ETV Bharat / business

ಕೊರೊನಾ ಸೋಂಕು ಮೀರಿ ಒಂದು ವರ್ಷದಲ್ಲಿ ಆರ್ಥಿಕತೆ ಸುಧಾರಿಸುತ್ತೆ: ನೊಬೆಲ್ ಪುರಸ್ಕೃತ ಬ್ಯಾನರ್ಜಿ - ಕೋವಿಡ್​ ಸಂಕಷ್ಟದ ಆರ್ಥಿಕ ಚೇತರಿಕೆ

ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಸೋಂಕಿನಿಂದ ಸುರಕ್ಷತೆಯೂ ಸಹ ಮುಖ್ಯವಾಗಿದೆ. ಒಂದು ವರ್ಷದಲ್ಲಿ ನಾವು ಸುಧಾರಿತ ಉದ್ಯೋಗ ಮಾರುಕಟ್ಟೆಗೆ ನೆರವಾಗಲು ಹೆಚ್ಚಿನ ಪ್ರಮಾಣದಲ್ಲಿ ಮರುಸ್ಥಾಪನೆಯಿಂದ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ನೊಬೆಲ್ ಪುರಸ್ಕೃತ ಬ್ಯಾನರ್ಜಿ ಹೇಳಿದರು.

Abhijit Banerjee
ಅಭಿಜಿತ್ ಬ್ಯಾನರ್ಜಿ
author img

By

Published : Oct 21, 2020, 5:20 AM IST

ಕೋಲ್ಕತಾ: ರಾಜ್ಯದ ದುರ್ಗಾ ಪೂಜಾ ಸಮಿತಿಗಳಿಗೆ ತಲಾ 50,000 ರೂ. ನೀಡುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಬೆಂಬಲಿಸಿದ್ದಾರೆ. 'ಕೋವಿಡ್​-19 ಸುರಕ್ಷತಾ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ಸಂಘಟಕರಿಗೆ ಹೆಚ್ಚುವರಿ ಮೊತ್ತದ ಅಗತ್ಯವಿದೆ' ಎಂದು ಹೇಳಿದ್ದಾರೆ.

ಕೋವಿಡ್​ -19 ಸಮಯದಲ್ಲಿ ರಾಜ್ಯದ 36,946 ಸಮುದಾಯ ದುರ್ಗಾ ಪೂಜಾ ಸಮಿತಿಗಳಿಗೆ ತಲಾ 50,000 ರೂ. ಅನುದಾನವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೆಪ್ಟೆಂಬರ್ 24ರಂದು ಘೋಷಿಸಿದ್ದರು. ಇದಕ್ಕೆ ಹಲವರು ಟೀಕಿಸಿ, ಕೋಲ್ಕತ್ತಾ ಹೈಕೋರ್ಟ್‌ನಲ್ಲಿಯೂ ಪ್ರಶ್ನಿಸಿದರು.

2019ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಅರ್ಥಶಾಸ್ತ್ರಜ್ಞ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ.

ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಪೂಜಾ ಸಮಿತಿಗಳ ಹೆಚ್ಚುವರಿ ವೆಚ್ಚವನ್ನು ಗಮನದಲ್ಲಿ ಇಟ್ಟುಕೊಂಡು ತೆಗೆದುಕೊಂಡ ಈ ತೀರ್ಮಾನ ಕೆಟ್ಟ ನಿರ್ಧಾರವಲ್ಲ ಎಂದು ಸುದ್ದಿ ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೋವಿಡ್ ಸುರಕ್ಷತಾ ಸಾಧನಗಳು ಖರೀದಿಸುವಂತಹ ಮತ್ತು ಜಾತ್ಯತೀತ ಉದ್ದೇಶ ಹಾಗೂ ಸಾರ್ವಜನಿಕ-ಪೊಲೀಸ್ ಸಹಭಾಗಿತ್ವಕ್ಕಾಗಿ ಈ ಅನುದಾನವಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಕೋವಿಡ್​-19 ಹರಡುವುದನ್ನು ತಡೆಗಟ್ಟಲು ರಾಜ್ಯಾದ್ಯಂತ ಎಲ್ಲಾ ದುರ್ಗಾ ಪೂಜಾ ಪ್ರವೇಶ ದ್ವಾರದಲ್ಲಿ ಸೋಂಕು ನಿವಾರಕ ಸಿಂಪರಣೆ ಟನಲ್​ ನಿರ್ಮಿಸುವಂತೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಕೋವಿಡ್​-19 ಸಾಂಕ್ರಾಮಿಕ ಪ್ರೇರಿತ ಮಂದಗತಿಯನ್ನು ಮೀರಿ ಒಂದು ವರ್ಷದಲ್ಲಿ ಭಾರತೀಯ ಆರ್ಥಿಕತೆಯು ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂದು ಭರವಸೆ ವ್ಯಕ್ತಪಡಿಸಿದರು.

ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಸೋಂಕಿನಿಂದ ಸುರಕ್ಷತೆಯೂ ಸಹ ಮುಖ್ಯವಾಗಿದೆ. ಒಂದು ವರ್ಷದಲ್ಲಿ ನಾವು ಸುಧಾರಿತ ಉದ್ಯೋಗ ಮಾರುಕಟ್ಟೆಗೆ ನೆರವಾಗಲು ಹೆಚ್ಚಿನ ಪ್ರಮಾಣದಲ್ಲಿ ಮರುಸ್ಥಾಪನೆಯಿಂದ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬ್ಯಾನರ್ಜಿ ಹೇಳಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.