ETV Bharat / business

ದೇಶಾದ್ಯಂತ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅಸ್ತು: ’ರೈತರಿಂದಲೇ ಬೆಲೆ ನಿಗದಿ ಕಾಯ್ದೆ’ - ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ಕೊರೊನಾ ವೈರಸ್ ಮತ್ತು ಲಾಕ್​ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಎಂಎಸ್​ಎಂಇ, ತೆರಿಗೆದಾರರು, ರಿಯಲ್​ ಎಸ್ಟೇಟ್​, ವೇತನದಾರರು, ರೈತರು, ವಲಸೆ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ನಿನ್ನೆ ನಿರ್ಮಲಾ ಸೀತಾರಾಮನ್ ಪರಿಹಾರ ಪ್ಯಾಕೇಜ್‌ ಅನ್ನು ಪ್ರಕಟಿಸಿದ್ದರು. ಇಂದು ಕೂಡ ಹಲವು ಪ್ರಮುಖ ಯೋಜನೆಗಳನ್ನು, ಅನುದಾನಗಳನ್ನು ಪ್ರಕಟಿಸಿದ್ದರು.

Finance Minister
ನಿರ್ಮಲಾ ಸೀತಾರಾಮನ್
author img

By

Published : May 15, 2020, 5:27 PM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಜೆ 4 ಗಂಟೆಗೆ 2ನೇ ಹಂತದ ಆರ್ಥಿಕ ಪ್ಯಾಕೇಜ್​ ಹಂಚಿಕೆಯ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಅಗತ್ಯ ಸರಕುಗಳ ಕಾಯ್ದೆ (1955) ಅನ್ನು ತಿದ್ದುಪಡಿ ಮಾಡಲಾಗಿದೆ. ಬೆಳೆಗಳ ಸಮೃದ್ಧಿಯನ್ನು ನಿಭಾಯಿಸಲು ಸಿರಿಧಾನ್ಯ, ಖಾದ್ಯ ತೈಲ, ಎಣ್ಣೆ ಬೀಜ, ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಅನಿಯಂತ್ರಿತಗೊಳಿಸಬೇಕು. ಇವುಗಳ ಸಂಗ್ರಹಣೆಗೆ ಯಾವುದೇ ಸ್ಟಾಕ್ ಮಿತಿ ಅನ್ವಯಿಸುವುದಿಲ್ಲ ಎಂದು ಹೇಳಿದರು.

ಕೃಷಿ ಮಾರುಕಟ್ಟೆ ಸುಧಾರಣೆಯಡಿ ರೈತರಿಗೆ ಮಾರುಕಟ್ಟೆ ಆಯ್ಕೆಗಳನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ. ಆಕರ್ಷಕ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಸೂಕ್ತ ಆಯ್ಕೆ ಒದಗಿಸಲು ಕೇಂದ್ರ ಕಾನೂನನ್ನು ರೂಪಿಸಬೇಕು. ಅಂತಾರಾಜ್ಯ ವ್ಯಾಪಾರಕ್ಕೆ ಯಾವುದೇ ಅಡೆತಡೆಗಳು ಇಲ್ಲ. ಕೃಷಿ ಉತ್ಪನ್ನಗಳ ಇ - ವ್ಯಾಪಾರಕ್ಕಾಗಿ ಚೌಕಟ್ಟು ತರಲಾಗುವುದು. ಪ್ರಸ್ತುತ ರೈತರ ಕೃಷಿ ಉತ್ಪನ್ನಗಳನ್ನು ಎಪಿಎಂಸಿಗಳಲ್ಲಿ ಪರವಾನಗಿ ಪಡೆದವರಿಗೆ ಮಾತ್ರ ಮುದ್ರೆ ಅವಕಾಶವಿದೆ. ಕೈಗಾರಿಕಾ ಉತ್ಪನ್ನಗಳಿಗೆ ಅಂತಹ ನಿರ್ಬಂಧವಿಲ್ಲ ಎಂದರು.

ಬಿತ್ತನೆ ಸಮಯದಲ್ಲಿ ಬೆಳೆಗಳ ಊಹಿಸಬಹುದಾದ ಬೆಲೆಗಳಿಗೆ ರೈತರು ಜಾರಿಗೊಳಿಸಬಹುದಾದ ಪ್ರಮಾಣಿತ ಕಾರ್ಯವಿಧಾನವನ್ನು ಹೊಂದಿರುವುದಿಲ್ಲ. ಖಾಸಗಿ ವಲಯದ ಒಳಹರಿವು ಮತ್ತು ಹೂಡಿಕೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅಡ್ಡಿಯಾಗಿದೆ. ಸಂಸ್ಕರಣೆ, ಸಂಗ್ರಹಣೆ, ದೊಡ್ಡ ಚಿಲ್ಲರೆ ವ್ಯಾಪಾರಿಗಳು, ರಫ್ತುದಾರರೊಂದಿಗೆ ತೊಡಗಿಸಿಕೊಳ್ಳಲು ರೈತರಿಗೆ ಅನುಕೂಲವಾಗುವಂತ ಕಾನೂನು ಚೌಕಟ್ಟನ್ನು ರಚಿಸಲಾಗುವುದು. ರೈತರಿಗೆ ಅಪಾಯವನ್ನು ತಗ್ಗಿಸುವುದು, ಆಶ್ವಾಸಿತ ಆದಾಯ ಮತ್ತು ಗುಣಮಟ್ಟ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ರೈತರಿಗೆ ತಮ್ಮದೇ ಆದ ಬೆಲೆ ನಿಗದಿಗೆ ನೆರವಾಗುವಂತಹ ಕಾನೂನು ಚೌಕಟ್ಟು ತರಲಾಗುವುದು. ಬಿತ್ತನೆ ಮಾಡುವ ಮೊದಲು ರೈತರಿಗೆ ಖಚಿತವಾದ ಬೆಲೆ ರಿಟರ್ನ್ ಪ್ರಮಾಣ, ಕೃಷಿ ತಂತ್ರಜ್ಞಾನ ಮತ್ತು ಮಾರಾಟದ ಅವಕಾಶಗಳ ಲಭ್ಯತೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.

ಔಷಧೀಯ ಸಸ್ಯಗಳ ಕೃಷಿ ಅಡಿಯಲ್ಲಿ 2.25 ಲಕ್ಷ ಹೆಕ್ಟೇರ್ ಪ್ರದೇಶವನ್ನು ರಾಷ್ಟ್ರೀಯ ಔಷಧೀಯ ಸಸ್ಯ ಮಂಡಳಿ ನೆರವಾಗಲಿದೆ. ಮುಂದಿನ 2 ವರ್ಷಗಳಲ್ಲಿ 10,000 ಹೆಕ್ಟೇರ್ ಗಿಡಮೂಲಿಕೆ ಕೃಷಿಯ ವ್ಯಾಪ್ತಿಯಲ್ಲಿ 4,000 ಕೋಟಿ ರೂ. ಮೀಸಲಿಡಲಾಗಿದೆ. ಎನ್‌ಎಂಪಿಬಿ ಗಂಗಾ ನದಿಯ ದಡದಲ್ಲಿ ಔಷಧೀಯ ಕಾರಿಡಾರ್ ಅನ್ನು ಅಭಿವೃದ್ಧಿಪಡಿಲು 800 ಹೆಕ್ಟೇರ್ ಪ್ರದೇಶ ಮೀಸಲಿಡಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.