ETV Bharat / business

ಅಟಲ್‌ ಕನಸು ಮೋದಿಯಿಂದ ನನಸು.. ಗೋದಾವರಿ-ಕೃಷ್ಣಾ-ಕಾವೇರಿ ಜೋಡಣೆಗೆ DPR ಕರಡು ಸಿದ್ಧ! - ರಾಷ್ಟ್ರೀಯ ನೀರಾವರಿ ಅಭಿವೃದ್ಧಿ ಮಂಡಳಿ

ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿಗಳನ್ನು ಜೋಡಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಸ್ತೃತ ಯೋಜನಾ ವರದಿಯ (ಡಿಪಿಆರ್) ಕರಡು ಸಿದ್ಧಪಡಿಸಿದೆ ಎಂದು ಕೇಂದ್ರ ಜಲ ಶಕ್ತಿ ಮತ್ತು ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ರತನ್ ಲಾಲ್ ಕಟಾರಿಯಾ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

river linking project
ನದಿ ಜೋಡಣೆ
author img

By

Published : Feb 10, 2020, 11:56 PM IST

ನವದೆಹಲಿ: ಆಂಧ್ರಪ್ರದೇಶ-ತೆಲಂಗಾಣದಲ್ಲಿ ಹರಿಯುವ ಗೋದಾವರಿ, ಮಹಾರಾಷ್ಟ್ರ- ಕರ್ನಾಟಕ-ತೆಲಂಗಾಣ- ಆಂಧ್ರಪ್ರದೇಶದಲ್ಲಿ ಹರಿಯುವ ಕೃಷ್ಣಾ ಮತ್ತು ಕರ್ನಾಟಕ-ತಮಿಳುನಾಡಿನಲ್ಲಿ ಹರಿಯುವ ಕಾವೇರಿ ನದಿಗಳನ್ನು ಜೋಡಿಸುವ ವಿಸ್ತೃತ ಯೋಜನಾ ವರದಿ (ಡಿಪಿಆರ್​) ಕರಡು ಸಿದ್ಧವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿಗಳನ್ನು ಜೋಡಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಸ್ತೃತ ಯೋಜನಾ ವರದಿಯ (ಡಿಪಿಆರ್) ಕರಡು ಸಿದ್ಧಪಡಿಸಿದೆ ಎಂದು ಕೇಂದ್ರ ಜಲ ಶಕ್ತಿ ಮತ್ತು ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ರತನ್ ಲಾಲ್ ಕಟಾರಿಯಾ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ನದಿಗಳನ್ನು ಸಂಪರ್ಕಿಸುವ ಯೋಜನೆಯಲ್ಲಿ ಗೋದಾವರಿ (ಇಂಚಂಪಲ್ಲಿ/ ಜನಂಪೆಟೆ)-ಕೃಷ್ಣಾ (ನಾಗಾರ್ಜುನ ಸಾಗರ), ಕೃಷ್ಣ (ನಾಗಾರ್ಜುನಸಾಗರ)- ಪೆನ್ನಾರ್ (ಸೋಮಸಿಲಾ) ಮತ್ತು ಪೆನ್ನಾರ್ (ಸೋಮಸಿಲಾ)- ಕಾವೇರಿ (ಬೃಹತ್ ಆಣೆಕಟ್ಟೆ) ಎಂಬ ಮೂರು ಲಿಂಕ್‌ಗಳ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.

ಕರಡು ಡಿಪಿಆರ್ ಪ್ರಕಾರ, ಕೃಷ್ಣ, ಪೆನ್ನಾರ್ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ಬೇಡಿಕೆಗಳನ್ನು ಈಡೇರಿಸಲು ಸುಮಾರು 247 ಟಿಎಂಸಿ ನೀರನ್ನು ಗೋದಾವರಿ ನದಿಯಿಂದ ಎತ್ತುವ ಮೂಲಕ ದಕ್ಷಿಣಕ್ಕೆ ಹೆಚ್ಚಿನ ನೀಡು ಒದಗಿಸಲಾಗುವುದು ಎಂದರು.

ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್‌ಡಬ್ಲ್ಯುಡಿಎ) 2018-19ರ ಆರ್ಥಿಕ ವರ್ಷದಲ್ಲಿ ಯೋಜನೆಯ ವೆಚ್ಚವನ್ನು 60,361 ಕೋಟಿ ರೂ. ಎಂದು ಅಂದಾಜಿಸಿದೆ. ಅಂತಿಮ ಡಿಪಿಆರ್ ಸಿದ್ಧಪಡಿಸಿದ ನಂತರವೇ ಯೋಜನೆಯ ಅನುಷ್ಠಾನದ ಹಂತವನ್ನು ಅಂತಿಮಗೊಳಿಸಲಾಗುವುದು. ಸಂಬಂಧಪಟ್ಟ ರಾಜ್ಯಗಳ ಒಮ್ಮತದೊಂದಿಗೆ ಇದನ್ನು ಅನುಷ್ಠಾನಕ್ಕೆ ತರಲಾಗುವುದು. ಅಗತ್ಯವಾದ ಶಾಸನಬದ್ಧ ಅನುಮತಿಗಳನ್ನು ಪಡೆದು ಡಿಪಿಆರ್ ಅಧಿಕೃತಿವಾಗಿ ಪೂರ್ಣಗೊಂಡ ಬಳಿಕ ಸಂಪನ್ಮೂಲಗಳ ಸಂಗ್ರಹ ಸಾಮರ್ಥ್ಯ ನಿರ್ಧರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಈ ಮೂರು ನದಿಗಳನ್ನು ಸಂಪರ್ಕಿಸುವ ಪ್ರಸ್ತಾಪವು ಹಲವು ವರ್ಷಗಳಿಂದಲೂ ಪ್ರಗತಿಯಲ್ಲಿದೆ ಗೋದಾವರಿ ಆಗಾಗ ಪ್ರವಾಹಕ್ಕೆ ಗುರಿಯಾಗುತ್ತಿದ್ದರೇ ಮತ್ತೊಂದೆಡೆ ಕೃಷ್ಣೆಯ ಒಡಲಲ್ಲಿ ಸಾಕಷ್ಟು ನೀರು ಹರಿಯುವುದಿಲ್ಲಿ. 2016ರ ಸೆಪ್ಟೆಂಬರ್ 15ರಂದು ಗೋದಾವರಿ ನದಿಯಿಂದ 124 ಕಿ.ಮೀ ದೂರದಲ್ಲಿರುವ ಕೃಷ್ಣ ನದಿಯ ಪ್ರಕಾಶಂ ಬ್ಯಾರೇಜ್‌ಗೆ ತಿರುಗಿಸಲಾಯಿತು.

ಗೋದಾವರಿ-ಕಾವೇರಿ ನದಿ ಸಂಪರ್ಕಿಸುವ ಯೋಜನೆಯು ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿನ ನೀರಿನ ವಿವಾದಗಳನ್ನು ಬಗೆಹರಿಸುತ್ತದೆ ಎಂದು ಅಂದಿನ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಕಳೆದ ವರ್ಷ ಹೇಳಿದ್ದರು.

ಅಟಲ್‌ಜೀ ಕನಸು ಮೋದಿ ಕಾಲದಲ್ಲಿ ನನಸು
2002ರಲ್ಲಿ ಅಂದಿನ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಅವರು ತಮ್ಮ ಭಾಷಣದಲ್ಲಿ ನದಿ ಜೋಡಣೆಯ ಬಗ್ಗೆ ಉಲ್ಲೇಖೀಸಿದ್ದರು. 2002ರ ಅಕ್ಟೋಬರ್‌ನಲ್ಲಿ ನದಿ ಜೋಡಣೆಯ ಕಾರ್ಯ ಆರಂಭಿಸಬೇಕೆಂದು ಸುಪ್ರಿಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಇದನ್ನು ರಾಜಕೀಯ ಅವಕಾಶವಾಗಿ ಬಳಸಿ ಕೊಂಡ ಅಂದಿನ ಪ್ರಧಾನಿ ದಿ. ಅಟಲ್‌ ಬಿಹಾರಿ ವಾಜಪೇಯಿ ಅವರು ಸಂಸತ್ತಿನಲ್ಲಿ ನದಿ ಜೋಡಣೆ ಯೋಜನೆಯನ್ನು ಘೋಷಿಸಿದ್ದರು. ಆದರೆ, ಯೋಜನೆ ಕೈಗೆತ್ತಿಕೊಳ್ಳುವ ಮೊದಲೇ ಅಟಲ್‌ಜೀ ಸರ್ಕಾರದ ಅವಧಿ ಮುಗಿದ ಕಾರಣ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ನಂತರ ಬಂದ ಮನಮೋಹನ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಈ ಯೋಜನೆಯ ಕುರಿತು ಆಸಕ್ತಿ ವಹಿಸಲಿಲ್ಲ. ಈಗ ಪ್ರಧಾನಿ ಮೋದಿ ಸರ್ಕಾರ ಡಿಆರ್​ಪಿ ಕರುಡು ಸಿದ್ಧಪಡಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.