ETV Bharat / business

ರಫ್ತು ವಲಯಕ್ಕೆ ತಕ್ಷಣವೇ ಪ್ಯಾಕೇಜ್​ ಅವಶ್ಯಕತೆ: ಇಲ್ಲದಿದ್ದರೆ 15 ದಶಲಕ್ಷ ನಿರುದ್ಯೋಗ ಸೃಷ್ಟಿ ಭೀತಿ

50 ಪ್ರತಿಶತದಷ್ಟು ಆದೇಶಗಳನ್ನು ರದ್ದುಗೊಳಿಸಲಾಗಿದೆ. ಭವಿಷ್ಯದ ಮುನ್ಸೂಚನೆ ಕತ್ತಲೆಯಾಗಿದ್ದು, ರಫ್ತು ಉದ್ಯಮದಲ್ಲಿ 15 ಮಿಲಿಯನ್ ಉದ್ಯೋಗ ನಷ್ಟ ಆಗಬಹುದು. ರಫ್ತು ಘಟಕಗಳ ನಡುವೆ ಹೆಚ್ಚುತ್ತಿರುವ ಎನ್‌ಪಿಎಗಳು ಆರ್ಥಿಕತೆಯ ಮೇಲೆ ಕೆಟ್ಟದಾದ ಹೊಡೆತ ಕೊಡಬಹುದು ಎಂಬ ನಿರೀಕ್ಷೆ ಇದೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶರದ್ ಕುಮಾರ್ ಸರಾಫ್ ಹೇಳಿದರು.

Coronavirus pandemic
ಕೊರೊನಾ ವೈರಸ್
author img

By

Published : Apr 11, 2020, 11:41 PM IST

ನವದೆಹಲಿ: ತಕ್ಷಣದ ಪರಿಹಾರ ಕ್ರಮಗಳನ್ನು ಘೋಷಿಸದ ಹೊರತು ರಫ್ತು ವಲಯದಲ್ಲಿ 15 ದಶಲಕ್ಷಕ್ಕೂ ಹೆಚ್ಚು ಜನ ತಮ್ಮ ಉದ್ಯೋಗ ಕಳೆದುಕೊಳ್ಳಬಹುದು ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ ತಿಳಿಸಿದೆ.

ಎಫ್‌ಐಇಒ ಅಧ್ಯಕ್ಷ ಶರದ್ ಕುಮಾರ್ ಸಾರಾಫ್ ಮಾತನಾಡಿ, ಪ್ರಸ್ತುತ ಜೀವನ ಮತ್ತು ಜೀವನೋಪಾಯದ ನಡುವೆ ಉತ್ತಮವಾದ ಸಮತೋಲನ ಅಗತ್ಯವಾಗಿದೆ. ಕೇವಲ ಒಂದೇ ಆಯ್ಕೆಯನ್ನು ಆರಿಸುವುದು ದೇಶಕ್ಕೆ ಹಾನಿಕಾರಕವಾಗಿದೆ ಎಂದರು.

ನಮಗೆ ಬಹಳ ಕಡಿಮೆ ಆದೇಶಗಳಿವೆ. ಅವುಗಳನ್ನು ಸಮಯೋಚಿತವಾಗಿ ಕಾರ್ಯಗತಗೊಳಿಸಲು ಕಾರ್ಖಾನೆಗಳು ಕನಿಷ್ಠ ಕಾರ್ಯಪಡೆಯೊಂದಿಗೆ ಕೆಲಸ ಮಾಡಲು ಅನುಮತಿಸದಿದ್ದರೆ. ಹಲವರು ಸರಿಪಡಿಸಲಾಗದಷ್ಟು ನಷ್ಟ ಅನುಭವಿಸಬೇಕಾಗುತ್ತೆ. ನಿಗದಿತ ವೆಚ್ಚದಲ್ಲಿ ಪೂರೈಸಬೇಕಾಗುವುದರಿಂದ ಅವುಗಳನ್ನು ಬಂದ್​ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತೆ ಎಂದು ಸಾರಾಫ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

50 ಪ್ರತಿಶತದಷ್ಟು ಆದೇಶಗಳನ್ನು ರದ್ದುಗೊಳಿಸಲಾಗಿದೆ. ಭವಿಷ್ಯದ ಮುನ್ಸೂಚನೆ ಕತ್ತಲೆಯಾಗಿದ್ದು, ರಫ್ತು ಉದ್ಯಮದಲ್ಲಿ 15 ಮಿಲಿಯನ್ ಉದ್ಯೋಗ ನಷ್ಟ ಆಗಬಹುದು. ರಫ್ತು ಘಟಕಗಳ ನಡುವೆ ಹೆಚ್ಚುತ್ತಿರುವ ಎನ್‌ಪಿಎಗಳು ಆರ್ಥಿಕತೆಯ ಮೇಲೆ ಕೆಟ್ಟದಾದ ಹೊಡೆತ ಕೊಡಬಹುದು ಎಂಬ ನಿರೀಕ್ಷೆ ಇದೆ ಎಂದರು.

ಯಾವುದೇ ವಿಳಂಬವು ದುರಂತವಾಗುವ ಮುನ್ನ ರಫ್ತು ಉದ್ಯಮಕ್ಕೆ ಪರಿಹಾರ ತಕ್ಷಣವೇ ಪ್ಯಾಕೇಜ್ ಘೋಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ವೇತನ, ಬಾಡಿಗೆ ಮತ್ತು ಅಗತ್ಯ ವೆಚ್ಚ ಭರಿಸಲು ರಫ್ತುದಾರರಿಗೆ ಬಡ್ಡಿರಹಿತ ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಸಾಲ ನೀಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.