ನು ರಚಿಸಬೇಕಾಗಿಲ್ಲ. ಉದ್ದೇಶಿತ ಕಾಯ್ದೆಯ ಬದಲಾವಣೆಯಲ್ಲಿ ವ್ಯವಹಾರವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ ಎಂದು ಸಚಿವೆ ವಿವರಿಸಿದರು.
ನವೆಂಬರ್ನಲ್ಲಿ ಕೇಂದ್ರ ಸರ್ಕಾರ ನೇಮಿಸಿದ್ದ ಉನ್ನತ ಮಟ್ಟದ ಸಮಿತಿ, ಕಂಪೆನಿಗಳ ಕಾಯ್ದೆ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಅರ್ಧಕ್ಕಿಂತ ಹೆಚ್ಚು ಅಪರಾಧಗಳನ್ನು ನ್ಯಾಯಸಮ್ಮತಗೊಳಿಸುವುದರ ಜೊತೆಗೆ ದೇಶದಲ್ಲಿ ವ್ಯಾಪಾರ ಮಾಡುವ ಸುಲಭತೆಯನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನಗಳ ಮಾಡಬೇಕು. ಸ್ಟಾರ್ಟ್ಅಪ್‌ಗಳ ಉಲ್ಲಂಘನೆಗಳಿಗೆ ಕಡಿಮೆ ವಿತ್ತೀಯ ದಂಡ ವಿಧಿಸಲು ಪ್ರಸ್ತಾಪಿಸಿತು.