ETV Bharat / business

ಮೋದಿ 2.0 ಸರ್ಕಾರದ 2ನೇ ಬಜೆಟ್​​ ಸಿದ್ಧತೆ ಶುರು... ಅಧಿಕಾರಿಗಳು ಕೊಟ್ರು ಮಹತ್ವದ ಸುಳಿವು - 2020-21ರ ಬಜೆಟ್

ಬಜೆಟ್ ಪೂರ್ವ/ ಪರಿಷ್ಕೃತ ಅಂದಾಜು ಕುರಿತ ಸಭೆಗಳು ಅಕ್ಟೋಬರ್ 14ರಿಂದ ಆರಂಭವಾಗಲಿವೆ. ಎಲ್ಲ ಹಣಕಾಸು ಸಲಹೆಗಾರರು ಈ ಸಭೆಗಳಿಗೆ ಸಂಬಂಧಿಸಿದ ಅಗತ್ಯ ವಿವರಗಳನ್ನು ಪರಿಷ್ಕೃತ ಮಾದರಿಯಲ್ಲಿ ನಮೂದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ದತ್ತಾಂಶಗಳು ಬಜೆಟ್ ಪೂರ್ವ ಚರ್ಚೆಗಳಿಗೆ ಆಧಾರವಾಗಿರುತ್ತವೆ ಎಂದು ಆರ್ಥಿಕ ಇಲಾಖೆ ಆಯವ್ಯಯ ವಿಭಾಗ ಬಜೆಟ್ ಸುತ್ತೋಲೆ (2020-21) ಹೊರಡಿಸಿ ಸೂಚಿಸಿದೆ. ಮುಂಬರುವ ಬಜೆಟ್​ನಲ್ಲಿ ಲಿಂಗಾನುಪಾತ ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಆದ್ಯತೆ ಸಿಗಲಿದೆ ಎಂಬ ಸುಳಿವನ್ನು ಅಧಿಕಾರಿಗಳು ನೀಡಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Oct 3, 2019, 12:03 PM IST

ನವದೆಹಲಿ: ಹಣಕಾಸು ಸಚಿವಾಲಯವು ಅಕ್ಟೋಬರ್ 14ರಿಂದ ನವೆಂಬರ್ ಮೊದಲ ವಾರದವರೆಗೆ ಬಜೆಟ್ ಪೂರ್ವ ಮತ್ತು ಪರಿಷ್ಕೃತ ಅಂದಾಜು ಕುರಿತು ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಬಜೆಟ್ ಪೂರ್ವ/ ಪರಿಷ್ಕೃತ ಅಂದಾಜು ಕುರಿತ ಸಭೆಗಳು ಅಕ್ಟೋಬರ್ 14ರಿಂದ ಆರಂಭವಾಗಲಿವೆ. ಎಲ್ಲ ಹಣಕಾಸು ಸಲಹೆಗಾರರು ಈ ಸಭೆಗಳಿಗೆ ಸಂಬಂಧಿಸಿದ ಅಗತ್ಯ ವಿವರಗಳನ್ನು ಪರಿಷ್ಕೃತ ಮಾದರಿಯಲ್ಲಿ ನಮೂದಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ದತ್ತಾಂಶಗಳು ಬಜೆಟ್ ಪೂರ್ವ ಚರ್ಚೆಗಳಿಗೆ ಆಧಾರವಾಗಿರುತ್ತವೆ ಎಂದು ಆರ್ಥಿಕ ಇಲಾಖೆಯ ಆಯವ್ಯಯ ವಿಭಾಗ ಬಜೆಟ್ ಸುತ್ತೋಲೆ (2020-21) ಹೊರಡಿಸಿ ಸೂಚಿಸಿದೆ.

ಕಾರ್ಯದರ್ಶಿ, ಖರ್ಚು ವಿಭಾಗ ಮತ್ತು ಹಣಕಾಸು ಸಲಹೆಗಾರರೊಂದಿಗೆ ಚರ್ಚೆ ನಡೆಸಿದ ಬಳಿಕ 2020-21ರ ಬಜೆಟ್ ಅಂದಾಜುಗಳನ್ನು ತಾತ್ಕಾಲಿಕವಾಗಿ ಅಂತಿಮಗೊಳಿಸಲಾಗುತ್ತದೆ. ಬಜೆಟ್ ಪೂರ್ವ ಸಭೆಗಳು ಅಕ್ಟೋಬರ್ 14 ರಿಂದ ಆರಂಭವಾಗಿ ನವೆಂಬರ್ ಮೊದಲ ವಾರದವರೆಗೂ ನಡೆಯಲಿವೆ. ಮುಂಬರುವ ಬಜೆಟ್​ನಲ್ಲಿ ಲಿಂಗಾನುಪಾತ ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಆದ್ಯತೆ ಸಿಗಲಿದೆ ಎಂಬ ಸುಳಿವನ್ನು ಅಧಿಕಾರಿಗಳು ನೀಡಿದ್ದಾರೆ.

ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ), ಲಿಂಗಾನುಪಾತ, ಮಕ್ಕಳು ಸೇರಿದಂತೆ ಬಜೆಟ್​ಗೆ ಸಂಬಂಧಿಸಿದ ಇತರ ಹೊಸ ವಿಷಯಗಳನ್ನು ಸುತ್ತೋಲೆಯಲ್ಲಿ ಸೇರ್ಪಡೆ ಮಾಡಲಾಗಿದೆ. 2020-21ರ ಬಜೆಟ್​ನಲ್ಲಿ ಇವುಗಳಿಗೆ ಹೆಚ್ಚಿನ ಅನುದಾನ ಸಿಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.