ETV Bharat / business

ತೆರಿಗೆದಾರರಿಗೆ ಸಿಹಿ ಸುದ್ದಿ: GST ವಾರ್ಷಿಕ ರಿಟರ್ನ್, ಆಡಿಟ್​ ವರದಿ ಸಲ್ಲಿಕೆ ಅವಧಿ ವಿಸ್ತರಣೆ!​

author img

By

Published : Sep 30, 2020, 3:09 PM IST

ಸೆಪ್ಟೆಂಬರ್​ರವರೆಗೆ ಮೂರು ತಿಂಗಳವರೆಗೆ ವಿಸ್ತರಿಸಿದೆ. ಜಿಎಸ್​​ಟಿಆರ್ -9 ಸರಕು ಮತ್ತು ಸೇವಾ ತೆರಿಗೆ(ಜಿಎಸ್​​ಟಿ)ಯಲ್ಲಿ ನೋಂದಾಯಿತ ತೆರಿಗೆದಾರರಿಂದ ಸಲ್ಲಿಸಬೇಕಾದ ವಾರ್ಷಿಕ ರಿಟರ್ನ್. ಇದು ನಾನಾ ತೆರಿಗೆಗಳ ಅಡಿಯಲ್ಲಿ ಮಾಡಿದ ಅಥವಾ ಸ್ವೀಕರಿಸಿದ ಬಾಹ್ಯ ಮತ್ತು ಆಂತರಿಕ ಸರಬರಾಜುಗಳ ವಿವರಗಳನ್ನು ಒಳಗೊಂಡಿದೆ. 2018-19ರ ಆರ್ಥಿಕ ವರ್ಷದ ಜಿಎಸ್‌ಟಿ ವಾರ್ಷಿಕ ರಿಟರ್ನ್ ಮತ್ತು ಆಡಿಟ್ ವರದಿ ಸಲ್ಲಿಸುವ ಗಡುವನ್ನು ಒಂದು ತಿಂಗಳು ವಿಸ್ತರಿಸಿದೆ.

GST
ಜಿಎಸ್​​ಟಿ

ನವದೆಹಲಿ: 2018-19ರ ಆರ್ಥಿಕ ವರ್ಷದ ಜಿಎಸ್‌ಟಿ ವಾರ್ಷಿಕ ರಿಟರ್ನ್ ಮತ್ತು ಆಡಿಟ್ ವರದಿ ಸಲ್ಲಿಸುವ ಗಡುವನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ.

ಮಾದರಿ ನೀತಿ ಸಂಹಿತೆ ದೃಷ್ಟಿಯಿಂದ ಚುನಾವಣಾ ಆಯೋಗದಿಂದ ಅನುಮತಿ ಪಡೆದ ಬಳಿಕ, ಸರ್ಕಾರವು 2018-19ನೇ ಸಾಲಿನ ಜಿಎಸ್‌ಟಿಆರ್-9 ಮತ್ತು ಜಿಎಸ್‌ಟಿಆರ್ 9'ಸಿ'ಯಲ್ಲಿ ವಾರ್ಷಿಕ ಆದಾಯ 2020ರ ಸೆ.30ರಿಂದ 2020ರ ಅ. 31ರ ನಡುವಿನ ನಿಗದಿತ ದಿನಾಂಕ ವಿಸ್ತರಿಸಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮಂಡಳಿ ಮತ್ತು ಕಸ್ಟಮ್ಸ್ (ಸಿಬಿಐಸಿ) ಟ್ವೀಟ್ ಮಾಡಿದೆ.

ಮೇ ಮಾಸಿಕದಲ್ಲಿ ಸರ್ಕಾರವು 2018-19ರ ವಾರ್ಷಿಕ ಜಿಎಸ್​​ಟಿ ರಿಟರ್ನ್ ಅನ್ನು 2020ರ ಸೆಪ್ಟೆಂಬರ್​ರವರೆಗೆ ಮೂರು ತಿಂಗಳವರೆಗೆ ವಿಸ್ತರಿಸಿದೆ. ಜಿಎಸ್​​ಟಿಆರ್ -9 ಸರಕು ಮತ್ತು ಸೇವಾ ತೆರಿಗೆ(ಜಿಎಸ್​​ಟಿ)ಯಲ್ಲಿ ನೋಂದಾಯಿತ ತೆರಿಗೆದಾರರಿಂದ ಸಲ್ಲಿಸಬೇಕಾದ ವಾರ್ಷಿಕ ರಿಟರ್ನ್. ಇದು ನಾನಾ ತೆರಿಗೆಗಳ ಅಡಿಯಲ್ಲಿ ಮಾಡಿದ ಅಥವಾ ಸ್ವೀಕರಿಸಿದ ಬಾಹ್ಯ ಮತ್ತು ಆಂತರಿಕ ಸರಬರಾಜುಗಳ ವಿವರಗಳನ್ನು ಒಳಗೊಂಡಿದೆ.

ಜಿಎಸ್​​ಟಿಆರ್ -9 'ಸಿ' ಮತ್ತು ಜಿಎಸ್​​ಟಿಆರ್ -9 ಮತ್ತು ಲೆಕ್ಕಪರಿಶೋಧಿತ ವಾರ್ಷಿಕ ಹಣಕಾಸು ಘೋಷಣೆ ನಡುವಿನ ಹೊಂದಾಣಿಕೆಯ ಪ್ರಕಟಣೆಯಾಗಿದೆ.

ಕೋವಿಡ್​​-19 ಸಾಂಕ್ರಾಮಿಕ ಕಾರಣ ಹಲವು ಸವಾಲುಗಳ ಮಧ್ಯೆ ಜಿಎಸ್​​ಟಿ ವಾರ್ಷಿಕ ಆದಾಯ ಮತ್ತು ಜಿಎಸ್​​ಟಿ ಆಡಿಟ್ ಪ್ರಮಾಣೀಕರಣವನ್ನು ಅಂತಿಮಗೊಳಿಸಲು ಹೆಣಗಾಡುತ್ತಿರುವ ವ್ಯವಹಾರಗಳಿಗೆ ಅಗತ್ಯವಾದ ಪರಿಹಾರ ನೀಡುತ್ತದೆ ಎಂದು ತೆರಿಗೆ ಪಾಲುದಾರ ಅಭಿಷೇಕ್ ಜೈನ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.