ನವದೆಹಲಿ: ಅಂತಾರಾಷ್ಟ್ರೀಯ ಭೌಗೋಳಿಕ ರಾಜಕೀಯದಲ್ಲಿನ ಬದಲಾವಣೆಗೆ ಅನುಗುಣವಾಗಿ ಭಾರತೀಯ ಆರ್ಥಿಕತೆಯನ್ನು ಮತ್ತೆ ಸಜ್ಜುಗೊಳಿಸಿ ಪುನಶ್ಚೇತನಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಪಿಹೆಚ್‌ಡಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿ 'ಭಾರತವನ್ನು ಸ್ವಾವಲಂಬಿಯಾಗಿ ಮಾಡುವಲ್ಲಿ ಭಾರತೀಯ ಆರ್ಥಿಕ ರಾಜತಾಂತ್ರಿಕತೆಯ ಪಾತ್ರ' ಕುರಿತು ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆರ್ಥಿಕ ವ್ಯವಹಾರಗಳ (ಇಆರ್) ಕಾರ್ಯದರ್ಶಿ ರಾಹುಲ್ ಛಾಬ್ರಾ ಹೇಳಿದರು.
ಜಾಗತಿಕವಾಗಿ ಭೌಗೋಳಿಕ ಅರ್ಥಶಾಸ್ತ್ರ, ರಾಜಕೀಯ ಮತ್ತು ಕಾರ್ಯತಂತ್ರದಲ್ಲಿ ಒಂದು ಬದಲಾವಣೆ ಆಗಿದೆ. ಆರ್ಥಿಕತೆಯನ್ನು ಮತ್ತೆ ಸಜ್ಜುಗೊಳಿಸುವ ಮೂಲಕ ದೇಶೀಯ ವಿತ್ತೀಯತೆಯನ್ನು ಪುನರುಜ್ಜೀವನಗೊಳಿಸುವ ಬದಲಾವಣೆಗಳ ಆಶಾವಾದವನ್ನು ಭಾರತ ಸರ್ಕಾರ ಹೊಂದಿದೆ ಎಂದರು.
ಸಣ್ಣ ರೈತರ ಬೇಡಿಕೆ ಮತ್ತು ಆದಾಯವನ್ನು ಹೆಚ್ಚಿಸುವುದು. ಎಂಎಸ್‌ಎಂಇಗಳ ಮೇಲೆ ಕೇಂದ್ರೀಕರಿಸಿದೆ ಸಾರ್ವಜನಿಕ ಸಹಭಾಗಿತ್ವದ ಪರದೆಯನ್ನು ವಿಸ್ತರಿಸಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು. ಆಂತರಿಕ ಪಾಲ್ಗೊಳ್ಳುವಿಕೆ ಮುಖೇನ ಸರಬರಾಜು ಸರಪಳಿಯ ಜಾಗತಿಕ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
‘ಭಾರತದ ವಾಣಿಜ್ಯ ರಾಜತಾಂತ್ರಿಕತೆಯು ಪಾರದರ್ಶಕತೆ, ನ್ಯಾಯಸಮ್ಮತತೆ, ಈಕ್ವಿಟಿ, ವಿವಾದಾಸ್ಪದ ಮತ್ತು ನ್ಯಾಯವನ್ನು ಆಧರಿಸಿದೆ. ಭಾರತವನ್ನು ಸ್ವಾವಲಂಬನೆಯತ್ತ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ. ಸರಬರಾಜು ಸರಪಳಿಗಳನ್ನು ಪ್ರಾದೇಶಿಕೀಕರಿಸಲು ಮತ್ತು ಅವುಗಳನ್ನು ರಚನಾತ್ಮಕ ರೀತಿ ಸ್ಥಳೀಯವಾಗಿಸಿ ಆರ್ಥಿಕತೆ ಬಲಪಡಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಜವಳಿ, ರತ್ನ, ಆಭರಣ, ರಾಸಾಯನಿಕ ಮತ್ತು ಫಾರ್ಮಾ ದೇಶವನ್ನು ತಕ್ಷಣವೇ ತುಂಬಿಕೊಳ್ಳಬಹುದಾದ ಕ್ಷೇತ್ರಗಳಾಗಿವೆ. ಎಲೆಕ್ಟ್ರಾನಿಕ್ಸ್, ಎಂಜಿನಿಯರಿಂಗ್, ವಿನ್ಯಾಸ ಮತ್ತು ಇತರ ಕ್ಷೇತ್ರಗಳು ಭಾರತದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಬಹುದು ಎಂದರು.