ಮುಂಬೈ: 2021ರ ಮಾರ್ಚ್ 31ರೊಒಳಗೆ ಎಲ್ಲಾ ಖಾತೆಗಳು ಆಯಾ ಗ್ರಾಹಕರ ಆಧಾರ್ ಸಂಖ್ಯೆಗಳ ಜತೆ ಸಂಪರ್ಕ ಹೊಂದಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ.
ಹಣಕಾಸಿನ ಸೇರ್ಪಡೆ ಕಥೆ ಇನ್ನು ಮುಗಿದಿಲ್ಲ. ಬ್ಯಾಂಕ್ಗಳು ಇನ್ನೂ ಮುಂದೆ ತೆಗೆದುಕೊಂಡು ಹೋಗಲು ಜೋಡಿಸಬೇಕು. ಆಧಾರ್ ಜತೆಗೆ ಜೋಡಣೆ ಮಾಡದ ಅನೇಕ ಖಾತೆಗಳಿವೆ ಎಂದರು.
2021ರ ಮಾರ್ಚ್ 31ರ ಹೊತ್ತಿಗೆ ಪ್ರತಿ ಖಾತೆಗಳಿಗೆ ಪ್ಯಾನ್ ನಂಬರ್ ಜೋಡಣೆ ಆಗಿರಬೇಕು. ನಿಮ್ಮ ಪ್ರತಿಯೊಂದು ಖಾತೆಗಳಲ್ಲಿ ಆಧಾರ್ ಇರಬೇಕು ಎಂದು ಭಾರತೀಯ ಬ್ಯಾಂಕ್ಗಳ ಸಂಘದ (ಐಬಿಎ) 73ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೇಳಿದರು.
ಬ್ಯಾಂಕ್ಗಳು ಡಿಜಿಟಲ್ ರಹಿತ ಪಾವತಿಗಳನ್ನು ಕಡಿಮೆ ಮಾಡಬೇಕು. ಡಿಜಿಟಲ್ ಪಾವತಿ ವಹಿವಾಟಿನ ಪ್ರಚಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯುಪಿಐ ಚಾಲಿತ ಅನೇಕ ಪಾವತಿಗಳನ್ನು ಸಹ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಯುಪಿಐ ನಮ್ಮ ಎಲ್ಲ ಬ್ಯಾಂಕ್ಗಳಲ್ಲಿ ಸಾಮಾನ್ಯ ಸಂಭಾಷಣೆಯ ಪದವಾಗಿರಬೇಕು. ಬ್ಯಾಂಕ್ಗಳು ರುಪೇ ಕಾರ್ಡ್‌ಗಳನ್ನು ಉತ್ತೇಜಿಸಬೇಕು. ಯಾರಿಗೆ ಕಾರ್ಡ್ ಬೇಕಾದರೂ, ನೀವು ಉತ್ತೇಜಿಸುವ ಏಕೈಕ ಕಾರ್ಡ್ ರುಪೇ ಆಗಿರಲಿ. ದೇಶವು ದೊಡ್ಡ ಬ್ಯಾಂಕ್‌ಗಳಿಗೆ ಎದುರು ನೋಡುತ್ತಿದ್ದೆ ಎಂದು ಸೀತಾರಾಮನ್ ಹೇಳಿದರು.