ETV Bharat / business

ಕೇಂದ್ರ ಸರ್ಕಾರ ಬಂಡವಾಳ ಹೂಡಿಕೆಯನ್ನು ಲಾಭ, ನಷ್ಟದ ಮೇಲೆ ನಿರ್ಧರಿಸಲ್ಲ: ಸಚಿವ ಅನುರಾಗ್ ಠಾಕೂರ್

ಶಿವಸೇನೆ ಸಂಸದ ಸಂಜಯ್ ರಾವ​ತ್ ಅವರು ರಾಜ್ಯಸಭೆಯಲ್ಲಿ 'ಲಾಭ ಗಳಿಸುವ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿನ ಷೇರು ಮಾರಾಟ' ಕುರಿತು ಪ್ರಶ್ನಿಸಿದ್ದರು. ಇದಕ್ಕೆ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್​ ಮೌಖಿಕ ಉತ್ತರ ನೀಡಿದ್ರು.

Minister of State for Finance Anurag Thakur
ಅನುರಾಗ್ ಠಾಕೂರ್
author img

By

Published : Dec 10, 2019, 4:59 PM IST

ನವದೆಹಲಿ: ಲಾಭ ಗಳಿಸುವ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿನ ಷೇರು ಮಾರಾಟ ಕುರಿತು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರ ಸ್ಪಷ್ಟನೆ ಕೊಟ್ಟಿದೆ. 'ಹೂಡಿಕೆಯ ಮಾನದಂಡಗಳು ಲಾಭ ಅಥವಾ ನಷ್ಟದ ಮೇಲೆ ನಿರ್ಧರಿಸಲ್ಲ' ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಮೌಖಿಕ ಉತ್ತರ ನೀಡಿದ್ರು.

ಶಿವಸೇನೆ ಸಂಸದ ಸಂಜಯ್ ರಾವ​ತ್ ಅವರ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್, ಹೂಡಿಕೆಯ ಮಾನದಂಡಗಳನ್ನು ನೀತಿ ಆಯೋಗ ನಿಗದಿಪಡಿಸಿದೆ. ಅದು ಲಾಭ ಅಥವಾ ನಷ್ಟದ ಆಧಾರದ ಮೇಲೆ ಅಲ್ಲ ಎಂದು ಪ್ರತಿಕ್ರಿಯಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್

ರಾಷ್ಟ್ರೀಯ ಭದ್ರತೆ, ಸ್ವತಂತ್ರ ಕಾರ್ಯಗಳು, ಮಾರುಕಟ್ಟೆಯ ಅಸ್ಥಿರತೆ ಹಾಗೂ ಸಾರ್ವಜನಿಕ ಹಿತಾಸಕ್ತಿಗಳ ಮೇಲೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಹೂಡಿಕೆ ನಿರ್ಧಾರವಾಗುತ್ತೆ. ಕೇಂದ್ರ ಸರ್ಕಾರ ಹೂಡಿಕೆಯ ನಿಯಮಗಳನ್ನು ಅನುಸರಿಸುವುದು ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ (ಸಿಪಿಎಸ್​ಇ) ಕಾರ್ಯತಂತ್ರದ ಮೇಲೆ ಎಂದು ಸಚಿವರು ಸ್ಪಷ್ಟಪಡಿಸಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.